ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕ್ರೀಡೆ

ಬಾಂಗ್ಲಾದಲ್ಲಿ ವಿಶ್ವಕಪ್ ಬಾವುಟಕ್ಕೆ ನಿಷೇಧ

Rashmi Kasaragodu
Updated On : 11 Jun 2014, 1:10 am

ಕ್ರಿಕೆಟ್ ಮೇಲೆ ಹೆಚ್ಚು ಒಲವಿರುವ ಬಾಂಗ್ಲಾದೇಶದಲ್ಲಿ ಫಿಫಾ ವಿಶ್ವಕಪ್ ಪಂದ್ಯಾವಳಿಯ ಜ್ವರ ಹೆಚ್ಚುತ್ತಿದ್ದು, ಸ್ಥಳೀಯ ಫುಟ್ಬಾಲ್ ಅಭಿಮಾನಿಗಳು ತಮ್ಮ ನೆಚ್ಚಿನ ತಂಡದ ಬಾವುಟವನ್ನು ತಮ್ಮ ತಮ್ಮ ಮನೆಯ ಮಹಡಿಯ ಮೇಲೆ ಹಾಕಿದ್ದು, ಇದನ್ನು ಕೂಡಲೇ ತೆಗೆದು ಹಾಕಬೇಕೆಂದು ಬಾಂಗ್ಲಾದೇಶದಲ್ಲಿ ಅಪ್ಪಣೆ ನೀಡಿದೆ. ಪಂದ್ಯಾವಳಿಯಲ್ಲಿ ತಂಡವನ್ನು
ಬೆಂಬಲಿಸುವ ಸಲುವಾಗಿ ಹೆಚ್ಚಿನ ಬಾವುಟಗಳನ್ನು ಹಾಕುವುದರಿಂದ ಬಾಂಗ್ಲಾದೇಶದ ಬಾವುಟಕ್ಕೆ ಮಹತ್ವ ಕಡಿಮೆ ಮಾಡುವುದರ ಜತೆಗೆ, ಹೆಚ್ಚು ಅವಮಾನಕಾರಿಯಾಗಿರುವುದರಿಂದ ಈ ರೀತಿಯಾಗಿ ಬಾವುಟ ಹಾಕುವುದನ್ನು ನಿಷೇಧಿಸಲಾಗಿದೆ. ಎಂದು ಜೆಸ್ಸೊರ್ ಜಿಲ್ಲೆಯ ಸರ್ಕಾರಿ ಅಧಿಕಾರಿ ಮಿಸ್ಟಾಫಿಜುರ್ ರೆಹಮಾನ್ ತಿಳಿಸಿದ್ದಾರೆ. ವಿಶ್ವಕಪ್ ಹತ್ತಿರವಾಗುತ್ತಿದ್ದಂತೆ ಬಾಂಗ್ಲಾದೇಶ, ಅರ್ಜೆಂಟೀನಾ ಹಾಗೂ ಬ್ರೆಜಿಲ್ ರಾಷ್ಟ್ರವಾಗಿ ಮಾರ್ಪಡುತ್ತಿದೆ. ಬಹುತೇಕ ಎಲ್ಲಾ ಮನೆಯ ಮಹಡಿಯ ಮೇಲೆ ಬ್ರೆಜಿಲ್ ಹಾಗೂ ಅರ್ಜೆಂಟೀನಾದ ಬಾವುಟಗಳು ರಾರಾಜಿಸುತ್ತಿವೆ. ಅಭಿಮಾನಿಗಳು ತಮ್ಮ ನೆಚ್ಚಿನ ತಂಡದ ಜೆರ್ಸಿಯನ್ನು ಧರಿಸಲು ಹಾಗೂ ಬ್ಯಾನರ್‌ಗಳನ್ನು ಹಾಕಿಕೊಳ್ಳಲು ನಾವು ಅಡ್ಡಿ ಪಡಿಸುವುದಿಲ್ಲ ಎಂದಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement