ಬ್ಯಾಕ್ ಕಿಕ್-1986
ಮನಗೆದ್ದ ಅರ್ಜೆಂಟೀನಾ
ಡೀಗೊ ಮರಡೋನಾ ಸಾರಥ್ಯದಲ್ಲಿ ಅರ್ಜೆಂಟೀನಾ 1986ರಲ್ಲಿ ವಿಶ್ವ ಚಾಂಪಿಯನ್ ಪಟ್ಟವನ್ನೇರಿತು. ಈಡೀ ವಿಶ್ವಕಪ್ನಲ್ಲಿ ಎಲ್ಲರ ಗಮನ ಸೆಳೆದ ಮರಡೋನಾ ವಿಶ್ವಕಪ್ನ ಹೀರೊ ಆದರು. ಫೈನಲ್ ಪಂದ್ಯದಲ್ಲಿ ಪಶ್ಚಿಮ ಜರ್ಮನಿ ವಿರುದ್ಧ 3-2 ಗೋಲುಗಳ ಅಂತರದಲ್ಲಿ ಗೆಲವು ಗಳಿಸಿತು. ಈ ಮೂಲಕ ಎರಡನೇ ಬಾರಿಗೆ ವಿಶ್ವಕಪ್ ಅನ್ನು ಎತ್ತಿ ಹಿಡಿಯಿತು. ಈ ಪಂದ್ಯವಾಳಿಯನ್ನು ಮೊದಲು ಕೊಲಂಬಿಯಾದಲ್ಲಿ ಆಯೋಜಿಸಲು ನಿರ್ಧರಿಸಲಾಗಿತ್ತಾದರೂ, ಅತಿಯಾದ ಆರ್ಥಿಕ ಸಮಸ್ಯೆಯಿಂದಾಗಿ ಕೊಲಂಬಿಯಾ ಟೂರ್ನಿಯ ಆತಿಥ್ಯ ವಹಿಸಲು ಸಾಧ್ಯವಾಗಲಿಲ್ಲ. ನಂತರ ಈ ಅವಕಾಶ ಮೆಕ್ಸಿಕೊ ಪಾಲಾಯಿತು. ಈ ಪಂದ್ಯಾವಳಿಯಲ್ಲೂ 24 ತಂಡಗಳು ಭಾಗವಹಿಸಿದ್ದು, ಒಟ್ಟು 52 ಪಂದ್ಯಗಳು ನಡೆದು 132 ಗೋಲುಗಳು ದಾಖಲಾದವು. ಪಂದ್ಯಾವಳಿಯಲ್ಲಿ ಇಂಗ್ಲೆಂಡ್ನ ಗ್ಯಾರಿ ಲಿಂಕ್ನರ್ 6 ಗೋಲು ದಾಖಲಿಸಿದರಾದರೂ, ಟೂರ್ನಿಯಲ್ಲಿ ಅತ್ಯುತ್ತಮ ಆಟಗಾರನಾಗಿ ಆಯ್ಕೆಯಾಗಿದ್ದು, ಡೀಗೊ ಮರಡೋನಾ. <
1990
ಪಶ್ಚಿಮ ಜರ್ಮನಿಗೆ ಜಯ
ಇಟಲಿ ನೆಲದಲ್ಲಿ ನಡೆದ ಎರಡನೇ ವಿಶ್ವಕಪ್ ಪಂದ್ಯಾವಳಿ ಇದಾಗಿದ್ದು, ಈ ವಿಶ್ವಕಪ್ ಅನ್ನು ಮೊದಲ ಬಾರಿಗೆ ಇಟಲಿ ಹಾಗೂ ಜಪಾನ್ ಬ್ರಾಡ್ಕಾಸ್ಟರ್ಗಳು ಅಧಿಕೃತವಾಗಿ ಎಚ್ಡಿಟಿವಿಯಲ್ಲಿ ದಾಖಲಿಸಿ ಪ್ರಸರಣ ಮಾಡಲಾಯಿತು. ಈ ಟೂರ್ನಿಯ ಫೈನಲ್ ಪಂದ್ಯದಲ್ಲಿ ಪಶ್ಚಿಮ ಜರ್ಮನಿ ತಂಡ ಹಾಲಿ ಚಾಂಪಿಯನ್ ಅರ್ಜೆಂಟೀನಾ ತಂಡವನ್ನು 1-0 ಗೋಲುಗಳ ಅಂತರದಲ್ಲಿ ಮಣಿಸುವ ಮೂಲಕ ಪ್ರಶಸ್ತಿಯನ್ನು ಬಾಚಿಕೊಂಡಿತು. ಈ ಟೂರ್ನಿಯ ಅರ್ಹತಾ ಸುತ್ತಿನಲ್ಲಿ ಒಟ್ಟು 116 ತಂಡಗಳು ಭಾಗವಹಿಸಿದ್ದು, 24 ತಂಡಗಳು ಪ್ರಮುಖ ಸುತ್ತಿಗೆ ಪ್ರವೇಶಿಸಿದ್ದವು. ಟೂರ್ನಿಯಲ್ಲಿ ಕೆಮರೂನ್ ತಂಡ ನೀಡಿದ ಪ್ರದರ್ಶನ ಎಲ್ಲರ ಅಚ್ಚರಿ ಮೂಡಿಸಿತು. ಆರಂಭಿಕ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಅರ್ಜೆಟೀನಾವನ್ನು ಮಣಿಸಿ ನಂತರ ಇಂಗ್ಲೆಂಡ್ ತಂಡವನ್ನು ನೆಲಕಚ್ಚಿಸಿ ಕ್ವಾರ್ಟರ್ಫೈನಲ್ ಪ್ರವೇಶಿಸಿ ವಿಶ್ವಮಟ್ಟದಲ್ಲಿ ಗುರುತಿಸಿಕೊಂಡಿತು. 562 ಪಂದ್ಯಗಳನ್ನಾಡಿ ಕೇವಲ 115 ಗೋಲುಗಳು ದಾಖಲಾಗಿತ್ತು, ಟೂರ್ನಿಯ ಬಹುತೇಕ ಪಂದ್ಯಗಳು 120 ನಿಮಿಷವಾಡಿದರೂ ರಕ್ಷಣಾತ್ಮಕ ಆಟದಿಂದ ಡ್ರಾ ಫಲಿತಾಂಶ ಪಡೆಯಿತು. ಹಾಗಾಗಿ ಅತ್ಯಂತ ಮಂದಗತಿಯ ವಿಶ್ವಕಪ್ ಎಂಬ ಹಣಪಟ್ಟಿ ಪಡೆಯಿತು. <
ರೆಫ್ರಿಗಳಿಗೆ ಪಂದ್ಯ ನಿಲ್ಲಿಸುವ ಅಧಿಕಾರ
ಬ್ರೆಜಿಲ್ನಲ್ಲಿ ಬಿಸಿಲಿನ ತಾಪ ಹೆಚ್ಚಾಗಿದೆ. ಅದರಲ್ಲೂ ಬ್ರೆಜಿಲ್ನ ಉತ್ತರ ಹಾಗೂ ಈಶಾನ್ಯ ಭಾಗಗಳಲ್ಲಿನ ಮಾನಸ್, ನಟಾಲ, ಫ್ರೊಟಲೆಜಾ, ಸಲ್ವಡೋರ್, ರೆಸಿಫಾ ತಾಪ ಅತಿ ಹೆಚ್ಚಿದೆ ಹಾಗಾಗಿ ಪಂದ್ಯದ ವೇಳೆ ತಾಪಮಾನದಲ್ಲಿ ಏರಿಕೆ ಉಂಟಾದರೆ, ವಿಶ್ರಾಂತಿ ಪಡೆಯಲು ಪಂದ್ಯವನ್ನು 2-3 ಬಾರಿ ನಿಲ್ಲಿಸುವ ಅವಕಾಶ ನೀಡಲಾಗಿದೆ. ಬ್ರೆಜಿಲ್ನ ದಕ್ಷಿಣ ಭಾಗದಲ್ಲಿ ವಾತಾವರಣ ತಂಪಾಗಿರುವ ಹಿನ್ನಲೆಯಲ್ಲಿ ಯಾವುದೇ ಸಮಸ್ಯೆ ಎದುರಾಗುವುದಿಲ್ಲ.
1986
ಆಟಗಾರರು ತಮ್ಮ ಜರ್ಸಿಗಳನ್ನು ಬದಲಾಯಿಸುವುದನ್ನು ಫೀಫಾ ಅಧಿಕೃತವಾಗಿ ನಿಷೇಧಿಸಿತು. ಕಾರಣ, ಕ್ರೀಡಾಂಗಣದಲ್ಲಿ ಆಟಗಾರರು ತಮ್ಮ ಎದೆಯನ್ನು ಪ್ರದರ್ಶಿಸುವುದು ಫೀಫಾಕ್ಕೆ ಬೇಡವಾಗಿತ್ತಂತೆ.