ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕ್ರೀಡೆ

ವಿದರ್ಭಗೆ ಗಣೇಶ್ ಸತೀಶ್?

Vishwanath S
Updated On : 22 Jun 2014, 12:05 pm

ಬೆಂಗಳೂರು: ಕರ್ನಾಟಕ ರಣಜಿ ತಂಡ ಪ್ರತಿಭಾನ್ವಿತ ಬ್ಯಾಟ್ಸ್‌ಮನ್ ಗಣೇಶ್ ಸತೀಶ್ ಮುಂದಿನ ಋತುವಿನಲ್ಲಿ ಕರ್ನಾಟಕದ ಪರ ಆಡುವುದು ಅನುಮಾನವಾಗಿದೆ.     ಕಾರಣ ಗಣೇಶ್ ಸತೀಶ್, ಮುಂದಿನ ಋತುವಿನಲ್ಲಿ ವಿದರ್ಭಪರ ಆಡುವ ಮಾತುಗಳು ಕೇಳಿ ಬಂದಿವೆ. ಈ ಕುರಿತು ಇನ್ನು ವಿದರ್ಭ ಕ್ರಿಕೆಟ್ ಸಂಸ್ಥೆ ಹಾಗೂ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಗಳ ಅನುಮತಿ ಹಾಗೂ ಪ್ರಕ್ರಿಯೆ ಕಾರ್ಯ ಇನ್ನಷ್ಟೇ ಅಧಿಕೃತವಾಗಿ ಪೂರ್ಣಗೊಳ್ಳಬೇಕಿದೆ.
ಪ್ರತಿಭಾನ್ವಿತ ಬ್ಯಾಟ್ಸ್‌ಮನ್ ಬೇರೆ ರಾಜ್ಯಕ್ಕೆ ಆಡುತ್ತಿರುವ ಸುದ್ದಿ ಕೇಳಿ ಕೆಲವು ಅಭಿಮಾನಿಗಳು ಬೇಸರಗೊಳ್ಳಬಹುದು. ಆದರೆ, ಈ ನಿರ್ಧಾರ ಆಟಗಾರನ ದೃಷ್ಠಿಯಲ್ಲಿ ನೋಡುವುದಾದರೆ ತಪ್ಪಿಲ್ಲ.
ಕರ್ನಾಟಕ ತಂಡದ ಪ್ರಸ್ತುತ ಪರಿಸ್ಥಿತಿಯಲ್ಲಿ ಪ್ರತಿಭಾವಂತ ಆಟಗಾರರ ದಂಡೇ ಇದೆ. ಅದರಲ್ಲಿ ಎಲ್ಲರಿಗೂ, ಹೆಚ್ಚಿನ ಅವಕಾಶ ದೊರೆಯದೇ ಇರಬಹುದು. ಇಂತಹ ಸಂದರ್ಭದಲ್ಲಿ ಪ್ರತಿಯೊಬ್ಬ ಆಟಗಾರ ತನ್ನ ಭವಿಷ್ಯವನ್ನು ಗಮನದಲ್ಲಿಟ್ಟುಕೊಂಡು ಇಂತಹ ನಿರ್ಧಾರ ತೆಗೆದುಕೊಳ್ಳುವುದರಲ್ಲಿ ತಪ್ಪಿಲ್ಲ. ಅಲ್ಲದೆ ಪ್ರತಿಭಾವಂತ ಆಟಗಾರ ತಂಡದಲ್ಲಿನ ಪೈಪೋಟಿಯಿಂದ ಬೆಂಚು ಕಾಯಿಸುವ ಬದಲು, ಬೇರೆ ತಂಡದಲ್ಲಾದರು ತನ್ನ ಪ್ರತಿಭೆ ಪ್ರದರ್ಶಿಸಲು ಅವಕಾಶ ಪಡೆಯಲಿ. ಈ ವಿಷಯದಲ್ಲಿ ಯಾರ ನಿರ್ಧಾರವು ತಪ್ಪಿಲ್ಲ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement