ಮೊದಲ ಟೆಸ್ಟ್: ಕಿಂಗ್ಸ್ಟನ್ನಲ್ಲಿ ಕಿವೀಸ್ ಕಿಂಗ್
ಕಿಂಗ್ಸ್ಟನ್: ಸ್ಪಿನ್ನರ್ಗಳಾದ ಮಾರ್ಕ್ ಕ್ರೇಗ್ 4/97 ಮತ್ತು ಇಶ್ ಸೋಧಿ 3/42 ಮಾರಕ ಬೌಲಿಂಗ್ ದಾಳಿಯ ನೆರವಿನೊಂದಿಗೆ ನ್ಯೂಜಿಲೆಂಡ್, ಮೊದಲ ಟೆಸ್ಟ್ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ವಿರುದ್ಧ 186 ರನ್ಗಳ ಬೃಹತ್ ಮೊತ್ತದ ಜಯ ದಾಖಲಿಸಿತು.
ದ್ವಿತೀಯ ಇನಿಂಗ್ಸ್ನಲ್ಲಿ ವೆಸ್ಟ್ ಇಂಡೀಸ್ ಜಯ ಸಾಧಿಸಲು 403 ರನ್ಗಳ ಗುರಿಯನ್ನು ಬೆನ್ನಟ್ಟಿತ್ತು. ಆದರೆ, ಇನ್ನೂ ಒಂದು ದಿನ ಬಾಕಿ ಇರುವಂತೆಯೇ ಕೇವಲ 216 ರನ್ಗಳಿಗೆ ಆಲೌಟ್ ಆಗುವ ಮೂಲಕ ತವರಿನ ಅಂಗಣದಲ್ಲೇ ಸೋಲನುಭವಿಸಿತು.
ಪಂದ್ಯ ಮುಕ್ತಾಯಗೊಳ್ಳುವ ಮುನ್ನ ವೆಸ್ಟ್ ಇಂಡೀಸ್ನ ಶೇನ್ ಶಿಲ್ಲಿಂಗ್ಫೋರ್ಡ್ ಅವರು ಕೊಂಚ ಬಲಿಷ್ಠ ಬ್ಯಾಟಿಂಗ್ ಪ್ರದರ್ಶಿಸಿದರು. ಕೇವಲ 25 ಎಸೆತಗಳಲ್ಲಿ ಅಜೇಯ 53 ರನ್ ದಾಖಲಿಸಿದ ಶಿಲ್ಲಿಂಗ್ಫೋರ್ಡ್ ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲೇ ಎರಡನೇ ವೇಗದ ಅರ್ಧ ಶತಕ ದಾಖಲಿಸಿದರು. ಅವರ ಅರ್ಧ ಶತಕದಲ್ಲಿ ಮೂರು ಬೌಂಡರಿಗಳು ಮತ್ತು ಐದು ಸಿಕ್ಸರ್ಗಳು ಸೇರಿದ್ದವು. ಶಿಲ್ಲಾಂಗ್ಫೋರ್ಡ್ ಮತ್ತು ಸುಲೇಮಾನ್ ಬೆನ್ (25) ಅಂತಿಮ ವಿಕೆಟ್ ಜತೆಯಾಟದಲ್ಲಿ 82 ರನ್ ಕಲೆ ಹಾಕಿದ್ದರು.
ಈ ಪಂದ್ಯದೊಂದಿಗೆ ಟೆಸ್ಟ್ ಕ್ರಿಕೆಟ್ಗೆ ಪದಾರ್ಪಣೆ ಮಾಡಿದ ನ್ಯೂಜಿಲೆಂಡ್ ಬೌಲರ್ ಕ್ರೇಗ್ ಅವರು, 188 ರನ್ ನೀಡಿ 8 ವಿಕೆಟ್ ಕಬಳಿಸಿದರು. ಇದರೊಂದಿಗೆ ಕ್ರೇಗ್ ಸಬಿನಾ ಪಾರ್ಕ್ನಲ್ಲಿ ನಡೆದ ಪಂದ್ಯದಲ್ಲಿ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.
ಸಂಕ್ಷಿಪ್ತ ಸ್ಕೋರ್: ನ್ಯೂಜಿಲೆಂಡ್ ಮೊದಲ ಇನಿಂಗ್ಸ್ 508/7 (ಡಿಕ್ಲೇರ್)
ವೆಸ್ಟ್ ಇಂಡೀಸ್ ಮೊದಲ ಇನಿಂಗ್ಸ್ 262
ನ್ಯೂಜಿಲೆಂಡ್ ದ್ವಿತೀಯ ಇನಿಂಗ್ಸ್ 156/8 (ಡಿಕ್ಲೇರ್)ವೆಸ್ಟ್ ಇಂಡೀಸ್ ದ್ವಿತೀಯ ಇನಿಂಗ್ಸ್ 216
ಶಿಲ್ಲಾಂಗ್ಫೋರ್ಡ್ ಅಜೇಯ 53
ರಾಮ್ದಿನ್ 34
ಬೌಲಿಂಗ್: ಕ್ರೇಗ್ 97/4, ಸೋಧಿ 42/3