ಭಾರತ ವನಿತೆಯರಿಗೆ 3ನೇ ಜಯ
ಕೌಲಾಲಂಪುರ: ಭಾರತದ ವನಿತೆಯರು ಆರು ಪಂದ್ಯಗಳ ಮಹಿಳೆಯರ ಹಾಕಿ ಟೆಸ್ಟ್ ಸರಣಿಯ ಮೂರನೇ ಪಂದ್ಯದಲ್ಲಿ ಆತಿಥೇಯ ಮಲೇಷಿಯಾ ತಂಡದ ವಿರುದ್ಧ 4-0 ಗೋಲುಗಳಿಂದ ಸುಲಭವಾಗಿ ಗೆಲವು ದಾಖಲಿಸಿದ್ದಾರೆ.
ಇದು ಭಾರತಕ್ಕೆ ಸತತ ಮೂರನೇ ಗೆಲುವಾಗಿದ್ದು, ಸರಣಿಯಲ್ಲಿ 3-0ಯಿಂದ ಪ್ರಭುತ್ವ ಸ್ಥಾಪಿಸಿದಂತಾಗಿದೆ.
ಭಾರತ ತಂಡದ ಪರ ಅನೂಪಾ ಬಾರ್ಲಾ 5ನೇ ನಿಮಿಷ, ಜಸ್ಪ್ರೀತ್ ಕೌರ್ 22ನೇ ನಿಮಿಷ, ವಂದನಾ ಕಟಾರಿಯಾ 59ನೇ ನಿಮಿಷ ಮತ್ತು ಅಮದೀಪ್ ಕೌರ್ 69ನೇ ನಿಮಿಷಗಳಲ್ಲಿ ಗೋಲು ಗಳಿಸಿ ಆಟದಲ್ಲಿ ಮಿಂಚಿದರು.
ಮುಂಬರುವ ಕಾಮನ್ವೆಲ್ತ್ ಗೇಮ್ಸ್ಗಾಗಿ ಇಲ್ಲಿ ಅನೇಕ ಪ್ರಯೋಗಗಳನ್ನು ಮಾಡಲಾಗುತ್ತಿದ್ದು, ಉತ್ತಮ ಪ್ರತಿಫಲ ಸಿಕ್ಕಿದೆ. ಮುಂದಿನ ಮಹತ್ವದ ಪಂದ್ಯಾವಳಿಗೆ ಅತ್ಯುತ್ತಮ ರೀತಿಯಲ್ಲಿ ಸಿದ್ಧತೆ ಮಾಡಿಕೊಳ್ಳುತ್ತಿದ್ದು, ತಂಡದ ಪ್ರದರ್ಶನ ತೃಪ್ತಿ ತಂದಿದೆ ಎಂದು ಭಾರತ ತಂಡದ ನಾಯಕಿ ರಿತು ರಾಣಿ ಪ್ರತಿಕ್ರಿಯಿಸಿದ್ದಾರೆ.