ನವಜೀತ್ ಕೌರ್ಗೆ ಕಂಚು
ತೈಪೇ ಸಿಟಿ: ಭಾರತದ ಶಾಟ್ಪಟ್ ಪ್ರತಿಭೆ ನವಜೀತ್ ಕೌರ್ ಧಿಲ್ಲಾನ್ 16ನೇ ಏಷ್ಯನ್ ಜೂನಿಯರ್ ಅಥ್ಲೆಟಿಕ್ಸ್ ಚಾಂಪಿಯನ್ಶಿಪ್ನಲ್ಲಿ ಕಂಚಿನ ಪದಕ ಗೆದ್ದುಕೊಂಡಿದ್ದಾರೆ. ಇದರೊಂದಿಗೆ ಭಾರತ ಈ ಕೂಟದಲ್ಲಿ ಮೊದಲ ದಿನವೇ ಪದಕದ ಖಾತೆ ತೆರೆದಂತಾಗಿದೆ.
ಪಂಜಾಬ್ನ ಹುಡುಗಿ ನವಜೀತ್, 14.99 ಮೀಟರ್ ದೂರದವರೆಗೆ ಶಾಟ್ಪಟ್ ಎಸೆಯುವ ಮೂಲಕ ಮೂರನೇ ಸ್ಥಾನದ ಗೌರವ ಪಡೆದರು. ಕಳೆದ ತಿಂಗಳು ಚೆನ್ನೈನಲ್ಲಿ ನಡೆದ ಜೂನಿಯರ್ ಫೆಡರೇಷನ್ ಕಪ್ನಲ್ಲಿ ಅವರು 15.89 ಮಿ. ಸಾಧನೆಯೊಂದಿಗೆ ರಾಷ್ಟ್ರೀಯ ದಾಖಲೆ ಬರೆದಿದಿದರು. ಆದರೆ, ಇಲ್ಲಿ ಮಾತ್ರ ಅವರು ಆ ಸಾಧನೆಯಿಂದ ಕೊಂಚ ಹಿಂದೆ ಉಳಿದರು.
ಹ್ಯಾಮರ್ ಎಸೆತದ ಸ್ಪರ್ಧೆಯಲ್ಲಿ ಭಾರತದ ಪ್ರಕಾಶ್ ಸಿಂಗ್ (60.34ಮೀ.) ಮತ್ತು ಕಪಿಲ್ ಮನ್ (59.20ಮೀ.) ಕ್ರಮವಾಗಿ ಆರು ಮತ್ತು ಏಳನೇ ಸ್ಥಾನ ಪಡೆದರು.
ಜೂನಿಯರ್ ಮಹಿಳೆಯರ 5000 ಮೀಟರ್ ಓಟದ ಸ್ಪರ್ಧೆಯಲ್ಲಿ ಭಾರತದ ಸಂಜೀವಿನಿ ಜಾಧವ್ 17:00.75 ಸೆ.ಗಳಲ್ಲಿ ಗುರಿ ಕ್ರಮಿಸಿ ಐದನೇ ಸ್ಥಾನ ಪಡೆದರು