ಗಾವಸ್ಕರ್ಗೆ ಸಿಂಗಾಪುರ ತಂಡದ ಷೇರು
ಲಂಡನ್: ವೃತ್ತಿಪರವಾಗಿ ಕ್ರಿಕೆಟ್ಆಟಗಾರನಾಗಿದ್ದರೂ ಟೆನಿಸ್ ಕ್ರೀಡೆಯ ಅಭಿಮಾನಿಯಾಗಿರುವ ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಸುನಿಲ್ ಗಾವಸ್ಕರ್, ಇಂಟರ್ನ್ಯಾಷನಲ್ ಪ್ರಿಮಿಯರ್ ಟೆನಿಸ್ ಲೀಗ್ನ ಸಿಂಗಾಪುರ ತಂಡದ ಷೇರು ಖರೀಸಿದ್ದಾರೆ. ಈ ಮೂಲಕ ತಂಡದ ಸಹ ಮಾಲೀಕರಾಗಿದ್ದಾರೆ.
ಸೋಮವಾರದಿಂದ ವಿಂಬಲ್ಡನ್ ಗ್ರ್ಯಾನ್ಸ್ಲಾಮ್ ಟೂರ್ನಿ ಆರಂಭವಾಗುತ್ತಿದ್ದು, ಈ ಸಂದಭಂದಲ್ಲಿ ಸಿಂಗಾಪುರ ಫ್ರಾಂಚೈಸಿಯ ಸಹ ಮಾಲೀಕರಾಗಿ ಸುನಿಲ್ ಗಾವಸ್ಕರ್ ಅವರ ಹೆಸರನ್ನು ಪ್ರಕಟಿಸಲಾಗಿದೆ ಎಂದು ಡೈಲಿ ಟೆಲಿಗ್ರಾಫ್ ವರದಿ ಮಾಡಿದೆ.