ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕ್ರೀಡೆ

ಐಪಿಎಲ್ ಫಿಕ್ಸಿಂಗ್ ತನಿಖೆ: ಮುದ್ಗಲ್ ಸಮಿತಿಗೆ ಗಂಗೂಲಿ

ಐಪಿಎಲ್ ಸ್ಪಾಟ್ ಫಿಕ್ಸಿಂಗ್ ...

Rashmi Kasaragodu
Updated On : 9 Jun 2014, 1:52 am

ನವದೆಹಲಿ: ಐಪಿಎಲ್ ಸ್ಪಾಟ್ ಫಿಕ್ಸಿಂಗ್ ಹಾಗೂ ಬೆಟ್ಟಿಂಗ್ ಪ್ರಕರಣದ ತನಿಖೆ ನಡೆಸಲು ಸುಪ್ರೀಂ ಕೋರ್ಟ್ ನೇಮಿಸಿರುವ ಮುದ್ಗಲ್ ಸಮಿತಿಗೆ, ಭಾರತದ ಮಾಜಿ ನಾಯಕ ಸೌರವ್ ಗಂಗೂಲಿ ಸೇರ್ಪಡೆಯಾಗಿದ್ದಾರೆ.
ಈ ಸಮಿತಿಗೆ ನಿವೃತ್ತ ನ್ಯಾಯಮೂರ್ತಿ ಮುಕುಲ್ ಮುದ್ಗಲ್ ಅವರು ಮುಂದಾಳತ್ವ ವಹಿಸಿದ್ದು, ನ್ಯಾಯವಾದಿಗಳಾದ ಎಲ್.ನಾಗೇಶ್ವರ ರಾವ್, ನಿಲಾಯ್ ದತ್ ಹಾಗೂ ಹಿರಿಯ ಐಪಿಎಸ್ ಅಧಿಕಾರಿ ಬಿ.ಬಿ ಮಿಶ್ರಾ ಇದ್ದಾರೆ. ಈ ಸಮಿತಿಯಲ್ಲಿ ಗಂಗೂಲಿ ಕ್ರಿಕೆಟ್ ಸಂಬಂಧಿಸಿದ ವಿಷಯಗಳಿಗೆ ತಜ್ಞರಾಗಿ ಸೇರ್ಪಡೆಯಾಗಿದ್ದಾರೆ.
ಐಪಿಎಲ್ ತನಿಖಾ ಸಮಿತಿಗೆ ಸೇರಿಕೊಳ್ಳಲು ನಾವು ಸೌರವ್ ಗಂಗೂಲಿ ಅವರಿಗೆ ಮನವಿ ಮಾಡಿದ್ದೆವು. ಅದನ್ನು ಒಪ್ಪಿಕೊಂಡಿರುವ ಗಂಗೂಲಿ ಅವರು ತನಿಖೆಯಲ್ಲಿ ಭಾಗವಹಿಸಲು ಮುಂದಾಗಿದ್ದಾರೆ. ನಾನು ದೂರವಾಣಿ ಮೂಲಕ ಗಂಗೂಲಿ ಅವರನ್ನು ಸಂಪರ್ಕಿಸಿದ್ದು, ಸಮಿತಿಯನ್ನು ಸೇರಿಕೊಳ್ಳಲು ಒಪ್ಪಿಕೊಂಡಿದ್ದಾರೆ. ಆದರೆ ನಾವು ಯಾವಾಗ ಭೇಟಿ ಮಾಡಬೇಕು ಎಂಬುದನ್ನು ನಿರ್ಧರಿಸಿಲ್ಲ. ಇಂದು ಸಮಿತಿ ಸದಸ್ಯರಾದ ಎಲ್. ನಾಗೇಶ್ವರ ರಾವ್ ಹಾಜರಾಗದ ಹಿನ್ನೆಲೆಯಲ್ಲಿ ಮುಂದಿನ ಭೇಟಿಯ ದಿನಾಂಕವನ್ನು ನಿರ್ಧರಿಸಿಲ್ಲ ಎಂದು ನ್ಯಾ. ಮುದ್ಗಲ್ ಅವರು ತಿಳಿಸಿದ್ದಾರೆ.
ಗಂಗೂಲಿ ಅವರು ಎಂದಿನಂತೆ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡುವುದು ಹಾಗೂ ಅಂಕಣವನ್ನು ಬರೆಯುವುದನ್ನು ಮುಂದುವರಿಸಬಹುದು. ಅವರ ಕಾರ್ಯ ತನಿಖೆಯಲ್ಲಿ ಕ್ರಿಕೆಟ್ಗೆ ಸಂಬಂಧಿಸಿದ ವಿಚಾರದಲ್ಲಿ ಸರಿಯಾದ ಆಯಾಮ ನೀಡುವುದಾಗಿದೆ. ಹಾಗಾಗಿ ಅವರು ಕಾಮೆಂಟರಿ ಮಾಡುವುದು ಹಾಗೂ ಅಂಕಣ ಬರೆಯುವುದಕ್ಕೆ ನಿರ್ಬಂಧ ಹಾಕಿಲ್ಲ ಎಂದು ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement