ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕ್ರೀಡೆ

ವಿಶ್ವ 6-ರೆಡ್‌ ಸ್ನೂಕರ್: ಕ್ವಾರ್ಟರ್‌ಫೈನಲ್‌ಗೆ ಪಂಕಜ್ ಆಡ್ವಾಣಿ

Vishwanath S
Updated On : 3 Jul 2014, 12:26 pm

ಶರ್ಮ್-ಇಲ್-ಶೇಖ್ (ಈಜಿಪ್ಟ್) : ಭಾರತದ ಪಂಕಜ್ ಆಡ್ವಾಣಿ ಈಜಿಪ್ಟ್‌ನಲ್ಲಿ ನಡೆಯುತ್ತಿರುವ ವಿಶ್ವ 6-ರೆಡ್ ಸ್ನೂಕರ್ ಚಾಂಪಿಯನ್‌ಶಿಪ್‌ನಲ್ಲಿ ಕ್ವಾರ್ಟರ್‌ಫೈನಲ್‌ಗೆ ಹೆಜ್ಜೆಹಾಕಿದ್ದಾರೆ.
ಬೆಂಗಳೂರಿನ ಹುಡುಗ ಪಂಕಜ್ ಆಡ್ವಾಣಿ, ಶನಿವಾರ ನಡೆದ ಪ್ರಿಕ್ವಾರ್ಟರ್‌ಫೈನಲ್ ಸುತ್ತಿನ ಸೆಣಸಿನಲ್ಲಿ ಮಾಲ್ಟಾದ ಅಲೆಕ್ಸ್ ಬೋರ್ಗ್ ಅವರನ್ನು 4-0 ಅಂಕಗಳ ಅಂತರದಲ್ಲಿ ಪರಾಭವಗೊಳಿಸಿ ಮುನ್ನಡೆ ಸಾಧಿಸಿದರು.
ಆದರೆ ಪುರುಷರ ಸಿಂಗಲ್ಸ್‌ನಲ್ಲಿ ಉಳಿದುಕೊಂಡಿದ್ದ ಭಾರತದ ಮತ್ತೊಬ್ಬ ಆಟಗಾರ ಕಮಲ್ ಚಾವ್ಲಾ ಪ್ರಿಕ್ವಾರ್ಟರ್‌ಫೈನಲ್‌ನಲ್ಲಿಯೇ ಸೋಲಿನ ಕಹಿ ಅನುಭವಿಸಿದ್ದಾರೆ. ಇಂದೇ ನಡೆದ 16ರ ಘಟ್ಟದ ಸೆಣಸಿನಲ್ಲಿ ಕತಾರ್‌ನ ಮೊಹಸೆನ್ ಬಕ್ಷೇಶಾ ಅವರು 4-2 ಅಂಕಗಳಿಂದ ಕಮಲ್‌ಗೆ ಸೋಲುಣಿಸಿದರು.
ಇನ್ನು 15-ರೆಡ್ ಸ್ನೂಕರ್‌ನ ತಂಡ ವಿಭಾಗದಲ್ಲಿ ಬ್ರಿಜೇಶ್ ದಮನಿ ಜೊತೆಗೂಡಿ ಆಡಿದ್ದ ಪಂಕಜ್‌ಗೆ ಸೋಲು ಎದುರಾಗಿದೆ. ಪಂಕಜ್ ಮತ್ತು ಬ್ರಿಜೇಶ್ ಜೋಡಿ ಕ್ವಾರ್ಟರ್‌ಫೈನಲ್ ಸುತ್ತಿನಲ್ಲಿ ಪಾಕಿಸ್ತಾನದ ಮೊಹ್ಮದ್ ಆಸಿಫ್ ಮತ್ತು ಸಜ್ಜಾದ್ ಹುಸೇನ್ ವಿರುದ್ಧ 1-4ರಿಂದ ಸುಲಭವಾಗಿ ಆಘಾತ ಅನುಭವಿಸಿತು.
ಅದೇ ರೀತಿ ಭಾರತದ ಸೌರವ್ ಕೊಠಾರಿ ಮತ್ತು ಶಿವಂ ಅರೋರಾ ಅವರು ಎಂಟರಘಟ್ಟದಲ್ಲಿ ಇರಾನ್‌ನ ಹುಸೇನ್ ವಫಾಯಿ ಅಯೂರಿ ಮತ್ತು ಈಶನ್ ಹೈದರ್ ವಿರುದ್ಧ ಪರಾಜಯ ಅನುಭವಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement