ವಿಂಬಲ್ಡನ್ ಟೆನಿಸ್: ನಾಲ್ಕನೇ ಸುತ್ತಿಗೆ ನಡಾಲ್
ಲಂಡನ್: ಸ್ಪೇನಿನ ರಾಫೆಲ್ ನಡಾಲ್ ಪ್ರತಿಷ್ಠಿತ ವಿಂಬಲ್ಡನ್ ಗ್ರ್ಯಾನ್ಸ್ಲಾಮ್ ಟೆನಿಸ್ ಟೂರ್ನಿಯಲ್ಲಿ ನಾಲ್ಕನೇ ಸುತ್ತು ಪ್ರವೇಶಿಸಿದ್ದಾರೆ.
ಆಲ್ ಇಂಗ್ಲೆಂಡ್ ಕ್ಲಬ್ನ ಸೆಂಟರ್ ಕೋರ್ಟ್ನಲ್ಲಿ ಶನಿವಾರ ನಡೆದ ಪುರುಷರ ವಿಭಾಗದ ಸಿಂಗಲ್ಸ್ ವಿಭಾಗದ ಮೂರನೇ ಸುತ್ತಿನ ಪಂದ್ಯದಲ್ಲಿ ನಡಾಲ್ ಅವರು 6-7 (4-7), 6-1, 6-1, 6-1 ಸೆಟ್ಗಳಿಂದ ಕಜಕಿಸ್ತಾನದ ಮೈಕೆಲ್ ಕುಕುಶಕಿನ್ ವಿರುದ್ಧ ಜಯಗಳಿಸಿದರು.
ಎರಡನೇ ಶ್ರೇಯಾಂಕಿತ ಆಟಗಾರ ರಾಫೆಲ್ ನಡಾಲ್ ಎರಡು ಗಂಟೆ 34 ಗಂಟೆಗಳ ವರೆಗೆ ನಡೆದ ಪಂದ್ಯದಲ್ಲಿ ತಮ್ಮ ಎಂದಿನ ಅದ್ಭುತ ಲಯ ಪ್ರದರ್ಶಿಸು ಮೂಲಕ ನಿರೀಕ್ಷಿತ ಗೆಲವು ತಮ್ಮದಾಗಿಸಿಕೊಂಡರು.
ನಡಾಲ್ ಆರಂಭದಲ್ಲೇ ಅಚ್ಚರಿ ಹಿನ್ನಡೆ ಅನುಭವಿಸಿದ್ದರು. ಶ್ರೇಯಾಂಕರಹಿತ ಆಟಗಾರ ಮೈಕೆಲ್ ಕುಕುಶಕಿನ್ ಮೊದಲ ಸೆಟ್ ಅನ್ನು ಟೈಬ್ರೇಕರ್ ಮೂಲಕ ಗೆದ್ದುಕೊಂಡು ಶುಭಾರಂಭ ಮಾಡುವುದರೊಂದಿಗೆ ನೆರೆದ ಅಭಿಮಾನಿಗಳಿಗೆ ಅಚ್ಚರಿ ಮೂಡಿಸಿದರು.
ಆದರೆ, ಇದರಿಂದ ವಿಚಲಿತರಾಗದ ಸ್ಪೇನ್ ಆಟಗಾರ ಮುಂದಿನ ಮೂರೂ ಸೆಟ್ಗಳ ಹೋರಾಟದಲ್ಲಿ ತಮ್ಮ ಅನುಭವವನ್ನು ಪೂರ್ಣವಾಗಿ ಪಣಕ್ಕಿಟ್ಟು ಹೋರಾಟ ನಡೆಸುವುದರೊಂದಿಗೆ ಸುಲಭವಾಗಿ ಗೆಲವು ದಾಖಲಿಸಿದರು. ಕೊನೆಯ ಮೂರು ಸೆಟ್ಗಳಲ್ಲಿ ಕಜಕಿಸ್ತಾನ ಆಟಗಾರನಿಗೆ ಕೇವಲ ಮೂರು ಗೇಮ್ಗಳನ್ನು ಗೆದ್ದುಕೊಳ್ಳಲಷ್ಟೇ ಅವಕಾಶ ನೀಡಿದ್ದು, ನಡಾಲ್ರ ಅದ್ಭುತ ಪ್ರದರ್ಶನಕ್ಕೆ ಸಾಕ್ಷಿಯಾಗಿದೆ.
ಮಳೆ ಅಡಚಣೆ: ಆದರೆ ಇನ್ನಿತರ ಕೋರ್ಟ್ಗಳಲ್ಲಿ ನಡೆಯುತ್ತಿದ್ದ ಪಂದ್ಯಗಳು ಮಳೆಯಿಂದಾಗಿ ಅರ್ಧಕ್ಕೆ ಸ್ಥಗಿತಗೊಂಡಿವೆ.