ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕ್ರೀಡೆ

ಸ್ಕ್ವಾಷ್: ವನಿತೆಯರಿಗೆ ಕಠಿಣ ಸವಾಲು

Rashmi Kasaragodu
Updated On : 11 Jun 2014, 1:12 am

ಹಾಂಕಾಂಗ್: ದೀಪಿಕಾ ಪಳ್ಳಿಕಾಲ್ ಸಾರಥ್ಯದ ಭಾರತದ ಮಹಿಳೆಯರ ಸ್ಕ್ವಾಷ್ ತಂಡ, ಬುಧವಾರದಿಂದ ಆರಂಭವಾಗಲಿರುವ ಏಷ್ಯನ್ ಸ್ಕ್ವಾಷ್ ಚಾಂಪಿಯನ್‌ಶಿಪ್‌ನಲ್ಲಿ ತನ್ನ ಚಾಂಪಿಯನ್ ಪಟ್ಟ ಉಳಿಸಿಕೊಳ್ಳಲು ಕಠಿಣ ಸವಾಲು ಎದುರಿಸುತ್ತಿದೆ.     ಇನ್ನು ಸೌರವ್ ಘೋಸಾಲ್ ನಾಯಕತ್ವದ ಭಾರತ ಪುರುಷರ ತಂಡ ತನ್ನ ಮೊದಲ ಪ್ರಶಸ್ತಿ ಮುಡಿಗೇರಿಸಿಕೊಳ್ಳಲು ಎದುರು ನೋಡುತ್ತಿದೆ.
ದೀಪಿಕಾ ಪಳ್ಳಿಕಾಲ್, ಜೋಷ್ನಾ ಚಿನ್ನಪ್ಪ ಹಾಗೂ ಅಂಕಿತಾ ಅಲಂಕಾಮೋನಿ ಅವರು ಕಳೆದ ಬಾರಿ 2012ರ ಪಂದ್ಯಾವಳಿಯಲ್ಲಿ ಪ್ರಶಸ್ತಿ ಮುಡಿಗೇರಿಸಿಕೊಳ್ಳುವ ಮೂಲಕ ಇತಿಹಾಸ ಬರೆದಿದ್ದರು.  ಪಂದ್ಯಾವಳಿಯ 'ಎ' ಗುಂಪಿನಲ್ಲಿ ಸ್ಥಾನ ಪಡೆದಿರುವ ಮಹಿಳೆಯರ ತಂಡ 2ನೇ ಶ್ರೇಯಾಂಕ ಪಡೆದುಕೊಂಡಿದ್ದು, ತನ್ನ ಮೊದಲ ಪಂದ್ಯದಲ್ಲಿ ಆತಿಥೇಯ ಹಾಂಕಾಂಗ್ ತಂಡವನ್ನು ಎದುರಿಸಲಿದೆ. ಚೀನಾ, ಪಾಕಿಸ್ತಾನ ಹಾಗೂ ಇರಾನ್ ಗುಂಪಿನಲ್ಲಿರುವ ಇತರ ತಂಡಗಳಾಗಿವೆ.
ಅಗ್ರಶ್ರೇಯಾಂಕ ಪಡೆದಿರುವ ಮಲೇಷ್ಯಾ, ಕೊರಿಯಾ, ಜಪಾನ್, ಶ್ರೀಲಂಕಾ ಹಾಗೂ ಸಿಂಗಾಪುರ ತಂಡಗಳು 'ಬಿ' ಗುಂಪಿನಲ್ಲಿವೆ.ವಿಶ್ವದ ನಂಬರ್ 10 ಆಟಗಾರ್ತಿ ದೀಪಿಕಾ ಅವರು ಎರಡು ವರ್ಷಗಳ ಹಿಂದೆ ಇದ್ದ ಫಾರ್ಮ್‌ನಲ್ಲೇ ಇದ್ದಾರೆ. ಇನ್ನು 21ನೇ ರ್ಯಾಂಕಿಂಗ್ ಹೊಂದಿರುವ ಜೋಷ್ನಾ ಸಹ ಉತ್ತಮ ಪ್ರದರ್ಶನ ನೀಡುತ್ತಿದ್ದು ತಂಡಕ್ಕೆ ಆಸರೆಯಾಗಲಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement