ಜರ್ಮನಿಗೆ ಸ್ವಂತ ಹೊಟೇಲ್
ಫಿಫಾ ವಿಶ್ವಕಪ್‌ಗೆ ಕೆಲವು ತಂಡಗಳು ಕೆಲವು ಸೌಲಭ್ಯಗಳ ಬೇಡಿಕೆ ಇಡುವುದು ಸಹಜ, ಆದರೆ ಜರ್ಮನಿಯ ಬೇಡಿಕೆ...
ಫಿಫಾ ವಿಶ್ವಕಪ್‌ಗೆ ಕೆಲವು ತಂಡಗಳು ಕೆಲವು ಸೌಲಭ್ಯಗಳ ಬೇಡಿಕೆ ಇಡುವುದು ಸಹಜ, ಆದರೆ ಜರ್ಮನಿಯ ಬೇಡಿಕೆ ಮಾತ್ರ ಒಂದು ಹೆಜ್ಜೆ ಮುಂದೆ ಹೋಗಿದೆ. ಜರ್ಮನ್ ತಂಡಕ್ಕೆ ಅನುಕೂಲವಾಗುವಂತೆ ಆಟಗಾರರ ಕೊಠಡಿ, ತರಬೇತಿ ಸೌಲಭ್ಯ, ಪ್ರೆಸ್ ಕೇಂದ್ರ, ಅಭ್ಯಾಸ ಮಾಡಲು ಫುಟ್ಬಾಲ್ ಅಂಗಣ, ರೆಸ್ಟೋರೆಂಟ್‌ಗಾಗಿ ಜರ್ಮನಿ ತನ್ನದೇ ಆದ ಸ್ವಂತ ಹೊಟೇಲ್ ಅನ್ನು ಬಹಿಯಾದಲ್ಲಿ ನಿರ್ಮಿಸಿಕೊಂಡಿದೆ. ಬ್ರೆಜಿಲ್‌ನ ಸೌಲಭ್ಯದಿಂದ ಜರ್ಮನಿ ತೃಪ್ತಿ ಹೊಂದದ ಹಿನ್ನಲೆಯಲ್ಲಿ ಬಹಿಯಾದಲ್ಲಿ ಒಂದು ಪುಟ್ಟ ಕ್ರೀಡಾ ಗ್ರಾಮವನ್ನು ನಿರ್ಮಿಸಿದೆ. ಇಲ್ಲಿ 13 ಮನೆಗಳು ಹಾಗೂ 63 ಕೊಠಡಿಗಳನ್ನು ನಿರ್ಮಿಸಲಾಗಿದೆ. ಈ ಕಟ್ಟಡಗಳನ್ನು ಪ್ರಾಯೋಜಕತ್ವದಿಂದ ನಿರ್ಮಿಸಲಾಗಿದೆ