ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕ್ರೀಡೆ

ಅಪಘಾತದಲ್ಲೂ ಫೋರ್ಸ್ ಇಂಡಿಯಾಕ್ಕೆ ಅಂಕ

Rashmi Kasaragodu
Updated On : 10 Jun 2014, 12:20 pm

ಸ್ಪರ್ಧೆಯಲ್ಲಿ ಅಪಘಾತಕ್ಕೀಡಾದರೂ, ಕೆನಡಾ ಗ್ರ್ಯಾನ್ ಪ್ರಿಯಲ್ಲಿ ಅಂಕ ಗಿಟ್ಟಿಸುವಲ್ಲಿ ಸಹಾರಾ ಫೋರ್ಸ್ ಇಂಡಿಯಾ ತಂಡ ಯಶಸ್ವಿಯಾಗಿದೆ.
ಫೋರ್ಸ್ ಇಂಡಿಯಾ ಚಾಲಕ ಸೆರ್ಜಿಯೋ ಪೆರೆಜ್ ಕಾರು ಅಪಘಾತಕ್ಕೊಳಗಾದರೂ, ಸಹ ಚಾಲಕ ನಿಕೋ ಹಲ್ಕನ್ಬರ್ಗ್ ಅವರು 5ನೇ ಸ್ಥಾನ ಪಡೆದದ್ದು ತಂಡಕ್ಕೆ ಅಂಕ ಪಡೆಯಲು ನೆರವಾಯಿತು.
ಪೆರೆಜ್ ಅವರು 70ನೇ ಲ್ಯಾಪ್ನಲ್ಲಿ 4ನೇ ಸ್ಥಾನದಲ್ಲಿ ಸಾಗುತ್ತಿದ್ದಾಗ, ವಿಲಿಯಮ್ಸ್ ತಂಡದ ಫೆಲಿಪೆ ಮಸ್ಸಾ ಅವರು ಹಿಂದಿನಿಂದ ಬಂದು ಡಿಕ್ಕಿ ಹೊಡೆದಿದ್ದಾರೆ.
ಅಪಘಾತವಾದ ಹಿನ್ನೆಲೆಯಲ್ಲಿ ಫೋರ್ಸ್ ಇಂಡಿಯಾದ ಹಲ್ಕನ್ಬರ್ಗ್ ಅವರು ಸತತ ಎರಡನೇ ಬಾರಿಗೆ 5ನೇ ಸ್ಥಾನ ಪಡೆಯಲು ನೆರವಾಯಿತು. ಇದರೊಂದಿಗೆ ಜರ್ಮನಿಯ ನಿಕೋ ಹಲ್ಕನ್ಬರ್ಗ್ ಅವರು 57 ಅಂಕ ಗಳಿಸಿಕೊಳ್ಳುವುದರೊಂದಿಗೆ, ಒಟ್ಟಾರೆ ಚಾಂಪಿಯನ್ಶಿಪ್ನಲ್ಲಿ ಈಗ 6ನೇ ಸ್ಥಾನದಲ್ಲಿದ್ದಾರೆ. ಅಲ್ಲದೆ ತಂಡದ ವಿಭಾಗದಲ್ಲಿ ಫೋರ್ಸ್ ಇಂಡಿಯಾ 77 ಅಂಕಗಳೊಂದಿಗೆ ನಾಲ್ಕನೇ ಸ್ಥಾನದಲ್ಲಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement