ಒಂದೇ ಹೊಸ ತಂಡ ಬೋಸ್ನಿಯಾ ಹಾಗೂ ಹೆರ್ಜೆಗೊವಿನಾ
ಪ್ರತಿ ಫಿಫಾ ವಿಶ್ವಕಪ್ನಲ್ಲಿ ಕೆಲವು ಹೊಸ ರಾಷ್ಟ್ರಗಳಿಗೆ ವಿಶ್ವಕಪ್ನಲ್ಲಿ ಆಡುವ ಅವಕಾಶವನ್ನು ನೀಡಲಾಗುತ್ತದೆ. ಆದರೆ ಇದೇ ಮೊದಲ ಬಾರಿಗೆ ಫಿಫಾ ವಿಶ್ವಕಪ್ನಲ್ಲಿ ಕೇವಲ ಒಂದು ತಂಡ ಪದಾರ್ಪಣೆ ಮಾಡುತ್ತಿದೆ. ಬೋಸ್ನಿಯಾ ಹಾಗೂ ಹೆರ್ಜೆಗೊವಿನಾ ಇದೇ ಮೊದಲ ಬಾರಿಗೆ ಅರ್ಹತೆ ಪಡೆದಿದ್ದು, ಯುಇಎಫ್ಎನ ಎಫ್ ಗುಂಪಿನಲ್ಲಿ ಅಗ್ರಸ್ಥಾನ ಪಡೆಯುವ ಮೂಲಕ ವಿಶ್ವಕಪ್ಗೆ ಆಯ್ಕೆಯಾಗಿದೆ.