ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕ್ರೀಡೆ

ಮಹಿಳಾ ತಂಡಕ್ಕೆ ರಿತು ರಾಣಿಯ ಸಾರಥ್ಯ

Rashmi Kasaragodu
Updated On : 7 Jun 2014, 12:23 pm

ನವದೆಹಲಿ: ಮುಂಬರುವ ಕಾಮನ್ವೆಲ್ತ್ ಗೇಮ್ಸ್ ಮತ್ತು ಏಷ್ಯನ್ ಗೇಮ್ಸ್ಗಳಿಗಾಗಿ ಸಿದ್ಧತೆ ಮಾಡಿಕೊಳ್ಳಲು ಭಾರತದ ವನಿತೆಯರ ತಂಡ ಮಲೇಷಿಯಾ ಪ್ರವಾಸ ಕೈಗೊಳ್ಳಲಿದೆ. ಸಂಪರ್ಕ ಆಟಗಾರ್ತಿ ರಿತು ರಾಣಿ ನಾಯಕತ್ವದಲ್ಲಿ 21 ಸದಸ್ಯರ ಭಾರತ ಮಹಿಳಾ ತಂಡವನ್ನು ಪ್ರಕಟಿಸಲಾಗಿದ್ದು, ಜೂನ್ 7ರಿಂದ 17ರ ವರೆಗೆ ಮಲೇಷಿಯಾ ವಿರುದ್ಧ ಕೌಲಾಲಂಪುರದಲ್ಲಿ ಒಟ್ಟು 6 ಪಂದ್ಯಗಳನ್ನು ಆಡಲಾಗುತ್ತದೆ. ರಕ್ಷಣಾ ಆಟಗಾರ್ತಿ ದೀಪಿಕಾ ತಂಡದ ಉಪನಾಯಕಿಯಾಗಿದ್ದಾರೆ.  ಕಾಮನ್ವೆಲ್ತ್ ಗೇಮ್ಸ್ ಜುಲೈ 23ರಿಂದ ಆಗಸ್ಟ್ 3ರ ವರೆಗೆ ಗ್ಲಾಸ್ಗೊದಲ್ಲಿ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಉತ್ತಮ ತಯಾರಿ ಮಾಡಿಕೊಳ್ಳುವ ಉದ್ದೇಶದಿಂದ ಭಾರತ ತಂಡ ಮಲೇಷಿಯಾಕ್ಕೆ ತೆರಳುತ್ತಿದೆ.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement