ವಿಂಬಲ್ಡನ್: ಸಾನಿಯಾ ಜೋಡಿಗೆ 4ನೇ ಶ್ರೇಯಾಂಕ
ಲಂಡನ್: ಭಾರತದ ಸಾನಿಯಾ ಮಿರ್ಜಾ ಹಾಗೂ ಜಿಂಬಾಬ್ವೆಯ ಕಾರಾ ಬ್ಲ್ಯಾಕ್ ಜೋಡಿಯು ಮುಂಬರುವ ವಿಂಬಲ್ಡನ್ ಗ್ರ್ಯಾಂಡ್ ಸ್ಲಾಮ್ ಟೆನಿಸ್ ಟೂರ್ನಿಯ ಮಹಿಳೆಯರ ಡಬಲ್ಸ್ ವಿಭಾಗದಲ್ಲಿ ನಾಲ್ಕನೇ ಶ್ರೇಯಾಂಕ ಪಡೆದಿದ್ದಾರೆ.
ಇನ್ನು ಪುರುಷರ ಡಬಲ್ಸ್ ವಿಭಾಗದಲ್ಲಿ ಲಿಯಾಂಡರ್ ಪೇಸ್ ಹಾಗೂ ರಾಡೆಕ್ ಸ್ಟೆಪಾನಿಕ್ 5ನೇ ಶ್ರೇಯಾಂಕ, ರೋಹನ್ ಬೋಪಣ್ಣ ಹಾಗೂ ಪಾಕಿಸ್ತಾನದ ಐಸಾಮ್ ಉಲ್‌ಹಕ್ ಖುರೇಶಿ 8ನೇ ಶ್ರೇಯಾಂಕ ಪಡೆದಿದ್ದಾರೆ. ಭಾರತದ ಪುರವ್ ರಾಜ್ ಬ್ರೆಜಿಲ್‌ನ ಮಾರ್ಸೆಲೊ ಡೆಮೊಲಿನರ್ ಜತೆ ಕಣಕ್ಕಿಳಿಯಲಿದ್ದು, ಅರ್ಹತಾ ಸುತ್ತಿನಲ್ಲಿ ಕಾದಾಟ ನಡೆಸಲಿದ್ದಾರೆ. ಇನ್ನು ಸೋಮ್‌ದೇವ್ ದೇವವರ್ಮನ್ ಸಿಂಗಲ್ಸ್ ವಿಭಾಗದಲ್ಲಿ ಭಾಗವಹಿಸುತ್ತಿರುವ ಏಕೈಕ ಆಟಗಾರನಾಗಿದ್ದಾರೆ.