ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕ್ರೀಡೆ

ಎಡೆನ್ ಹಜಾರ್ಡ್

Rashmi Kasaragodu
Updated On : 12 Jun 2014, 4:19 am

ಬೆಲ್ಜಿಯಂ ತಂಡದ ಮತ್ತೊಂದು ಯುವ ಪ್ರತಿಭೆ ಹಜಾರ್ಡ್. ಲಂಡನ್ ಕ್ಲಬ್ ಪರ 14 ಗೋಲು ದಾಖಲಿಸಿ, 7 ಗೋಲಿಗೆ ನೆರವಾಗಿದ್ದ ಹಜರ್ಡ್ ಅತ್ಯುತ್ತಮ ಆಟಗಾರನಾಗಿದ್ದಾರೆ. ಅಲ್ಲದೆ ಪಿಎಫ್ಎ ಯಂಗ್ ಪ್ಲೇಯರ್ ಆಫ್ ದ ಇಯರ್ ಪ್ರಶಸ್ತಿ ರೇಸ್ನಲ್ಲಿ ಇವರಿದ್ದಾರೆ. ಈತನ ಕೌಶಲ್ಯ ಹಾಗೂ ತಾಂತ್ರಿಕತೆ ಎದುರಾಳಿ ತಂಡದ ರಕ್ಷಣಾತ್ಮಕ ವಿಭಾಗಕ್ಕೆ ದೊಡ್ಡ ಸವಾಲಾಗಿ ಪರಿಣಮಿಸಲಿದೆ. ಕ್ಲಬ್ ಮಟ್ಟದಲ್ಲಿ ತನ್ನದೇ ಆದ ಹೆಸರು ಮಾಡಿರುವ ಈತ, ಬೆಲ್ಜಿಯಂ ತಂಡಕ್ಕೆ ಆಸರೆಯಾಗಿ ನಿಲ್ಲುವ ಸಾಧ್ಯತೆಗಳು ಹೆಚ್ಚಿವೆ.

ರಾಸ್ ಬಾರ್ಕ್ಲಿ
ಇಂಗ್ಲೆಂಡ್ನ ಈ ಯುವ ಆಟಗಾರನಿಗೆ ಇನ್ನು 20 ವರ್ಷ. ಮೂಲತಃ ಮಿಡ್ಫೀಲ್ಡರ್ ಆಗಿರುವ ಬಾರ್ಕ್ಲಿ ಪ್ರಸಕ್ತ ಸಾಲಿನಲ್ಲಿ ಎವರ್ಟನ್ ಪರ ಅತ್ಯುತ್ತಮ ಪ್ರದರ್ಶನ ನೀಡಿದ್ದಾರೆ. 34 ಪಂದ್ಯಗಳಿಂದ 7 ಗೋಲು ದಾಖಲಿಸಿದ್ದು, ಮಹತ್ವದ ಪಂದ್ಯಗಳಲ್ಲಿ ಏಕಾಂಗಿ ಗೋಲು ದಾಖಲಿಸಿದ ಈತ, ತಂಡದ ಯಶಸ್ಸಿನಲ್ಲಿ ಪ್ರಮುಖ ಪಾತ್ರ ವಹಿಸಿ ಗಮನ ಸೆಳೆದಿದ್ದಾನೆ. ಅಲ್ಲದೆ ಪ್ರಸಕ್ತ ಸಾಲಿನ ಪಿಎಫ್ಎ ಯಂಗ್ ಪ್ಲೇಯರ್ ಆಫ್ ದ ಇಯರ್ ಪ್ರಶಸ್ತಿಗೆ ಆಯ್ಕೆಯಾದ 6 ಆಟಗಾರರಲ್ಲಿ ಈತನ ಹೆಸರು ಸಹ ಇದೆ. ಹಾಗಾಗಿ ಪ್ರಸಕ್ತ ಫಿಫಾ ವಿಶ್ವಕಪ್ ಪಂದ್ಯಾವಳಿಯಲ್ಲಿ ಇಂಗ್ಲೆಂಡ್ ಚಾಂಪಿಯನ್ ಆಗಲು ಈತನ ಕಾಣಿಕೆ ಮಹತ್ವದ್ದಾಗಲಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement