ಪರಿಸರ ಕಾಳಜಿ
ಈ ಬಾರಿಯ ಫಿಫಾ ವಿಶ್ವಕಪ್ ಪಂದ್ಯಾವಳಿಯಲ್ಲಿ ಆದಷ್ಟು ಪರಿಸರದ ಮೇಲೆ ವ್ಯತಿರಿಕ್ತ ಪರಿಣಾಮವನ್ನು ಕಡಿಮೆ ಮಾಡುವುದರ ಜತೆಗೆ ಪರಿಸರ ಕಾಳಜಿ ಬಗ್ಗೆ ಅರಿವು ಮೂಡಿಸಲು ಕೆಲವು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಕ್ರೀಡಾಂಗಣಗಳನ್ನು ಎಲ್ಇಇಡಿಯಿಂದ ಗ್ರೀನ್ ಬಿಲ್ಡಿಂಗ್ ಎಂದು ಪ್ರಮಾಣಿಕರಿಸಲಿದೆ. ಅಲ್ಲದೆ ಬಹುತೇಕ ಕ್ರೀಡಾಂಗಣಗಳ ಚಾವಣಿಯಲ್ಲಿ ಸೌರಶಕ್ತಿಯನ್ನು ಅಳವಡಿಸಲಾಗಿದೆ. ಅಲ್ಲದೆ ಸುಸ್ಥಿರ ನಿರ್ವಹಣೆ ಬಗ್ಗೆ ತರಬೇತಿ ನೀಡಲು ನಿರ್ಧರಿಸಲಾಗಿದೆ. ಬ್ರೆಜಿಲ್ ತ್ಯಾಜ್ಯ ನಿರ್ವಹಣೆಯಲ್ಲಿ ಹೊಸ ಕಾನೂನು ತಂದಿದ್ದು, ಕ್ರೀಡಾಂಗಣಗಳಲ್ಲಿ ವಸ್ತುಗಳ ಪುನರ್ಬಳಕೆ ಮಾಡಲು ವ್ಯವಸ್ಥೆ ಕಲ್ಪಿಸಲಾಗಿದೆ. ಇನ್ನು ಪಂದ್ಯಾವಳಿಯ ಆಯೋಜನೆ ವೇಳೆ ಆದಷ್ಟು ಕಡಿಮೆ ಪ್ರಮಾಣದಲ್ಲಿ ಕಾರ್ಬನ್ ಅನ್ನು ಹೊರ ಬಿಡಲು ಕ್ರಮ ಕೈಗೊಳ್ಳಲಾಗಿದೆ