ಭಾರತೀಯರ ಕ್ಲೀನ್ಸ್ವೀಪ್
ಕೌಲಾಲಂಪುರ: ಭಾರತ ತಂಡದ ವನಿತೆಯರು ಆರನೇ ಹಾಗೂ ಅಂತಿಮ ಹಾಕಿ ಟೆಸ್ಟ್ ಪಂದ್ಯದಲ್ಲೂ ಮಲೇಷಿಯಾ ವಿರುದ್ಧ ಜಯಭೇರಿ ಬಾರಿಸಿದ್ದಾರೆ. ಈ ಗೆಲವಿನೊಂದಿಗೆ ಭಾರತದ ಆಟಗಾರ್ತಿಯರು ಆರು ಪಂದ್ಯಗಳ ಮಹಿಳಾ ಹಾಕಿ ಟೆಸ್ಟ್ ಸರಣಿಯನ್ನು 6-0 ಗೆಲವಿನ ಅಂತರದಲ್ಲಿ ಕ್ಲೀನ್ಸ್ವೀಪ್ ಮಾಡಿಕೊಂಡಿದ್ದಾರೆ.
ಮಂಗಳವಾರ ನಡೆದ ಅಂತಿಮ ಟೆಸ್ಟ್ ಪಂದ್ಯದಲ್ಲಿ ಭಾರತ ತಂಡ 5-2 ಗೋಲುಗಳಿಂದ ಮಲೇಷಿಯಾ ತಂಡವನ್ನು ಪರಾಭವಗೊಳಿಸಿದರು. ಆ ಮೂಲಕ ಭಾರತದ ವನಿತೆಯರು ಮಲೇಷಿಯಾವನ್ನು ಸ್ಮರಣೀಯವಾಗಿಸಿಕೊಂಡರು.
ಜೊತೆಗೆ ಗ್ಲಾಸ್ಗೊದಲ್ಲಿ ಜುಲೈ 23ರಿಂದ ಆರಂಭವಾಗಲಿರುವ ಕಾಮನ್ವೆಲ್ತ್ ಗೇಮ್ಸ್ಗಾಗಿ ಭಾರತೀಯ ಮಹಿಳಾ ಹಾಕಿ ತಂಡ ಉತ್ತಮ ಸಿದ್ಧತೆಯನ್ನು ಮಾಡಿಕೊಂಡಂತಾಗಿದೆ.
ಅಂತಿಮ ಟೆಸ್ಟ್ನಲ್ಲಿ ಭಾರತ ತಂಡದ ಪರ ಪೂನಂ ರಾಣಿ 3ನೇ ನಿಮಿಷ, ಸುನೀತಾ ಲಾಕ್ರಾ 14ನೇ ನಿಮಿಷ, ಅನುರಾಧಾ 28ನೇ ನಿಮಿಷ, ರಿತುಶಾ ಆರ್ಯ 34ನೇ ಮತ್ತು 35ನೇ ನಿಮಿಷ ಗೋಲು ಬಾರಿಸಿದರು.