17ರ ವಿಶ್ವಕಪ್ಗೆ ಫಿಫಾ ಹಣಕಾಸು ನೆರವು
ರಿಯೊ ಡಿ ಜನೈರೋ: ಭಾರತದಲ್ಲಿ 2017ರಲ್ಲಿ ನಡೆಯಲಿರುವ 17 ವರ್ಷದೊಳಗಿನ ಫುಟ್ಬಾಲ್ ಪಂದ್ಯಾವಳಿಯ ಯಶಸ್ಸಿಗೆ ಅಖಿಲ ಭಾರತ ಫುಟ್ಬಾಲ್ ಫೆಡರೇಷನ್ (ಎಐಎಫ್ಎಫ್) ಮಾತ್ರ ಕಷ್ಟಪಡುತ್ತಿಲ್ಲ. ಪಂದ್ಯಾವಳಿಯ ಹಿತದೃಷ್ಟಿಯಿಂದ ಫಿಫಾ 38 ಮಿಲಿಯನ್ ಅಮೆರಿಕನ್ ಡಾಲರ್ (ಅಂದಾಜು ರು. 2288550000) ಹಣಕಾಸು ನೆರವು ನೀಡಿದೆ.
ಭಾರತದಲ್ಲಿ ನಡೆಯಲಿರುವ ಕಿರಿಯರ ಫುಟ್ಬಾಲ್ ವಿಶ್ವಕಪ್ ಪಂದ್ಯಾವಳಿ ಯಶಸ್ವಿಯಾಗಿ ನಡೆಯಲು ಎಲ್ಲ ರೀತಿಯ ನೆರವು ನೀಡಲು ಫಿಫಾ ಅಧ್ಯಕ್ಷರಾದ ಸೆಪ್ ಬ್ಲಾಟರ್ ಗಂಭೀರ ಚಿಂತನೆ ನಡೆಸಿದ್ದಾರೆ ಎಂದು, ಬ್ರೆಜಿಲ್ನಲ್ಲಿ ನಡೆಯುತ್ತಿರುವ ಫುಟ್ಬಾಲ್ ವಿಶ್ವಕಪ್ ಪಂದ್ಯಾವಳಿಗೂ ಮುನ್ನ ನಡೆದ ಫಿಫಾ ಸಭೆಯಲ್ಲಿ ಭಾಗವಹಿಸಿದ್ದ ಉನ್ನತ ಅಧಿಕಾರಿಗಳು ತಿಳಿಸಿದ್ದಾರೆ.
--