ಫಿಫಾ ಭ್ರಷ್ಟಾಚಾರಕ್ಕೆ ಮರಡೋನಾ ಕಿಡಿ
ಅಬುಧಾಬಿ: ಫೀಫಾ ಒಳಗೆ ಭ್ರಷ್ಟಾಚಾರ ವ್ಯಾಪಿಸಿದ್ದು, ಇದರಲ್ಲಿ ಭಾಗಿಯಾದವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಅರ್ಜೆಂಟೀನಾದ ಫುಟ್ಬಾಲ್ ದಂತಕತೆ ಡಿಗೊ ಮರಡೋನಾ ಆಗ್ರಹಿಸಿದ್ದಾರೆ. ಕತಾರ್ನ ವಿಶ್ವಕಪ್ ಬಿಡ್ಗೆ ಸಂಬಂಧಿಸಿದಂತೆ ಫಿಫಾ ಆಡಳಿತ ಮಂಡಳಿಯಲ್ಲಿ ಹೆಚ್ಚಿನ ಪ್ರಮಾಣದ ಲಂಚ ಹರಿದಾಡುತ್ತಿದೆ. ಇದರಲ್ಲಿ ಭಾಗಿಯಾದವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಇಲ್ಲಿನ ಸ್ಥಳೀಯ ಪತ್ರಿಕೆಯೊಂದಕ್ಕೆ ತಿಳಿಸಿದ್ದಾರೆ.
ಇಷ್ಟೊಂದು ಹಣ ಎಲ್ಲಿ ಹೊಯಿತು. ಯಾರು, ಯಾವಕಾರಣಕ್ಕಾಗಿ ಈ ಹಣ ಸ್ವೀಕರಿಸಿದ್ದಾರೆ. ಈ ಎಲ್ಲಾ ವಿಷಯಗಳು ತನಿಖೆಯಾಗಬೇಕು. ಫಿಫಾದಲ್ಲಿನ ಭ್ರಷ್ಟಾಚಾರ ತಲೆತಗ್ಗಿಸುವಂತಿದೆ ಎಂದು ಅವರು ತಿಳಿಸಿದ್ದಾರೆ.