ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕ್ರೀಡೆ

ಶರಪೋವಾ ವಿನ್

ರಷ್ಯಾದ ಟೆನಿಸ್ ತಾರೆ ಮಾರಿಯಾ ಶರಪೋವಾ ವಿಂಬಲ್ಡನ್ ಗ್ರ್ಯಾನ್ ಸ್ಲ್ಯಾಮ್ ಟೆನಿಸ್ ಟೂರ್ನಿಯ...

Mainashree
Updated On : 29 Jun 2014, 9:44 am

ಲಂಡನ್: ರಷ್ಯಾದ ಟೆನಿಸ್ ತಾರೆ ಮಾರಿಯಾ ಶರಪೋವಾ ವಿಂಬಲ್ಡನ್ ಗ್ರ್ಯಾನ್ ಸ್ಲ್ಯಾಮ್ ಟೆನಿಸ್ ಟೂರ್ನಿಯ ನಾಲ್ಕನೇ ಸುತ್ತಿಗೆ ಪ್ರವೇಶಿಸಿದ್ದಾರೆ.
ಭಾನುವಾರ ನಡೆದ ವನಿತೆಯರ ಸಿಂಗಲ್ಸ್ ವಿಭಾಗದ ಮೂರನೇ ಸುತ್ತಿನ ಪಂದ್ಯದಲ್ಲಿ ಅಮೆರಿಕಾದ ಅಲಿಸನ್ ರಿಸ್ಕೆ ವಿರುದ್ಧ 6-3, 6-0 ನೇರ ಸೆಟ್‌ಗಳ ಸುಲಭ ಗೆಲವು ದಾಖಲಿಸಿದರು. ಶನಿವಾರ ನಡೆಯಬೇಕಿದ್ದ ಕೆಲವು ಪಂದ್ಯಗಳು ಮಳೆಯಿಂದ ರದ್ದಾದ ಹಿನ್ನೆಲೆಯಲ್ಲಿ ಭಾನುವಾರ ನಡೆದವು.
ಇನ್ನು ಮತ್ತೊಂದು ಪಂದ್ಯದಲ್ಲಿ ಅಗ್ರ ಶ್ರೇಯಾಂಕಿತೆ ಅಮೆರಿಕಾದ ಸೆರೆನಾ ವಿಲಿಯಮ್ಸ್, ಫ್ರಾನ್ಸ್‌ನ ಅಲಿಜ್ ಕಾರ್ನೆಟ್ ವಿರುದ್ಧ 6-1, 3-6, 4-6 ಸೆಟ್‌ಗಳ ಅಂತರದಲ್ಲಿ ಪರಾಭವಗೊಂಡು, ನಿರಾಸೆ ಅನುಭವಿಸಿದ್ದಾರೆ.
ಇನ್ನು ಮಾಜಿ ಚಾಂಪಿಯನ್ ರೋಜರ್ ಫೆಡರರ್ ತಮ್ಮ ಎದುರಾಳಿ ಕೊಲಂಬಿಯಾದ ಸ್ಯಾಂಟಿಯಾಗೊ ಗಿರಾಲ್ಡೊ ವಿರುದ್ಧ 6-3, 6-1, 6-3 ನೇರ ಸೆಟ್‌ಗಳ ಜಯ ದಾಖಲಿಸಿದರು.ಪೇಸ್‌ಗೆ ಸಿಹಿ, ಸಾನಿಯಾಗಿ ಕಹಿ: ಇನ್ನು ಭಾರತದ ಹಿರಿಯ ಆಟಗಾರ ಲಿಯಾಂಡರ್ ಪೇಸ್ ಹಾಗೂ ಜೆಕ್ ಗಣರಾಜ್ಯದ ರಾಡೆಕ್ ಸ್ಟಿಪಾನೆಕ್ ಜೋಡಿಯು ಪುರುಷರ ಡಬಲ್ಸ್ ವಿಭಾಗದ ಎರಡನೇ ಸುತ್ತಿನ ಪಂದ್ಯದಲ್ಲಿ ಮೆಕ್ಸಿಕೊದ ಸ್ಯಾಂಟಿಯಾಗೊ ಗೊಂಜಾಲೆಜ್ ಹಾಗೂ ಅಮೆರಿಕಾದ ಸ್ಕಾಟ್ ಲಿಪ್‌ಸ್ಕಿ ಜೋಡಿ ವಿರುದ್ಧ 3-6, 6-1, 3-6, 6-3, 11-9 ಸೆಟ್‌ಗಳ ಅಂತರದಲ್ಲಿ ರೋಚಕ ಗೆಲವು ದಾಖಲಿಸಿದರು.
  ಇನ್ನು ಮಹಿಳೆಯರ ಡಬಲ್ಸ್ ವಿಭಾಗದ ಎರಡನೇ ಸುತ್ತಿನ ಪಂದ್ಯದಲ್ಲಿ ಜೆಕ್ ಗಣರಾಜ್ಯದ ಲೂಸಿ ಸ್ಯಾಫರೋವಾ ಹಾಗೂ ರಷ್ಯಾದ ಅನಸ್ಟಾಸಿಯಾ ಪ್ಯಾವೆಂಚುಂಕೊವಾ ಜೋಡಿ ವಿರುದ್ಧ 6-2, 6-7 (7-9), 6-4 ಸೆಟ್‌ಗಳ ಅಂತರದಲ್ಲಿ ಪರಾಭವಗೊಂಡಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement