3ನೇ ಪಂದ್ಯ ಮಳೆಗಾಹುತಿ
ನಿರೀಕ್ಷೆಯಂತೆ ಭಾರತ ಹಾಗೂ ಬಾಂಗ್ಲಾದೇಶ ವಿರುದ್ಧದ ಮೂರನೇ ಏಕದಿನ ಪಂದ್ಯಕ್ಕೆ ಮಳೆ ಅಡ್ಡಿ ಪಡಿಸಿದ್ದು, ಪಂದ್ಯವನ್ನು...
ಮೀರ್ಪುರ: ನಿರೀಕ್ಷೆಯಂತೆ ಭಾರತ ಹಾಗೂ ಬಾಂಗ್ಲಾದೇಶ ವಿರುದ್ಧದ ಮೂರನೇ ಏಕದಿನ ಪಂದ್ಯಕ್ಕೆ ಮಳೆ ಅಡ್ಡಿ ಪಡಿಸಿದ್ದು, ಪಂದ್ಯವನ್ನು ರದ್ದುಗೊಳಿಸಲಾಯಿತು.
ಗುರುವಾರ ಇಲ್ಲಿನ ಶೇರೇ ಬಾಂಗ್ಲಾ ರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಭಾರತ ತಂಡ ಮೊದಲು ಬ್ಯಾಟಿಂಗ್ ಮಾಡಲು ನಿರ್ಧರಿಸಿತು. ನಂತರ 34.2 ಓವರ್ಗಳಲ್ಲಿ 9 ವಿಕೆಟ್ ಕಳೆದುಕೊಂಡು 119 ರನ್ ದಾಖಲಿಸಿತ್ತು. ಪಂದ್ಯ ಮಳೆಯಿಂದ ರದ್ದಾದ ಹಿನ್ನೆಲೆಯಲ್ಲಿ ಭಾರತ, ಮೂರು ಏಕದಿನ ಪಂದ್ಯಗಳ ಸರಣಿಯನ್ನು 2-0 ಅಂತರದಲ್ಲಿ ಗೆದ್ದುಕೊಂಡಿತು. ಪಿಚ್ನಲ್ಲಿ ಮಳೆಯಿಂದಾಗಿ ತೇವಾಂಶ ಹೆಚ್ಚಿದ್ದ ಕಾರಣ ಬ್ಯಾಟ್ಸ್ಮನ್ಗಳು ಮತ್ತೆ ಪರದಾಡುವಂತಹ ಪರಿಸ್ಥಿತಿ ಎದುರಾಯಿತು. ಪರಿಣಾಮ ಭಾರತ ತಂಡ ಕೇವಲ 16 ರನ್ ದಾಖಲಿಸುವಷ್ಟರಲ್ಲಿ 4 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು.
ಪಂದ್ಯದ ವೇಳೆ ಪದೇ ಪದೇ ಮಳೆ ಅಡ್ಡಿ ಪಡಿಸಿದ ಪರಿಣಾಮ ಪಂದ್ಯವನ್ನು ಮೂರು ಬಾರಿ ನಿಲ್ಲಿಸಲಾಯಿತು. ಆರಂಭದಲ್ಲಿ ಮೊದಲು ಪಂದ್ಯವನ್ನು 40 ಓವರ್ಗೆ ಇಳಿಸಲಾಯಿತು. ಆರಂಭದಲ್ಲಿ ಪಂದ್ಯದ ಓವರ್ಗಳನ್ನು ಕಡಿಮೆ ಮಾಡಲಿಲ್ಲ. ಆದರೆ ಮೂರನೇ ಬಾರಿಗೆ ಆರಂಭವಾದ ಮಳೆ ನಿರಂತರವಾಗಿ ಸುರಿದ ಪರಿಣಾಮ ಪಂದ್ಯವನ್ನು ರದ್ದು ಮಾಡಲಾಯಿತು.
ಭಾರತದ ಪರ ಚೇತೇಶ್ವರ ಪೂಜಾರ 27, ಸುರೇಶ್ ರೈನಾ 25, ಸ್ಟುವರ್ಟ್ ಬಿನ್ನಿ ಅಜೇಯ 25 ರನ್ಗಳಿಸಿದ್ದು ಭಾರತದ ಪರ ಗರಿಷ್ಠ ಮೊತ್ತವಾಯಿತು. ಬಾಂಗ್ಲಾ ಪರ ಶಕೀಬ್ ಅಲ್ ಹಸನ್ 3, ಟಸ್ಕಿನ್ ಅಹ್ಮದ್ ಹಾಗೂ ಅಲ್ ಅಮೀನ್ ತಲಾ 2 ವಿಕೆಟ್ ಪಡೆದರು.