ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕ್ರೀಡೆ

ಭಾರತಕ್ಕೆ ಆಸೀಸ್ ಸವಾಲು

Rashmi Kasaragodu
Updated On : 9 Jun 2014, 1:04 am

ದಿ ಹಾಗ್ (ಹಾಲೆಂಡ್): ಮಲೇಷ್ಯಾ ವಿರುದ್ಧ ಜಯ ಸಾಧಿಸುವ ಮೂಲಕ ವಿಶ್ವಾಸ ವೃದ್ಧಿಸಿಕೊಂಡಿರುವ ಭಾರತ ಹಾಕಿ ತಂಡ, ವಿಶ್ವಕಪ್ ಹಾಕಿ ಪಂದ್ಯಾವಳಿಯಲ್ಲಿ ಸೋಮವಾರ ನಡೆಯಲಿರುವ ತನ್ನ ಅಂತಿಮ ಲೀಗ್ ಪಂದ್ಯದಲ್ಲಿ ಬಲಿಷ್ಠ ಆಸ್ಟ್ರೇಲಿಯಾ ವಿರುದ್ಧ ಕಠಿಣ ಸವಾಲು ಎದುರಿಸುತ್ತಿದೆ.
ಸತತ ಎರಡು ಪಂದ್ಯಗಳಲ್ಲಿ ಸೋತು, ಮೂರನೇ ಪಂದ್ಯದಲ್ಲಿ ಸ್ಪೇನ್ ವಿರುದ್ಧ ಡ್ರಾ ಸಾಧಿಸಿದ್ದ ಬ್ರೆಜಿಲ್ ಅಂತಿಮವಾಗಿ ನಾಲ್ಕನೇ ಪಂದ್ಯದಲ್ಲಿ ಮಲೇಷ್ಯಾ ವಿರುದ್ಧ 3-2 ಗೋಲುಗಳಿಂದ ಜಯ ಕಂಡುಕೊಂಡಿತ್ತು. ಹೀಗಾಗಿ ಈಗ ಆಸ್ಟ್ರೇಲಿಯಾ ವಿರುದ್ಧ ಹೋರಾಟ ನಡೆಸಲು ಕೊಂಚ ವಿಶ್ವಾಸ ಗಳಿಸಿಕೊಂಡಿದೆ ಎನ್ನಬಹುದು.
ಆದರೆ, ಹಾಲಿ ಚಾಂಪಿಯನ್ ಆಸ್ಟ್ರೇಲಿಯಾ ವಿರುದ್ಧ ಜಯ ಸಾಧಿಸುವುದು ಭಾರತ ತಂಡಕ್ಕೆ ಸಾಮಾನ್ಯ ವಿಷಯವಲ್ಲ.'ಸೋಮವಾರ ನಡೆಯಲಿರುವ ಪಂದ್ಯದಲ್ಲಿ ಆಸ್ಟ್ರೇಲಿಯಾವನ್ನು ಎದುರಿಸಲು ನಮ್ಮ ತಂಡ ಸಿದ್ಧವಾಗಿದೆ. ಮಲೇಷ್ಯಾ ವಿರುದ್ಧದ ಪಂದ್ಯದಲ್ಲಿ ಗೆದ್ದಿರುವುದು ನಮ್ಮ ಆತ್ಮವಿಶ್ವಾಸವನ್ನು ವೃದ್ಧಿಸಿದೆ. ಈಗ ಹಾಲಿ ಚಾಂಪಿಯನ್ನರ ವಿರುದ್ಧ ಹೋರಾಟ ನಡೆಸಲು ನಾವು ಎದುರು ನೋಡುತ್ತಿದ್ದೇವೆ. ಪಂದ್ಯದಲ್ಲಿ ನಾವು ಪಾರಮ್ಯ ಮೆರೆಯಲು ನಮ್ಮ ಆಟಗಾರರು ಎದುರು ನೋಡುತ್ತಿದ್ದಾರೆ' ಎಂದು ಭಾರತ ತಂಡದ ನಾಯಕ ಸರ್ದಾರ್ ಸಿಂಗ್ ತಿಳಿಸಿದರು.
ಬೆಲ್ಜಿಯಂ ಮತ್ತು ಇಂಗ್ಲೆಂಡ್ ತಂಡಗಳ ವಿರುದ್ಧ ನಡೆದ ಪಂದ್ಯಗಳ ಕೊನೆ ಕ್ಷಣದಲ್ಲಿ ಒಂದು ಗೋಲಿನ ಅಂತರದಿಂದ ಸೋಲನುಭವಿಸಿದ ಭಾರತ, ತನ್ನ ಗುಂಪಿನಲ್ಲಿ ಸೆಮಿಫೈನಲ್ ಪ್ರವೇಶಿಸುವ ಎರಡನೇ ಸ್ಥಾನವನ್ನು ಕೈಚೆಲ್ಲಿದೆ. ಹೀಗಾಗಿ ಈಗ ಸರ್ದಾರ್ ಸಿಂಗ್ ನಾಯಕತ್ವದ ತಂಡ ಕೊನೆಯ ಪಂದ್ಯದಲ್ಲಿ ಪ್ರತಿಷ್ಠೆಗಾಗಿ ಜಯ ಕಾಣಲು ಎದುರು ನೋಡುತ್ತಿದೆ.
ಆಸ್ಟ್ರೇಲಿಯಾ ತಂಡ ಇದುವರೆಗೂ ಆಡಿರುವ ಎಲ್ಲ ಪಂದ್ಯಗಳಲ್ಲೂ ಪಾರಮ್ಯ ಮೆರೆದಿದೆ. ಶನಿವಾರವಷ್ಟೇ ನಡೆದ ಪಂದ್ಯದಲ್ಲಿ ಇಂಗ್ಲೆಂಡ್ ತಂಡವನ್ನು ಅದು 5-0 ಗೋಲುಗಳಿಂದ ಪರಾಭವಗೊಳಿಸಿದೆ. ಹೀಗಾಗಿ, ಆಸ್ಟ್ರೇಲಿಯಾ ಈ ಪಂದ್ಯಾವಳಿಯಲ್ಲಿ ಚಾಂಪಿಯನ್ ಪಟ್ಟ ಮುಡಿಗೇರಿಸಿಕೊಳ್ಳುವ ಸಂಪೂರ್ಣ ವಿಶ್ವಾಸದಲ್ಲಿದೆ.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement