ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕ್ರೀಡೆ

ಸೈನಾಗೆ ಸೂಪರ್ ಗರಿ

ಭಾರತದ ಖ್ಯಾತ ಬ್ಯಾಡ್ಮಿಂಟನ್ ತಾರೆ ಸೈನಾ ನೆಹ್ವಾಲ್ ಅವರು ಕಳೆದ ಎರಡು...

Mainashree
Updated On : 30 Jun 2014, 4:29 am

ಸಿಡ್ನಿ: ಭಾರತದ ಖ್ಯಾತ ಬ್ಯಾಡ್ಮಿಂಟನ್ ತಾರೆ ಸೈನಾ ನೆಹ್ವಾಲ್ ಅವರು ಕಳೆದ ಎರಡು ವರ್ಷಗಳಲ್ಲಿ ಮೊದಲ ಸೂಪರ್ ಸಿರೀಸ್ ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದಾರೆ. ಭಾನುವಾರ ನಡೆದ ಆಸ್ಟ್ರೇಲಿಯಾ ಓಪನ್‌ನ ಫೈನಲ್ ಪಂದ್ಯದಲ್ಲಿ ಸ್ಪೇನ್‌ನ ಕಾರೊಲೀನಾ ಮರಿನ್ ಅವರನ್ನು ಪರಾಭವಗೊಳಿಸಿದ ಸೈನಾ ಚಾಂಪಿಯನ್ ಎನಿಸಿದರು.
ಪಂದ್ಯಾವಳಿಯಲ್ಲಿ ಆರನೇ ಶ್ರೇಯಾಂಕ ಪಡೆದಿದ್ದ ಸೈನಾ, ಫೈನಲ್ ಪಂದ್ಯದಲ್ಲಿ ಸ್ಪೇನ್ ಆಟಗಾರ್ತಿ ವಿರುದ್ಧ 21-18, 21-11 ಗೇಮ್‌ಗಳಿಂದ ಜಯ ಸಾಧಿಸಿದರು.
ಋತುವಿನ ಆರಂಭದಲ್ಲಿ ಇಂಡಿ ಯಾ ಓಪನ್ ಗ್ರ್ಯಾನ್ ಪ್ರೀ ಗೋಲ್ಡ್ ಗೆದ್ದುಕೊಂಡಿದ್ದ ಸೈನಾಗೆ, ಇದುಈ ಸಾಲಿನ 2ನೇ ಪ್ರಶಸ್ತಿಯಾಗಿದೆ.  'ಪ್ರಶಸ್ತಿ ಗೆದ್ದಿರುವುದು ನನಗೆ ಸಂತಸ ತಂದಿದೆ. ನನ್ನ ಕಠಿಣ ಪರಿಶ್ರಮಕ್ಕೆ ತಕ್ಕ ಫಲದೊರಕಿದೆ. ಪ್ರಶಸ್ತಿ ಹಿಂದೆ, ಗಾಯದಿಂದ ದೂರವಿರಲು ನೆರವಾದ ನನ್ನ ಕೋಚ್ ಶ್ರಮವೂ ಅಡಗಿದೆ. ಆದರೆ, ಈ ಪ್ರಶಸ್ತಿ ಸೂಕ್ತ ಸಮಯದಲ್ಲಿ ನನಗೆ ದೊರಕಿಲ್ಲದಿರಬಹುದು. ಕಾಮನ್ವೆಲ್ತ್ ಕ್ರೀಡಾಕೂಟದ ಹಾಲಿ ಚಾಂಪಿಯನ್ ಆಗಿರುವ ನನಗೆ, ಈ ಪ್ರಶಸ್ತಿ ಮಹತ್ವದ್ದಾಗಿದೆ. ಅಲ್ಲದೆ, ಏಷ್ಯನ್ ಗೇಮ್ಸ್ ಸಹ ಈ ವರ್ಷವೇ ನಡೆಯಲಿದೆ. ಹೀಗಾಗಿ ಆಸ್ಟ್ರೇಲಿಯಾ ಓಪನ್ ಪ್ರಶಸ್ತಿ ನನ್ನ ವಿಶ್ವಾಸವನ್ನು ಹೆಚ್ಚಿಸಿದೆ' ಎಂದು 2012ರ ಜೂನ್‌ನಲ್ಲಿ ಈ ಹಿಂದೆ ಇಂಡೋನೇಷ್ಯಾ ಓಪನ್ ಗೆದ್ದುಕೊಂಡಿದ್ದ ಸೈನಾ ತಿಳಿಸಿದರು.      ಈ ಪಂದ್ಯವನ್ನಾಡುವ ಮೊದಲು ಸೈನಾ, ಮರಿನಾ ವಿರುದ್ಧ ಈ ಮುನ್ನ ಆಡಿದ್ದ ಒಂದು ಪಂದ್ಯದಲ್ಲಿ ಗೆದ್ದ ದಾಖಲೆ ಹೊಂದಿದ್ದರು. ಮೊದಲ ಗೇಮ್‌ನ ಆರಂಭದಲ್ಲಿ ಸೈನಾ, 5-2 ಅಂಕಗಳಿಂದ ಮುನ್ನಡೆ ಕಂಡುಕೊಂಡಿದ್ದ ಸೈನಾಗೆ, ನಂತರ ಮರಿನಾ ಕೊಂಚ ಪ್ರತಿರೋಧ ಒಡ್ಡಿದರು. ಆದರೆ, ಅಂತಿಮವಾಗಿ ಗೆಲ್ಲುವ ಮೂಲಕ ಸೈನಾ ಮೇಲುಗೈ ಸಾಧಿಸಿದರು.
ಎರಡನೇ ಗೇಮ್‌ನ ಆರಂಭದಲ್ಲಿ ಸ್ಪೇನ್‌ನ ಮರಿನ್  ಅವರು 3-1 ಅಂತರದಿಂದ ಮುನ್ನಡೆ ಕಂಡುಕೊಂಡಿದ್ದರು. ಆದರೆ, ನಂತರ ಅತ್ಯದ್ಭುತ ಪ್ರದರ್ಶನ ತೋರಿದ ಭಾರತದ ಸೈನಾ ಅವರು, ಎದುರಾಳಿ ಮೇಲೆ ಸವಾರಿ ಮಾಡುವಲ್ಲಿ ಯಶಸ್ವಿಯಾದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement