ಬೆಕಂ ಹೊಟೇಲ್ ಉದ್ಯಮ ಶುರು
ಲಂಡನ್: ಇಂಗ್ಲೆಂಡ್ನ ಮಾಜಿ ಫುಟ್ಬಾಲ್ ಆಟಗಾರ ಡೇವಿಡ್ ಬೆಕಂ, ಹೊಸ ಉದ್ಯೋಗ ಕ್ಷೇತ್ರವನ್ನು ಆಯ್ಕೆ ಮಾಡಿಕೊಂಡಿದ್ದು, ಅಮೆರಿಕಾದಲ್ಲಿ ಹೊಟೇಲ್ ಸಮೂಹವನ್ನು ಆರಂಭಿಸಲು ನಿರ್ಧರಿಸಿದ್ದಾರೆ.
ಈ ಹೊಟೇಲ್ ಸಮೂಹಕ್ಕೆ ಬೆಕಂ ಬಿಸ್ಟ್ರೊ ಎಂದು ಹೆಸರಿಡುವ ಸಾಧ್ಯತೆಗಳಿವೆ.
ಇಲ್ಲಿ ಉತ್ತಮ ವ್ಯವಸ್ಥೆಯನ್ನು ಕಲ್ಪಿಸಲಾಗಿದ್ದು, ಅತ್ಯುತ್ತಮ ಆಹಾರವನ್ನು ನೀಡಲಾಗುವುದು ಎಂದು ತಿಳಿಸಿದ್ದಾರೆ. ಬೆಕಂ, ಲಾಸ್ ವೇಗಾಸ್ ಸ್ಯಾಂಡ್ಸ್ ಕಾರ್ಪೊರೇಷನ್ ಜತೆಗಿನ ಒಪ್ಪಂದದ ಮೂಲಕ ಈ ಸಮೂಹವನ್ನು ಆರಭಿಸಲಿದ್ದಾರೆ.