ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕ್ರೀಡೆ

100ನೇ ಪಂದ್ಯ ಆಡಲಿರುವ ಜರ್ಮನಿ

Rashmi Kasaragodu
Updated On : 9 Jun 2014, 1:09 am

ಜರ್ಮನಿ ತಂಡ ಈ ಬಾರಿಯ ವಿಶ್ವಕಪ್ನಲ್ಲಿ ತನ್ನ 100ನೇ ಫಿಫಾ ವಿಶ್ವಕಪ್ ಪಂದ್ಯವನ್ನಾಡಲಿದೆ. ಈ ಮೂಲಕ ಈ ಸಾಧನೆ ಮಾಡಿದ ಮೊದಲ ತಂಡವಾಗಿ ಹೊರ ಹೊಮ್ಮಲಿದೆ. ಜರ್ಮನಿ ಇದುವರೆಗೂ ಕೇವಲ 3 ವಿಶ್ವಕಪ್ ಗೆದ್ದಿದೆ. ಆದರೆ ಬ್ರೆಜಿಲ್ 5 ಬಾರಿ ವಿಶ್ವಕಪ್ ಗೆದ್ದಿದ್ದರೂ ಜರ್ಮನಿಗಿಂತ ಕಡಿಮೆ ಪಂದ್ಯವನ್ನಾಡಿದೆ. ಕಾರಣ ಜರ್ಮನಿ ತಂಡ ಬ್ರೆಜಿಲ್ಗಿಂತ ಹೆಚ್ಚು ಬಾರಿ ಸೆಮಿಫೈನಲ್ಗೆ ಪ್ರವೇಶಿಸಿದೆ. ಜರ್ಮನಿ 12 ಬಾರಿ ಉಪಾಂತ್ಯಕ್ಕೆ ಪ್ರವೇಶಿಸಿದ್ದರೆ, ಬ್ರೆಜಿಲ್ 10 ಬಾರಿ ಉಪಾಂತ್ಯಕ್ಕೆ ಪ್ರವೇಶಿಸಿದೆ. ಇನ್ನು ಜರ್ಮನಿ 1938ರ ವಿಶ್ವಕಪ್ ಹೊರತು ಪಡಿಸಿ ಉಳಿದ ಎಲ್ಲಾ ವಿಶ್ವಕಪ್ನಲ್ಲೂ ಕ್ವಾರ್ಟರ್ ಫೈನಲ್ಗೆ ಪ್ರವೇಶಿಸಿದೆ. ಜರ್ಮನಿ ತಂಡ ಟೂರ್ನಿಯಲ್ಲಿ ಪೊರ್ಚುಗಲ್ ವಿರುದ್ಧದ ಪಂದ್ಯದಲ್ಲಿ ನೂರರ ಗಡಿ ಮುಟ್ಟಲಿದೆ. ಬ್ರೆಜಿಲ್ ಇದುವರಿಗೂ 97 ವಿಶ್ವಕಪ್ ಪಂದ್ಯಗಳನ್ನಾಡಿದೆ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement