ರ್ಯಾಂಕಿಂಗ್: ಸಾನಿಯಾ ಜೀವನಶ್ರೇಷ್ಠ ಸಾಧನೆ
ನವದೆಹಲಿ: ಭಾರತದ ಖ್ಯಾತ ಮಹಿಳಾ ಟೆನಿಸ್ ತಾರೆ ಸಾನಿಯಾ ಮಿರ್ಜಾ ಅವರು ರ್ಯಾಂಕಿಂಗ್ನಲ್ಲಿ ಹೊಸ ದಾಖಲೆ ಬರೆದಿದ್ದಾರೆ.
ಫ್ರೆಂಚ್ ಓಪನ್ ಗ್ರ್ಯಾನ್ ಸ್ಲ್ಯಾಮ್ ನಂತರ ಬಿಡುಗಡೆ ಮಾಡಲಾಗಿರುವ ರ್ಯಾಂಕಿಂಗ್ ಪಟ್ಟಿಯ ಮಹಿಳೆಯರ ಡಬಲ್ಸ್ನಲ್ಲಿ 6ನೇ ಸ್ಥಾನಕ್ಕೇರಿರುವ ಸಾನಿಯಾ ಜೀವನಶ್ರೇಷ್ಠ ಸಾಧನೆ ಮಾಡಿದ್ದಾರೆ.
ಫ್ರೆಂಚ್ ಓಪನ್ನ ಮಹಿಳೆಯರ ಡಬಲ್ಸ್ ವಿಭಾಗದಲ್ಲಿ ಕ್ವಾರ್ಟರ್ಫೈನಲ್ ಪ್ರವೇಶಿಸಿದ್ದ ಸಾನಿಯಾ ಮಿರ್ಜಾ ಅವರು, ತಮ್ಮ ಜತೆಯಾಟಗಾರ್ತಿ ಕಾರಾ ಬ್ಲಾಕ್ ಅವರೊಂದಿಗೆ 430 ರ್ಯಾಂಕಿಂಗ್ ಪಾಯಿಂಟ್ಗಳನ್ನು ಗಳಿಸುವ ಮೂಲಕ 8ನೇ ಸ್ಥಾನಕ್ಕೇರಿದ್ದರು.
ಕ್ವಾರ್ಟರ್ಫೈನಲ್ ಪಂದ್ಯದಲ್ಲಿ ಸಾನಿಯಾ ಮತ್ತು ಕಾರಾ ಜೋಡಿ, ಚಾಂಪಿಯನ್ ಪಟ್ಟ ಧರಿಸಿದ ಚೈನೀಸ್ ತೈಪೇನ ಸೂ ವೀ ಶೀ ಮತ್ತು ಚೀನಾದ ಶಾಯಿ ಪೆಂಗ್ ಜೋಡಿ ವಿರುದ್ಧ ಸೋಲನುಭವಿಸಿದ್ದರು.
'ಈ ವರ್ಷ ಜನವರಿಯಲ್ಲಿ ನಾನು ಋತುವನ್ನು ಆರಂಭಿಸಿದಾಗ, ವಿಶ್ವ ರ್ಯಾಂಕಿಂಗ್ನಲ್ಲಿ ಜೀವನಶ್ರೇಷ್ಠ ಸಾಧನೆ ಮಾಡುವುದು ನನ್ನ ಗುರಿಗಳಲ್ಲಿ ಒಂದಾಗಿತ್ತು. ಹೀಗಾಗಿ, ಈಗ ಈ ಸಾಧನೆ ಮಾಡಿರುವುದು ಖುಷಿ ತಂದಿದೆ' ಎಂದಿದ್ದಾರೆ ಸಾನಿಯಾ ಮಿರ್ಜಾ.