ಸೆರೆನಾ, ಇವಾನೊವಿಚ್ ಮುನ್ನಡೆ
ಲಂಡನ್: ನಂಬರ್ ಒನ್ ಆಟಗಾರ್ತಿ ಅಮೆರಿಕದ ಸೆರೆನಾ ವಿಲಿಯಮ್ಸ್ ವಿಂಬಲ್ಡನ್ ಗ್ರ್ಯಾನ್ಸ್ಲಾಮ್ ಟೆನಿಸ್ ಟೂರ್ನಿಯಲ್ಲಿ ಮೂರನೇ ಸುತ್ತು ಪ್ರವೇಶಿಸಿದ್ದಾರೆ.
ಮಹಿಳೆಯರ ಸಿಂಗಲ್ಸ್ ವಿಭಾಗದಲ್ಲಿ ಗುರುವಾರ ನಡೆದ ಎರಡನೇ ಸುತ್ತಿನ ಪಂದ್ಯದಲ್ಲಿ ಸೆರೆನಾ ವಿಲಿಯಮ್ಸ್
6-1, 6-1 ನೇರ ಸೆಟ್ಗಳಿಂದ ದಕ್ಷಿಣ ಆಫ್ರಿಕಾದ ಚಾನೆಲ್ಲೆ ಸೀಪರ್ಸ್ ವಿರುದ್ಧ ಜಯಗಳಿಸಿ ಶುಭಾರಂಭ ಮಾಡಿದರು. ಅದೇ ರೀತಿ ಮತ್ತೊಂದು ಎರಡನೇ ಸುತ್ತಿನ ಪಂದ್ಯದಲ್ಲಿ ಸರ್ಬಿಯಾದ ಅನಾ ಇನಾನೊವಿಚ್ 6-4, 6-0 ನೇರ ಸೆಟ್ಗಳಿಂದ ಚೀನಾದ ಜೀ ಜೆಂಗ್ ಅವರನ್ನು ಮಣಿಸಿ ಮುಂದಿನ ಸುತ್ತು ಪ್ರವೇಶಿಸಿದರು.
ಇನ್ನು ಪುರುಷರ ಸಿಂಗಲ್ಸ್ ವಿಭಾಗದ ಎರಡನೇ ಸುತ್ತಿನ ಪಂದ್ಯಗಳಲ್ಲಿ ಜಪಾನಿನ 10ನೇ ಶ್ರೇಯಾಂಕಿತ ಕೀ ನಿಶಿಕೋರಿ 6-3, 6-2, 6-1ರಿಂದ ಅಮೆರಿಕದ ಡೆನಿಸ್ ಕುಡ್ಲಾ ಅವರನ್ನು ಮಣಿಸಿದರು. ಜೆಕ್ ಗಣರಾಜ್ಯದ ಜಿರಿ ವೆಸೆಲಿ 7-6 (7-3), 6-3, 7-6 (7-1), 7-6, 6-4 ಸೆಟ್ಗಳಿಂದ ಫ್ರಾನ್ಸ್ನ 24ನೇ ಶ್ರೇಯಾಂಕಿತ ಗೇಲ್ ಮೊನ್ಫೀಲ್ಸ್ ಅವರ ವಿರುದ್ಧ ರೋಚಕ ಗೆಲವು ದಾಖಲಿಸಿದರೆ, ಕೆನಡಾದ ಮಿಲೋಸ್ ರಾನಿಕ್ ಅಮೆರಿಕದ ಜಾಕ್ ಸೋಕ್ರನ್ನು 6-3, 6-4, 6-4ರಿಂದ ಸೋಲಿಸಿ ಮೂರನೇ ಸುತ್ತಿಗೆ ಹೆಜ್ಜೆ ಹಾಕಿದರು.
ಆದರೆ, 13ನೇ ಶ್ರೇಯಾಂಕಿತ ಫಾನ್ಸ್ನ ರಿಚರ್ಡ್ ಗ್ಯಾಸ್ಕೆಟ್ ಎರಡನೇ ಸುತ್ತಿನಲ್ಲೇ ಸೋಲಿನ ಕಹಿ ಅನುಭವಿಸಿದ್ದಾರೆ. ಆಸ್ಟ್ರೇಲಿಯಾದ ನಿಕ್ ಕೈರ್ಜಿಯಸ್ ಅವರು 3-6, 6-7 (4-7), 6-4, 7-5, 10-8 ಸೆಟ್ಗಳಿಂದ ಗ್ಯಾಸ್ಕೆಟ್ ವಿರುದ್ಧ ಜಯಗಳಿಸಿದರು.