ಕ್ರೀಡೆ

ಶೂ ಸುಳ್ಳು

ಫಾರ್ಮುಲಾ ಒನ್ ರಾಜಕುಮಾರ ಮೈಕಲ್ ಶುಮಾಕರ್ ಕೋಮಾದಿಂದ ಹೊರಬಂದಿದ್ದಾರೆ ಎಂಬ ಸುದ್ದಿಯಿಂದ ...

ಫಾರ್ಮುಲಾ ಒನ್ ರಾಜಕುಮಾರ ಮೈಕಲ್ ಶುಮಾಕರ್ ಕೋಮಾದಿಂದ ಹೊರಬಂದಿದ್ದಾರೆ ಎಂಬ ಸುದ್ದಿಯಿಂದ ಇಡೀ ವಿಶ್ವವೇ ಸಂತಸದ ಹೊನಲಲ್ಲಿ ತೇಲಿತ್ತು. ಆದರೆ, ಅವರ ಮ್ಯಾನೇಜರ್ ಜನರಿಗೆ ಹೀಗೊಂದು ಸುಳ್ಳು ಹೇಳಿದರೇ? ಒಂದು ಅನುಮಾನ ಈಗ ಶೂಮಾಕರ್ ಅಭಿಮಾನಿಗಳನ್ನು ಬಲವಾಗಿ ಕಾಡತೊಡಗಿದೆ.  ಕಾರಣ, ಶೂಮಾಕರ್ ಕೋಮಾದಿಂದ ಎದ್ದು ಬಂದಿದ್ದಾರೆ ಎಂಬ ಸುದ್ದಿ ಹೊರಡಿಸಿದ ಅವರ ಮ್ಯಾನೇಜರ್ ವಿರುದ್ಧ ಫಾರ್ಮುಲಾ ಒನ್ ಮಾಜಿ ವೈದ್ಯ ಡಾ. ಗ್ಯಾರಿ ಹಾರ್ಟೆಸ್ಟೀನ್ ಹರಿಹಾಯ್ದಿದ್ದಾರೆ. ಈ ಕುರಿತು ಆಂಗ್ಲ ದೈನಿಕ ಡೈಲಿ ಮೇಲ್ ವರದಿ ಮಾಡಿದೆ.
ಡಾ. ಗ್ಯಾರಿ ಹೇಳುವುದೇನು?
ಶುಮಾಕರ್ ಕೋಮಾದಿಂದ ಹೊರ ಬಂದಿದ್ದಾರೆ ಎಂಬುದು ಶುದ್ಧ ಸುಳ್ಳು ಸುದ್ದಿ. 45 ವರ್ಷದ ಶುಮಾಕರ್ ಎಂದೂ ಪ್ರಜ್ಞಾವಸ್ಥೆಗೆ ಮರಳದ ಸ್ಥಿತಿ ತಲುಪಿದ್ದಾರೆ. ಶುಮಾಕರ್ ಅವರನ್ನು ಫ್ರಾನ್ಸ್‌ನ ಗ್ರೆನೋಬಲ್ ವಿಶ್ವವಿದ್ಯಾಲಯದ ಆಸ್ಪತ್ರೆಯಿಂದ ಸ್ವಿಜರ್ಲೆಂಡ್‌ನ ಲಾವೂಸನ್ನೆ ವಿಶ್ವವಿದ್ಯಾಲಯದ ಆಸ್ಪತ್ರೆಗೆ ಹೆಚ್ಚಿನ ಚಿಕಿತ್ಸೆಗಾಗಿ ಸ್ಥಳಾಂತರಿಸಲಾಗಿದೆ. ಆಸ್ಪತ್ರೆ ಸಿಬ್ಬಂದಿ ಹೇಳುವ ಪ್ರಕಾರ ಶುಮಾಕರ್ ಚೇತರಿಸಿಕೊಳ್ಳಲಿದ್ದಾರೆ ಎಂಬ ವಿಶ್ವಾಸವನ್ನು ನಾವು ಹೊಂದಿದ್ದೇವೆ. ಆದರೆ, ಅವರು ಈಗಾಗಲೇ ಪ್ರಜ್ಞೆಗೆ ಮರಳಿರುವ ಬಗ್ಗೆ ನಮಗೆ ಯಾವುದೇ ಸುಳಿವು ದೊರೆತಿಲ್ಲ. ಕಳೆದ ಆರು ತಿಂಗಳ ಹಿಂದೆ ಸ್ಕೀಯಿಂಗ್ ಮಾಡುವಾಗ ಉಂಟಾದ ಅಪಘಾತದಿಂದ ಪ್ರಜ್ಞೆ ಕಳೆದುಕೊಂಡಿರುವ ಅವರು ಆದಷ್ಟು ಬೇಗನೆ ಚೇತರಿಸಿಕೊಳ್ಳಲಿ ಎಂಬುದೇ ನಮ್ಮ ಪ್ರಾರ್ಥನೆ ಎಂದಿದ್ದಾರೆ.
ಆ್ಯಂಬುಲೆನ್ಸ್ ಸಿಬ್ಬಂದಿ ಹೇಳುವುದೇನು
ಫ್ರಾನ್ಸ್ ಆಸ್ಪತ್ರೆಯಿಂದ ಸ್ವೀಜರ್ಲೆಂಡ್‌ಗೆ ಸ್ಥಳಾಂತರ ಮಾಡುತ್ತಿದ್ದಾಗ ಶುಮಾಕರ್ ಪ್ರಜ್ಞೆಗೆ ಮರಳಿದ್ದರು. ಅವರು ಕಣ್ಣು ತೆರೆದು ನೋಡಿದರು. ಆದರೆ, ಯಾವುದೇ ರೀತಿಯ ಮಾತುಕತೆ ಆಡಲಿಲ್ಲ ಎಂದು ಖಾಸಗಿ ಆ್ಯಂಬುಲೆನ್ಸ್ ಸಂಸ್ಥೆಯೊಂದು ತಿಳಿಸಿರುವುದಾಗಿ ಸ್ವಿಸ್ ದೈನಿಕ ಬ್ಲಿಕ್ ವರದಿ ಮಾಡಿದೆ. ಯಾವುದನ್ನು ನಂಬುವುದು ಆದಷ್ಟು ಬೇಗ ಶುಮಿ ಎದ್ದು ಬರಲಿ ಎಂದು ಅವರ ಅಭಿಮಾನಿಗಳು ದೇವರಲ್ಲಿ ಮೊರೆ ಇಟ್ಟಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಸ್ಟಿಂಗ್‌ ಆಪರೇಷನ್‌ ಪ್ರಕರಣ: ಮುಂದಿನ ನಿರ್ಧಾರ ಸಿಎಂ ಡಿ.ಕೆ ಶಿವಕುಮಾರ್`ಗೆ ಬಿಟ್ಟ ಸಂಪುಟ; ಸಾಕ್ಷ್ಯಾಧಾರ ಮೇಲೆ ಮುಂದಿನ ಕ್ರಮ!

ದೆಹಲಿಯ ರಾಮಲೀಲಾದಲ್ಲಿ ಈ ಬಾರಿ ರಾವಣನ ಜೊತೆಗೆ 30 ಅಡಿ ಎತ್ತರದ ಕಾಕ್ರೋಚ್ ಪ್ರತಿಕೃತಿ ದಹನ!

Ramayana: 'ರಾಮಾಯಣ'ದ ರನ್ ಟೈಮ್ ಮೂರು ಗಂಟೆಗೂ ಹೆಚ್ಚು; ಅಮೆರಿಕದಲ್ಲಿ 'PG-13' ರೇಟಿಂಗ್!

15 ವರ್ಷದ ಹಳೆ ವಿಡಿಯೋ ಅದಂತೆ.., ರಾಜಕೀಯ ತೆವಲಿಗೆ ಮಾಡುತ್ತಿದ್ದಾರೆ: ಬಿ.ಕೆ ಹರಿಪ್ರಸಾದ್ ಗರಂ

'ಕುಟುಂಬದ ಕನಸು ನನಸು': 'ಜೈಲರ್ 2' ಬಿಡುಗಡೆ ಬೆನ್ನಲ್ಲೇ ನಟಿ ಮೇಘನಾ ರಾಜ್ ಮಾತು!