ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕ್ರೀಡೆ

ಫೈನಲ್ ನೋಡಲು ಮೋದಿ ಹೋಗ್ತಾರೆ...

ಆರೆಸ್ಸೆಸ್‌ನಲ್ಲಿ ಮೊದಲು ಹೇಳಿಕೊಡೋದೇ ಕಬಡ್ಡಿ ಆಡೋದು ಹೇಗೆ ಅಂತ. ಹೀಗಾಗಿ...

Rashmi Kasaragodu
Updated On : 11 Jun 2014, 2:00 am

ಆರೆಸ್ಸೆಸ್‌ನಲ್ಲಿ ಮೊದಲು ಹೇಳಿಕೊಡೋದೇ ಕಬಡ್ಡಿ ಆಡೋದು ಹೇಗೆ ಅಂತ. ಹೀಗಾಗಿ, ಮೋದಿ ಕಬಡ್ಡಿಪ್ರಿಯ ಅನ್ನೋದು ಪಕ್ಕಾ. ಅವರಿಗೆ ಚೆಸ್ಸೂ ಇಷ್ಟ. ಕ್ರಿಕೆಟ್ ಏನಿದ್ರೂ ಅಷ್ಟಕಷ್ಟೇ. ಆದರೆ, ಫುಟ್ಬಾಲ್?
ಇಷ್ಟಾನೋ, ಇಲ್ವೋ ಗೊತ್ತಿಲ್ಲ. ಆದರೆ, ಈ ಬಾರಿಯ ಫಿಫಾ ವರ್ಲ್ಡ್‌ಕಪ್‌ನ ಫೈನಲ್‌ಗಂತೂ ಮೋದಿ ಪಕ್ಕಾ ಹಾಜರ್! ಅಚ್ಚರಿ ಆಯ್ತಾ? ಪ್ರಧಾನಿ ಜುಲೈನಲ್ಲಿ ಬ್ರೆಜಿಲ್‌ಗೆ ಭೇಟಿ ನೀಡಲಿದ್ದಾರೆ. ಈ ಬಾರಿಯ ಫುಟ್ಬಾಲ್ ವರ್ಲ್ಡ್‌ಕಪ್ ನಡೆಯುತ್ತಿರುವುದು ಕೂಡ ಅಲ್ಲಿಯೇ. ಇದು ಮೋದಿ ಅವರ ಎರಡನೇ ವಿದೇಶಿ ಭೇಟಿಯಾಗಿದೆ.  
ಜೂನ್ 2014ರಲ್ಲಿ ಬ್ರೆಜಿಲ್‌ನಲ್ಲಿ ನಡೆಯುವ ಬ್ರಿಕ್ಸ್ ಶೃಂಗಸಭೆಯಲ್ಲಿ ಮೋದಿ ಪಾಲ್ಗೊಳ್ಳುವುದು ಖಚಿತ. ಬ್ರೆಜಿಲ್ ಅಧ್ಯಕ್ಷ ದಿಲ್ಮಾ ರುಸೆಫ್ ಮತ್ತು ದಕ್ಷಿಣ ಆಫ್ರಿಕ ಅಧ್ಯಕ್ಷ ಜಾಕೋಬ್ ಜುಮಾರೊಂದಿಗೆ ವೇದಿಕೆಯಲ್ಲಿ ಮೋದಿ, ಪುಟಿನ್ ಮತ್ತು ಜಿನ್‌ಪಿಂಗ್ ಕಾಣಿಸಿಕೊಳ್ಳಲಿದ್ದಾರೆ.
ಐದು ರಾಷ್ಟ್ರಗಳ ನಡುವೆ ಉದಯಿಸುತ್ತಿರುವ ಆರ್ಥಿಕ ಪರಿಸ್ಥಿತಿ ಹೆಚ್ಚಿಸಲು ಈಶಾನ್ಯ ಬ್ರೆಜಿಲ್‌ನ ಫೋರ್ಟಲೇಜದ ಸಮುದ್ರ ತಟದಲ್ಲಿ 6ನೇ ಶೃಂಗಸಭೆ ಮಾರ್ಚ್‌ನಲ್ಲಿ ಕೈಗೊಳ್ಳಲಾಗಿತ್ತು. ಚೀನಾದ ಕೋರಿಕೆ ಮೇರೆಗೆ ಜೂನ್‌ನಲ್ಲಿ ನಡೆಸಲು ಒಕ್ಕೂಟ ನಿರ್ಧರಿಸಿತ್ತು.
ಜಿನ್‌ಪಿಂಗ್ ಫುಟ್ಬಾಲ್ ಪ್ರೇಮಿಯಾಗಿದ್ದು 2014ರ ವಿಶ್ವಕಪ್ ಫೈನಲ್ ಪಂದ್ಯ ನೋಡುವ ಸಲುವಾಗಿ ಶೃಂಗಸಭೆ ಮುಂದಕ್ಕೆ ಹಾಕಿದ್ದರು. ಜುಲೈ 13ರಂದು ರಿಯೋ ಡಿ ಜೆನೈರೋದಲ್ಲಿ ಫಿಫಾ ವರ್ಲ್ಡ್‌ಕಪ್‌ನ ಅಂತಿಮ ಪಂದ್ಯ ನಡೆಯುತ್ತಿದೆ. ಅದೇ ಸಂದರ್ಭದಲ್ಲಿ ಒಂದೆರಡು ದಿನ ಮೊದಲು ಶೃಂಗಸಭೆ ಏರ್ಪಟ್ಟರೆ ಅಂತಿಮ ಪಂದ್ಯವನ್ನೂ ನೋಡಿಕೊಂಡು ಹಿಂತಿರುಗಬಹುದು ಎಂಬುದು ಚೀನಾ ಅಧ್ಯಕ್ಷರ ದೂರಾಲೋಚನೆ! ಒಟ್ಟಿನಲ್ಲಿ ನೂತನ ಪ್ರಧಾನಿ ನರೇಂದ್ರ ಮೋದಿ ಅವರಿಗೂ ಫುಟ್ಬಾಲ್ ಪಂದ್ಯ ವೀಕ್ಷಿಸುವ ಅವಕಾಶ ಲಭಿಸಿತು ಎನ್ನಿ! ಚೀನಾ ಪ್ರಧಾನಿ ಜೊತೆ ಫುಟ್ಬಾಲ್ ವರ್ಲ್ಡ್‌ಕಪ್ ಪಂದ್ಯ ನೋಡಲು ಹೋಗುತ್ತಾರೋ ಇಲ್ಲವೋ ಎಂಬುದು ಸ್ವಾರಸ್ಯ.                  

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement