ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕ್ರೀಡೆ

ಮಲೇಷ್ಯಾ ಗೆಲ್ಲುವ ಕಾತರದಲ್ಲಿ ಭಾರತ

Rashmi Kasaragodu
Updated On : 7 Jun 2014, 12:23 pm

ದಿ ಹೇಗ್ (ಹಾಲೆಂಡ್): ವಿಶ್ವಕಪ್ ಹಾಕಿ ಪಂದ್ಯಾವಳಿಯಲ್ಲಿ ಇದುವರೆಗೂ ಜಯದ ಖಾತೆ ತೆರೆಯದಿರುವ ಭಾರತ ತಂಡ, ಶನಿವಾರ ನಡೆಯಲಿರುವ ಪಂದ್ಯದಲ್ಲಿ ಮಲೇಷ್ಯಾ ವಿರುದ್ಧ ಪೂರ್ಣ ಅಂಕ ಪಡೆಯಲು ಎದುರು ನೋಡುತ್ತಿದೆ.
ಅಲ್ಲದೆ, 'ಎ' ಗುಂಪಿನ ಅಂಕಪಟ್ಟಿಯ ಕೊನೆಯಲ್ಲಿ ಸ್ಥಾನ ಪಡೆದಿರುವ ತಂಡಗಳ ನಡುವಿನ ಪೈಪೋಟಿ ಇದಾಗಿದೆ. ಸ್ಪೇನ್ ವಿರುದ್ಧ ಡ್ರಾ ಸಾಧಿಸಿದ ಭಾರತ ಕೇವಲ 1 ಅಂಕ ಪಡೆದಿದ್ದರೆ, ಮಲೇಷ್ಯಾ ಇನ್ನೂ ಅಂಕಗಳ ಖಾತೆಯನ್ನೇ ತೆರೆದಿಲ್ಲ. ಹಿಂದಿನ ದಾಖಲೆ ಮತ್ತು ಸಾಧನೆಗಳನ್ನು ಪರಿಶೀಲಿಸಿದರೆ, ಪಂದ್ಯದಲ್ಲಿ ಭಾರತ ಗೆಲ್ಲುವ ಫೇವರಿಟ್. ಮಲೇಷ್ಯಾ ವಿರುದ್ಧದ ಪಂದ್ಯದಲ್ಲಿ ಪೂರ್ಣ ಅಂಕಗಳನ್ನು ಪಡೆಯಬೇಕು ಎಂಬ ಒತ್ತಡ ಸಹ ಭಾರತದ ಮೇಲೆ ಹೆಚ್ಚುತ್ತಿದೆ.
ಮೊದಲ ಎರಡು ಪಂದ್ಯಗಳಲ್ಲಿ ಸೋಲನುಭವಿಸಿದ್ದ ಭಾರತ ತಂಡ, ಮೂರನೇ ಪಂದ್ಯದಲ್ಲಿ ಸ್ಪೇನ್ ವಿರುದ್ಧ ಡ್ರಾ ಸಾಧಿಸುವ ಮೂಲಕ ತನ್ನ ವಿಶ್ವಾಸವನ್ನು ಹೆಚ್ಚಿಸಿಕೊಂಡಿದೆ. ಈ ಪಂದ್ಯದಲ್ಲಿ ಭಾರತ ಗೆದ್ದರೆ, 'ಎ' ಗುಂಪಿನ ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನ ಪಡೆಯುವುದರಿಂದ ತಪ್ಪಿಸಿಕೊಳ್ಳಬಹುದು.ಭಾರತ ತನ್ನ ಕೊನೆಯ ಲೀಗ್ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಆಸ್ಟ್ರೇಲಿಯಾ ವಿರುದ್ಧ ಸೆಣಸಲಿದೆ. ಇನ್ನು ಮೊನಚಿಲ್ಲದ ಪ್ರದರ್ಶನ ನೀಡುತ್ತಿರುವ ಮಲೇಷ್ಯಾ, ಸ್ಪೇನ್ ವಿರುದ್ಧ ತನ್ನ ಅಂತಿಮ ಲೀಗ್ ಪಂದ್ಯದಲ್ಲಿ ಸೆಣಸಲಿದೆ. ಮಲೇಷ್ಯಾ ವಿರುದ್ಧ ಗೆಲ್ಲುವ ವಿಶ್ವಾಸ ಹೊಂದಿರುವ ಭಾರತ ತಂಡದ ನಾಯಕ ಸರ್ದಾರ್ ಸಿಂಗ್ ಅವರಿಗೆ, ಸ್ಪೇನ್ ವಿರುದ್ಧ 1-1 ಗೋಲುಗಳಿಂದ ಡ್ರಾ ಸಾಧಿಸಿದ್ದು ಬೇಸರ ಉಂಟುಮಾಡಿತ್ತಂತೆ.
ಇಂಗ್ಲೆಂಡ್ ಮತ್ತು ಸ್ಪೇನ್ ವಿರುದ್ಧ ಭಾರತ ಅತ್ಯುತ್ತಮ ಪ್ರದರ್ಶನ ನೀಡಿದೆ ಎಂಬುದು ಸರ್ದಾರ್ ಸಿಂಗ್ ಅಂಬೋಣ. ಆದರೆ, ಈ ಎರಡೂ ಪಂದ್ಯಗಳಲ್ಲಿ ಗೆಲ್ಲದಿರುವುದು ಭಾರತ ತಂಡದ ದುರಾದೃಷ್ಟ ಎಂದಿದ್ದಾರೆ. 'ಮಲೇಷ್ಯಾ ವಿರುದ್ಧ ನಡೆಯಲಿರುವ ಪಂದ್ಯದಲ್ಲಿ ನಮ್ಮ ಮೊದಲ ಜಯ ಕಂಡುಕೊಳ್ಳುವ ಕಾತರದಲ್ಲಿ ಎದುರು ನೋಡುತ್ತಿದ್ದೇವೆ. ನಮ್ಮ ಆಟಗಾರರು ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಲಿದ್ದಾರೆ' ಎಂದು ಸರ್ದಾರ್ ಸಿಂಗ್ ಅಭಿಪ್ರಾಯಪಟ್ಟಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement