ಪಂಕಜ್, ಕಮಲ್‌ಗೆ ಮುನ್ನಡೆ
ಶರ್ಮ್ ಇಲ್-ಶೇಖ್ (ಈಜಿಪ್ಟ್): ಭಾರತದ ಪಂಕಜ್ ಆಡ್ವಾಣಿ ಮತ್ತು ಕಮಲ್ ಚಾವ್ಲಾ ಅವರು ಈಜಿಪ್ಟ್‌ನಲ್ಲಿ ನಡೆಯುತ್ತಿರುವ 6-ರೆಡ್ ಸ್ನೂಕರ್ ಚಾಂಪಿಯನ್‌ಶಿಪ್‌ನಲ್ಲಿ ಅಂತಿಮ ಹದಿನಾರರಘಟ್ಟ ತಲುಪಿದ್ದಾರೆ.
ಆ ಮೂಲಕ ಪ್ರಶಸ್ತಿ ಗೆದ್ದುಕೊಳ್ಳುವ ತವರಿನ ಆಸೆ ಜೀವಂತವಾಗಿರಿಸಿದ್ದಾರೆ. ಆದರೆ, ಭಾರತದ ಇತರೆ ಭರವಸೆಯ ಪ್ರತಿಭೆಗಳಾದ ಬ್ರಿಜೇಶ್ ದಮನಿ, ಸೌರವ್ ಕೊಠಾರಿ ಮತ್ತು ಫೈಸಲ್ ಖಾನ್ ಅವರು ನಾಕೌಟ್ ಸುತ್ತು ತಲುಪಲು ವಿಫಲರಾಗಿದ್ದಾರೆ.
ಅಲ್ಲದೆ, ಧರ್ಮಿಂದರ್ ಲಿಲ್ಲಿ, ಶಿವಂ ಅರೋರಾ, ವರುಣ್ ಮದನ್, ಕೇತನ್ ಚಾವ್ಲಾ ಮತ್ತು ಲಕ್ಷ್ಮಣ್ ರಾವತ್ ಕೂಡ ಪರಾಭವಗೊಂಡಿದ್ದಾರೆ. ಕರ್ನಾಟಕ ಮೂಲದ ಪಂಕಜ್ ಆಡ್ವಾಣಿ ತಮ್ಮ ಪಂದ್ಯದಲ್ಲಿ ಹಾಂಕಾಂಗ್‌ನ ಫಂಗ್ ಕ್ವೊಕ್ ವಾಯಿ ಅವರನ್ನು 4-1 ಅಂಕಗಳ ಅಂತರದಲ್ಲಿ ಮಣಿಸಿದರು.
ಅದೇ ರೀತಿ ಕಮಲ್ ಚಾವ್ಲಾ ಅವರು 4-1 ಅಂಕಗಳ ಅಂತರದಿಂದ ಥಾಯ್ಲೆಂಡ್‌ನ ಚಚರ್ಟ್ ಟ್ರೇರಾಟನಪ್ರದಿತ್ ಅವರ ವಿರುದ್ಧ ಜಯಗಳಿಸಿ ನಾಕೌಟ್ ಸುತ್ತಿಗೆ ಹೆಜ್ಜೆ ಹಾಕಿದರು.