ಶುಮಿ ವೈದ್ಯಕೀಯ ದಾಖಲೆಗಳ ಕಳವು
ಜೀನೆವಾ: ಸ್ಕೀಯಿಂಗ್ ಅಪಘಾತದಿಂದ ಕೋಮಾಕ್ಕೆ ಜಾರಿರುವ ಮತ್ತು ಫಾರ್ಮುಲಾ ಒನ್ ಮಾಜಿ ಸ್ಟಾರ್ ಮೈಕೆಲ್ ಶೂಮಾಕರ್ ಅವರ ವೈದ್ಯಕೀಯ ದಾಖಲೆಗಳನ್ನೇ ಕದ್ದಿದ್ದಾರಂತೆ ದುಷ್ಕರ್ಮಿಗಳು.
ಕಳೆದ ಡಿಸೆಂಬರ್‌ನಲ್ಲಿ ಅಪಘಾತದ ನಂತರ ಶೂಮಾಕರ್ ಚಿಕಿತ್ಸೆ ಪಡೆದ ಎಲ್ಲ ದಾಖಲೆಗಳನ್ನೂ ಕಳವು ಮಾಡಲಾಗಿದೆಯಂತೆ. ಈ ಕುರಿತು ಫ್ರಾನ್ಸ್‌ನ ಪೊಲೀಸರು ಮಂಗಳವಾರ ತನಿಖೆ ಆರಂಭಿಸಿದ್ದಾರೆ.
'ದಾಖಲೆಗಳನ್ನು ಕದ್ದು ಕೆಲ ದಿನಗಳ ನಂತರ ಅವುಗಳನ್ನು ಮಾರಾಟ ಮಾಡಲು ಸಿದ್ಧವಾಗಿದ್ದಾರಂತೆ. ಮೈಕೆಲ್ ಶೂಮಾಕರ್ ವೈದ್ಯಕೀಯ ದಾಖಲೆಗಳ ಫಲ್ ಎಂದೇ ಮಾರಾಟು ಮಾಡುತ್ತಿರುವವರು ನಮೂದಿಸಿದ್ದಾರೆ. ಅಲ್ಲದೆ, ದಾಖಲೆಗಳನ್ನು ಕಳವು ಮಾಡಲಾಗಿದೆ. ಪ್ರಕರಣದಲ್ಲಿ ಅಧಿಕಾರಿಗಳು ಭಾಗಿಯಾಗಿದ್ದಾರೆ' ಎಂದು ಜರ್ಮನಿ ವಕ್ತಾರೆ ಸಬಿನೆ ಕೆಮ್ ತಿಳಿಸಿದ್ದಾರೆ.