ವಿಶೇಷ ಫಸ್ಟ್ ಕಿಕ್
ಈ ಬಾರಿಯ ವಿಶ್ವಕಪ್ ಪಂದ್ಯಾವಳಿಗೆ ಚಾಲನೆ ನೀಡುವ ಮೊದಲ ಕಿಕ್ ವಿಶೇಷವಾಗಿದೆ. ಹಾಗೆಂದು ಈ ಬಾರಿ ಮೊದಲ ಕಿಕ್ ಅನ್ನು ಯಾವುದೊ ಸೆಲೆಬ್ರಿಟಿ ಮಾಡಲಿದ್ದಾರೆ ಎಂದು ಭಾವಿಸಬೇಡಿ. ಕಾರಣ ಸೊಂಟದ ಕೆಳಗೆ ಪಾರ್ಶ್ವವಾಯುವಿಗೆ ಸಿಲುಕಿ ಸ್ವಲ್ಪ ಪ್ರಮಾಣದಲ್ಲಿ ಕಾಲಿನ ಸ್ವಾಧೀನ ಕಳೆದುಕೊಂಡಿರುವ ಯುವಕನೊಬ್ಬ ಈ ಬಾರಿ ಮೊದಲ ಕಿಕ್ ಮಾಡಲಿದ್ದಾರೆ. ಇದು ಈ ಬಾರಿಯ ವಿಶ್ವಕಪ್ನ ವಿಶೇಷ ಅಂಶಗಳಲ್ಲಿ ಒಂದಾಗಿದೆ. ಅವರು ಗಾಲಿ ಕುರ್ಚಿಯಿಂದ ಎದ್ದು ಕಿಕ್ ಮಾಡಲಿದ್ದಾರೆ. ಇಲ್ಲಿ ಮತ್ತೊಂದು ವಿಶೇಷವೆಂದರೆ, ಆತ ಮೈಂಡ್ ಕಂಟ್ರೊಲ್ ಎಕ್ಸೊಸ್ಕಿಲೆಟನ್ ಎಂಬ ಆವಿಷ್ಕರಿಸಿದ ಸಾಧನವನ್ನು ತೊಟ್ಟು ಕಿಕ್ ಮಾಡಲಿದ್ದಾನೆ. ಆತ ತನ್ನ ಕುರ್ಚಿಯಿಂದ ಎದ್ದು ಕಿಕ್ ಮಾಡಿದಾಗ ಅದರ ಅನುಭವವನ್ನು ಪಡೆಯಲಿದ್ದಾನೆ.