ವುವುಜೆಲ್ ಸ್ಥಾನಕ್ಕೆ ಕ್ಯಾಕ್ಸಿರೋಲಾ
ಇಷ್ಟು ದಿನಗಳ ಕಾಲ ಫುಟ್ಬಾಲ್ ಸೇರಿದಂತೆ ಇತರೆ ಕ್ರೀಡೆಗಳಲ್ಲಿ ಅಭಿಮಾನಿಗಳು ತಮ್ಮ ನೆಚ್ಚಿನ ತಂಡವನ್ನು ಪ್ರೋತ್ಸಾಹಿಸಲು ಬಳಸುತ್ತಿದ್ದ ವುವುಜೆಲ್ಗಳಿಗೆ ವಿದಾಯ ಹೇಳಲಾಗಿದೆ. ಆದರೆ ಈ ಬಾರಿ ಮತ್ತೊಂದು ಹೊಸ ಸಾಧನ ಅಭಿಮಾನಿಗಳ ಕೈ ಸೇರಲಿದೆ. ಅದೇ ಕ್ಯಾಕ್ಸಿರೋಲಾ. ಇದು ಬ್ರೆಜಿಲ್ನಲ್ಲಿ ಬಳಸುವ ಸಂಗೀತ ಸಾಧನವಾಗಿದ್ದು, ಇದನ್ನು ಕಾರ್ಲಿನಾಸ್ ಬ್ರೌನ್ ಎಂಬಾತ ನಿರ್ಮಿಸಿದ್ದಾಗಿದೆ. ಇದನ್ನು ಕೈಯಲ್ಲಿ ಹಿಡಿದು ಆಡಿಸಿದರೆ, ಶಬ್ದ ಹೊರಹೊಮ್ಮಲಿದೆ. 2012ರ ಸೆಪ್ಟೆಂಬರ್ 27ರಂದು ಬ್ರೆಜಿಲ್ನ ಕ್ರೀಡಾ ಇಲಾಖೆ ಈ ಕ್ಯಾಕ್ಸಿರೋಲಾವನ್ನು ಫಿಫಾ ವಿಶ್ವಕಪ್ನ ಅಧಿಕೃತ ಸಂಗೀತ ಸಾಧನ ಎಂದು ಘೋಷಿಸಿತು. ನಂತರ ಈ ಸಾಧನ ಕೆಲವೊಮ್ಮ ಅಭಿಮಾನಿಗಳು ಘರ್ಷಣೆ ವೇಳೆ ಹಲ್ಲೆ ಮಾಡಲು ಸಾಧನವಾಗಿ ಬಳಸಬಹುದು ಎಂಬ ಆರೋಪ ಕೇಳಿ ಬಂದಿದೆಯಾದರೂ, ಈ ಬಾರಿ ವಿಶ್ವಕಪ್ನಲ್ಲಿ ಕ್ಯಾಕ್ಸಿರೋಲಾ ಶಬ್ದ ಕೇಳುವುದಂತೂ ಖಚಿತವಾಗಿದೆ.