ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕ್ರೀಡೆ

ಮೂರನೇ ಸುತ್ತಿಗೆ ಮರ್ರೆ, ನಾ ಲೀ

Vishwanath S
Updated On : 26 Jun 2014, 12:20 pm

ಲಂಡನ್: ಬ್ರಿಟನ್ನಿನ ಆ್ಯಂಡಿ ಮರ್ರೆ ಹಾಗೂ ಚೀನಾದ ನಾ ಲೀ ವಿಂಬಲ್ಡನ್ ಟೆನಿಸ್ ಟೂರ್ನಿಯಲ್ಲಿ ಕ್ರಮವಾಗಿ ಪುರುಷರ-ಮಹಿಳೆಯರ ಸಿಂಗಲ್ಸ್ ವಿಭಾಗದಲ್ಲಿ ಮೂರನೇ ಸುತ್ತು ತಲುಪಿದ್ದಾರೆ.
ಬುಧವಾರ ನಡೆದ ಎರಡನೇ ಸುತ್ತಿನ ಪಂದ್ಯದಲ್ಲಿ ಮೂರನೇ ಶ್ರೇಯಾಂಕಿತ ಮರ್ರೆ 6-1, 6-1, 6-0 ಸೆಟ್‌ಗಳಿಂದ ಸ್ಲೊವೇನಿಯಾದ ಬ್ಲಾಜ್ ರೋಲಾ ವಿರುದ್ಧ ಜಯಗಳಿಸಿದರು.   ಮಹಿಳೆಯರ ವಿಭಾಗದಲ್ಲಿ ಎರಡನೇ ಶ್ರೇಯಾಂಕಿತೆ ನಾ ಲೀ 6-2, 6-2ರಿಂದ ಆಸ್ಟ್ರಿಯಾದ ಮ್ಯೂಸ್‌ಬರ್ಗರ್‌ರನ್ನು ಮಣಿಸಿದರು.
ಉಳಿದಂತೆ ಪೋಲೆಂಡ್‌ನ ನಾಲ್ಕನೇ ಶ್ರೇಯಾಂಕಿತೆ ಆಗ್ನೆಸ್ಕಾ ರಾಡ್‌ವಾಂಸ್ಕಾ, ರಷ್ಯಾದ ವೀರಾ ಜ್ವನರೇವಾ ಮತ್ತು ಅಮೆರಿಕದ ವೀನಸ್ ವಿಲಿಯಮ್ಸ್ ಮೂರನೇ ಸುತ್ತು ತಲುಪಿದ ಪ್ರಮುಖರಾಗಿದ್ದಾರೆ.

ಟೂರ್ನಿಗಳಿಂದ ಹಾಕಿ ತಂಡ ಹೊರಗುಳಿಯುವ ಎಚ್ಚರಿಕೆ
ನವದೆಹಲಿ: ಭಾರತೀಯ ಕ್ರೀಡಾ ಪ್ರಾಧಿಕಾರದಿಂದ ಅಗತ್ಯ ಹಣಕಾಸಿನ ನೆರವು ದೊರೆಯದ ಕಾರಣ ಮುಂಬರುವ ಕಾಮನ್‌ವೆಲ್ತ್ ಮತ್ತು ಏಷ್ಯನ್ ಗೇಮ್ಸ್‌ನಿಂದ ಭಾರತ ಹಾಕಿ ತಂಡ ಹೊರಗುಳಿಯುವ ಸಾಧ್ಯತೆಯಿದೆ. ಈ ಬಗ್ಗೆ ಸ್ವತಃ ಹಾಕಿ ಇಂಡಿಯಾ ಎಚ್ಚರಿಕೆ ನೀಡಿದೆ.
   ಹಾಕಿ ಕ್ರೀಡೆಗಾಗಿ 2015, ಮಾರ್ಚ್ 31ರವರೆಗೆ 31 ಲಕ್ಷ ರೂ. ಹಣ ಮಾತ್ರ ಉಳಿದಿದೆ ಎಂದು ಸಾಯ್ ತಿಳಿಸಿದೆ. ಆದರೆ, ಕಾಮನ್‌ವೆಲ್ತ್, ಏಷ್ಯನ್ ಗೇಮ್ಸ್ ಮತ್ತು ಚಾಂಪಿಯನ್ಸ್‌ನಲ್ಲಿ ಟ್ರೋಫಿಯಲ್ಲಿ ಭಾರತ ಪಾಲ್ಗೊಳ್ಳಲಿದ್ದು, ಇಷ್ಟು ಹಣ ಸಾಲದು. 2014-15ನೇ ಸಾಲಿಗಾಗಿ ಬಜೆಟ್‌ನಲ್ಲಿ ಸಾಯ್‌ಗೆ 38 ಕೋಟಿ ರೂ. ಕೇಳಿದ್ದೆವು. ಆದರೆ, 10 ಕೋಟಿ ರೂ. ಮಾತ್ರ ಮಂಜೂರು ಮಾಡಿದ್ದು, ಈಗಾಗಲೇ ಈ ಸಾಲಿನ ಏಪ್ರಿಲ್‌ನಿಂದ ಜೂನ್‌ವರೆಗೆ 9.69 ಕೋಟಿ ಖರ್ಚು ಮಾಡಲಾಗಿದೆ. ಹಾಗಾಗಿ, ಉಳಿದ 31 ಲಕ್ಷ ರೂ.ಗಳ ಮೊತ್ತದಲ್ಲಿ ಮುಂದಿನ ಟೂರ್ನಿಗಳಲ್ಲಿ ಭಾಗವಹಿಸಲು ಸಾಧ್ಯವಿಲ್ಲ.    

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement