ಬಿದ್ದ ಮಳೆ, ಒದ್ದೆ ಬಾಂಗ್ಲಾ, ಗೆದ್ದ ಭಾರತ
ದಾಳಿಕಾರರ ದಾಖಲೆಗಳ ಪ್ರದರ್ಶನ ಒಂದೆಡೆಯಾದರೆ, ಮತ್ತೊಂದೆಡೆ...
ಮೀರ್‌ಪುರ: ದಾಳಿಕಾರರ ದಾಖಲೆಗಳ ಪ್ರದರ್ಶನ ಒಂದೆಡೆಯಾದರೆ, ಮತ್ತೊಂದೆಡೆ ಬ್ಯಾಟ್ಸ್‌ಮನ್‌ಗಳ ಪೆವಿಲಿಯನ್ ಪೆರೇಡ್‌ನಿಂದಾಗಿ ಭಾರತ ಮತ್ತು ಬಾಂಗ್ಲಾದೇಶ ನಡುವಿನ ಎರಡನೇ ಏಕದಿನ ಕ್ರಿಕೆಟ್ ಪಂದ್ಯ ಆಶ್ಚರ್ಯಕರ ಫಲಿತಾಂಶ ಒದಗಿಸಿದೆ
ಶೇರೇ-ಬಾಂಗ್ಲಾ ರಾಷ್ಟ್ರೀಯ ಕ್ರೀಡಾಂಗಣದಲ್ಲಿ ಮಂಗಳವಾರ ನಡೆದ ಪಂದ್ಯದಲ್ಲಿ ಭಾರತ ತಂಡ ಡಕ್‌ವರ್ತ್ ಲೂಯಿಸ್ ನಿಯಮದಡಿ 47 ರನ್‌ಗಳಿಂದ ಬಾಂಗ್ಲಾದೇಶವನ್ನು ಮಣಿಸಿತು. ಆ ಮೂಲಕ ಇನ್ನೂ ಒಂದು ಪಂದ್ಯ ಇರುವಂತೆಯೇ ಮೂರು ಪಂದ್ಯಗಳ ಸರಣಿಯನ್ನು ಭಾರತ ತಂಡ 2-0 ಮುನ್ನಡೆಯೊಂದಿಗೆ ಗೆದ್ದುಕೊಂಡಿತು.
ಟಾಸ್ ಸೋತರೂ ಮೊದಲು ಬ್ಯಾಟ್ ಮಾಡುವ ಅವಕಾಶ ಪಡೆದ ಭಾರತ 25.3 ಓವರುಗಳಲ್ಲಿ ಕೇವಲ 105 ರನ್‌ಗಳ ಅತ್ಯಲ್ಪ ಮೊತ್ತಕ್ಕೆ ಪತನಗೊಂಡಿತು. ಇದು ಭಾರತ ತಂಡದ ಬಾಂಗ್ಲಾದೇಶ ವಿರುದ್ಧದ ಕಡಿಮೆ ಮೊತ್ತವಾಗಿದೆ. ಈ ಮುನ್ನ 2007ರ ವಿಶ್ವಕಪ್‌ನ ಪೋರ್ಟ್ ಆಫ್ ಸ್ಪೇನ್‌ನಲ್ಲಿನ ಪಂದ್ಯದಲ್ಲಿ 191 ರನ್‌ಗಳಿಸಿದ್ದು, ಅಲ್ಪ ಮೊತ್ತವಾಗಿತ್ತು.
ಭಾರತ 5.2 ಓವರುಗಳಲ್ಲಿ 1 ವಿಕೆಟ್‌ಗೆ 14 ರನ್‌ಗಳಿಸಿದಾಗ ಮಳೆ ಸುರಿಯಲಾರಂಭಿಸಿ ಆಟವನ್ನು ನಿಲ್ಲಿಸಿತು. ಸುಮಾರು ಎರಡೂವರೆ ಗಂಟೆಗಳ ನಂತರ ಮತ್ತೆ ಪಂದ್ಯ ಆರಂಭಗೊಂಡಾಗ ನಿಗದಿತ ಓವರುಗಳ ಸಂಖ್ಯೆಯನ್ನು 41ಕ್ಕೆ ಇಳಿಸಲಾಯಿತು.
ಆದರೆ, ಭಾರತದ ಬ್ಯಾಟ್ಸ್‌ಮನ್‌ಗಳು ಕೆಲ ಕೆಟ್ಟ ಹೊಡೆಗಳನ್ನು ಆಯ್ಕೆ ಮಾಡಿಕೊಂಡು ಒಂದರಮೇಲೊಂದರಂತೆ ವಿಕೆಟ್ ಕೈಚೆಲ್ಲಿದರು. ನಾಯಕ ಸುರೇಶ್ ರೈನಾ 23 ಎಸೆತಗಳಲ್ಲಿ 3 ಬೌಂಡರಿಗಳಿದ್ದ 27 ರನ್‌ಗಳಿಸಿದ್ದೇ ವೈಯಕ್ತಿಕ ಗರಿಷ್ಠ ಮೊತ್ತವಾಯಿತು.
ಚೊಚ್ಚಲ ಪಂದ್ಯದಲ್ಲೇ ಮಿಂಚಿದ ತಸ್ಕಿನ್:
ಈ ಪಂದ್ಯದ ಮೂಲಕ ಏಕದಿನ ಕ್ರಿಕೆಟ್ ರಂಗ ಪ್ರವೇಶಿಸಿದ ವೇಗದ ಬೌಲರ್ ತಸ್ಕಿನ್ ಅಹ್ಮದ್ 28 ರನ್ ನೀಡಿ 5 ವಿಕೆಟ್ ಪಡೆದು ಗಮನ ಸೆಳೆದರು.
ಈ ಮೂಲಕ ಅವರು ಚೊಚ್ಚಲ ಪಂದ್ಯದಲ್ಲಿಯೇ 5 ವಿಕೆಟ್ ಪಡೆದ ಬಾಂಗ್ಲಾದ ಮೊದಲ ಬೌಲರ್ ಎಂಬ ದಾಖಲೆ ಬರೆದರು. ಈ ಮುನ್ನ ಬಾಂಗ್ಲಾ ಪರ ಸೋಹಗ್ ಗಾಜಿ ಮತ್ತು ರೂಬೆಲ್ ಹುಸೇನ್ ತಮ್ಮ ಚೊಚ್ಚಲ ಪಂದ್ಯದಲ್ಲಿ ತಲಾ 4 ವಿಕೆಟ್ ಪಡೆದಿತ್ತು ದಾಖಲೆಯಾಗಿತ್ತು.ಬಿನ್ನಿ, ಮೋಹಿತ್ ದಾಳಿಗೆ ಬಾಂಗ್ಲಾ ತತ್ತರ:
ಸಾಧಾರಣ ಗುರಿ ಬೆಂಬತ್ತಿದ ಬಾಂಗ್ಲಾದೇಶ ಕೂಡ ನಾಟಕೀಯ ಕುಸಿತ ಅನುಭವಿಸಿ ಕೇವಲ 17.4 ಓವರುಗಳಲ್ಲಿ 58 ರನ್‌ಗಳಿಗೆ ಆಲೌಟಾಯಿತು. ಮಿಥುನ್ ಅಲಿ 39 ಎಸೆತಗಳಲ್ಲಿ 5 ಬೌಂಡರಿ ಹೊಂದಿದ್ದ 26 ರನ್‌ಗಳಿಸಿದ್ದೇ ಆತಿಥೇಯರ ಪರ ಉತ್ತಮ ಮೊತ್ತವಾಯಿತು.
ಆಲ್‌ರೌಂಡರ್ ಸ್ಟುವರ್ಟ್ ಬಿನ್ನಿ 6 ಹಾಗೂ ಮೋಹಿತ್ ಶರ್ಮಾ 4 ವಿಕೆಟ್ ಪಡೆದು ಭಾರತಕ್ಕೆ ರೋಚಕ ಗೆಲವು ತಂದುಕೊಟ್ಟರು.
ಪಂದ್ಯದಲ್ಲಿ ಎರಡೂ ಇನಿಂಗ್ಸ್ ಮೊತ್ತ ಸೇರಿ (163 ರನ್) 20 ವಿಕೆಟ್‌ಗಳು ಉರುಳಿದವು. ಆ ಮೂಲಕ ಕಡಿಮೆ ರನ್‌ಗಳಿಗೆ ಎರಡೂ ತಂಡಗಳು ಆಲೌಟಾದ ದಾಖಲೆ ಕೂಡ ಇದಾಯಿತು.
ತೇವಗೊಂಡ ಪಿಚ್ ಮೇಲೆ ಎರಡೂ ತಂಡಗಳಿಗೆ ಸುಲಭವಾಗಿ ಬ್ಯಾಟ್ ಮಾಡಲು ಸಾಧ್ಯವಾಗಲಿಲ್ಲ. ಆದರೆ, ಬೌಲರ್‌ಗಳು ಮಾತ್ರ ಪಿಚ್‌ನ ಲಾಭ ಪಡೆದು ಪಂದ್ಯಕ್ಕೆ ಕುತೂಹಲದ ತಿರುವು ನೀಡಿದರು.
ಸ್ಕೋರ್ ವಿವರ
ಭಾರತ 25.3 ಓವರುಗಳಲ್ಲಿ 105
ರಾಬಿನ್ ಉತ್ತಪ್ಪ ಸಿ ಜಿಯುರ್ ಬಿ ತಸ್ಕಿನ್ 14, ರಹಾನೆ ಎಲ್‌ಬಿ ಮೊರ್ತಾಜ 0, ಪೂಜಾರ ಎಲ್‌ಬಿ ಬಿ ತಸ್ಕಿನ್ 11, ರಾಯುಡು ಎಲ್‌ಬಿ ಬಿ ತಸ್ಕಿನ್ 1, ರೈನಾ ರನೌಟ್ 27, ಸಹಾ ಎಲ್‌ಬಿ ಮೊರ್ತಾಜ 5, ಬಿನ್ನಿ ಸಿ ಮುಷ್ಫೀಕರ್ ಬಿ ತಸ್ಕಿನ್ 3, ಅಕ್ಷರ್ ಬಿ ಹುಸೇನ್ 8, ಅಮಿತ್ ಮಿಶ್ರಾ ಎಲ್‌ಬಿ ಬಿ ತಸ್ಕಿನ್ 4, ಮೋಹಿತ್
ಶರ್ಮಾ ಅಜೇಯ 4, ಉಮೇಶ್ ಸಿ ನಾಸಿರ್ ಬಿ ಶಕೀಬ್ 17. ಇತರೆ: (ಲೆಗ್‌ಬೈ-6, ವೈ-5) 11.
ವಿಕೆಟ್ ಪತನ: 1-1, 2-26, 3-28, 4-55, 5-65, 6-66, 7-75, 8-81, 9-86, 10-105.ಬೌಲಿಂಗ್ ವಿವರ: ಮೊರ್ತಾಜ 9-1-35-2, ಹುಸೇನ್ 5-1-26-1, ತಸ್ಕಿನ್ ಅಹ್ಮದ್ 8-0-28-5, ಜಿಯುರ್ 1-0-2-0, ಶಕೀಬ್ 2.3-0-8-1.
ಬಾಂಗ್ಲಾದೇಶ 17.4 ಓವರುಗಳಲ್ಲಿ 58
ತಮೀಮ್ ಸಿ ಸಹಾ ಬಿ ಮೋಹಿತ್ 4, ಅನಾಮುಲ್ ಸಿ ರಹಾನೆ ಬಿ ಮೋಹಿತ್ 0, ಮಿಥುನ್ ಅಲಿ ಸಿ ಪಟೇಲ್ ಬಿ ಬಿನ್ನಿ 26, ಮುಷ್ಫೀಕರ್ ಸಿ ಸಹಾ ಬಿ ಮೋಹಿತ್ 4, ಮಹಮುದುಲ್ಲಾ ಸಿ ರಾಯುಡು ಬಿ ಬಿನ್ನಿ 0, ನಾಸಿರ್ ಬಿ ಬಿನ್ನಿ 5, ಜಿಯುರ್ ಸಿ ಪಟೇಲ್ ಬಿ ಮೋಹಿತ್ 0, ಮೊರ್ತಾಜ ಸಿ ಸಹಾ ಬಿ ಬಿನ್ನಿ 2, ತಸ್ಕಿನ್ ಅಜೇಯ 0, ಹುಸೇನ್ ಬಿ ಬಿನ್ನಿ 0. ಇತರೆ: (ವೈ-6) 6.
ವಿಕೆಟ್ ಪತನ: 1-4, 2-13, 3-44, 4-50, 5-50, 6-52, 7-52, 8-56, 9-58, 10-58.
ಬೌಲಿಂಗ್ ವಿವರ: ಮೋಹಿತ್ ಶರ್ಮಾ 8-2-22-4, ಉಮೇಶ್ ಯಾದವ್ 5-0-32-0, ಸ್ಟುವರ್ಟ್ ಬಿನ್ನಿ 4.4-2-4-6.