ವೈಫಲ್ಯಕ್ಕೆ ವಿದೇಶಿ ಕೋಚ್ ಹೊಣೆ: ಧನರಾಜ್ ಪಿಳ್ಳೈ
ಮುಂಬೈ: ಹಾಕಿ ವಿಶ್ವಕಪ್ ಪಂದ್ಯಾವಳಿಯಲ್ಲಿ ಭಾರತ ತಂಡ ನೀಡುತ್ತಿರುವ ಪ್ರದರ್ಶನ ನನಗೆ ಬೇಸರವನ್ನುಂಟು ಮಾಡಿದೆ. ಇದಕ್ಕೆ ಕಾರಣವಾಗಿರುವ ಕೋಚ್ ಟೆರ್ರಿ ವಾಲ್ಷ್ ಸೇರಿದಂತೆ ವಿದೇಶಿ ತಜ್ಞರನ್ನು ತೆಗೆದು ಹಾಕಬೇಕು ಎಂದು ಮಾಜಿ ನಾಯಕ ಧನರಾಜ್ ಪಿಳ್ಳೈ ಶುಕ್ರವಾರ ಅಭಿಪ್ರಾಯಪಟ್ಟಿದ್ದಾರೆ.
'ವಿಶ್ವಕಪ್ ಪಂದ್ಯಾವಳಿಯಲ್ಲಿ ನಾವು ವೈಫಲ್ಯ ಅನುಭವಿಸಿದ್ದೇವೆ. ಪ್ರದರ್ಶನಮಟ್ಟ ಹೆಚ್ಚಿಸುವ ನಿರ್ದೇಶಕ ರೋಲಂಟ್ ಓಲ್ಟ್ಮನ್ ತಂಡದೊಂದಿಗೆ ಇದ್ದಾರೆ. ಕೋಚ್ ಟೆರ್ರಿ ವಾಲ್ಷ್ ಕಳೆದ 8 ತಿಂಗಳಿಂದ ತಂಡದೊಂದಿಗೆ ಕಾರ್ಯನಿರ್ವಹಿಸುತ್ತಿದ್ದಾರೆ. ಆದರೆ, ಅವರ ಸೇವೆ ತಂಡಕ್ಕೆ ಲಾಭ ತಂದಿಲ್ಲ' ಎಂದಿದ್ದಾರೆ.