ಗುಂಡು ತಗುಲಿ ಕೊಲಂಬಿಯಾ ಅಭಿಮಾನಿ ಸಾವು
ಸೌಚಾ (ಕೊಲಂಬಿಯಾ): ಫುಟ್ಬಾಲ್ ವಿಶ್ವಕಪ್ ಪಂದ್ಯಾವಳಿಯ ಪ್ರೀ ಕ್ವಾರ್ಟರ್ಫೈನಲ್ನಲ್ಲಿ ಉರುಗ್ವೆ ವಿರುದ್ಧ ತಮ್ಮ ತಂಡ 2-0 ಗೋಲುಗಳಿಂದ ಜಯ ಗಳಿಸಿದಾಗ ಸಂಭ್ರಮ ಆಚರಣೆಯಲ್ಲಿ ತೊಡಗಿದ್ದ ಕೊಲಂಬಿಯಾದ ಅಭಿಮಾನಿಯೊಬ್ಬಳು ಗುರಿ ತಪ್ಪಿದ ಗುಂಡು ತಗುಲಿ ಮೃತಪಟ್ಟಿದ್ದಾಳೆ. ಈ ಮನ್ನ ಗುಂಪು ಹಂತದಲ್ಲಿ ಗ್ರೀಸ್ ವಿರುದ್ಧ ಗೆದ್ದಾಗಲೂ, ವಿಜಯೋತ್ಸವದ ವೇಳೆ 14 ಜನರು ಮೃತಪಟ್ಟಿದ್ದರು.