ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕ್ರೀಡೆ

ನ್ಯೂಜಿಲೆಂಡ್ ತಂಡಕ್ಕೆ ವಿಲ್‌ಯಮ್ಸನ್ ಆಸರೆ

Mainashree
Updated On : 30 Jun 2014, 10:37 am

ಬಾರ್ಬಡೋಸ್: ಮೂರನೇ ಕ್ರಮಾಂಕದ ಬ್ಯಾಟ್ಸ್‌ಮನ್ ಕೇನ್ ವಿಲಿಯಮ್ಸನ್ ಅವರ ಮನಮೋಹಕ ಬ್ಯಾಟಿಂಗ್ ನೆರವಿನಿಂದ ನ್ಯೂಜಿಲೆಂಡ್ ತಂಡ ವೆಸ್ಟ್ ಇಂಡೀಸ್ ವಿರುದ್ಧದ ಮೂರನೇ ಟೆಸ್ಟ್ ಪಂದ್ಯದಲ್ಲಿ ಸುಸ್ಥಿತಿಗೆ ತಲುಪಿದೆ.
ಭಾನುವಾರ ನಡೆದಿದ್ದ ಪಂದ್ಯದ ನಾಲ್ಕನೇ ದಿನದಾಟದಲ್ಲಿ ಕಿವೀಸ್ ಪಡೆಗೆ ಆಧಾರ ಸ್ತಂಭವಾಗಿ ನಿಂತ ಕೇನ್ ವಿಲಿಯಮ್ಸನ್, ತಂಡ 300ರ ಗಡಿ ದಾಟುವುದರ ಜತೆಗೆ ಉತ್ತಮ ಮುನ್ನಡೆಯನ್ನು ಪಡೆಯುವಲ್ಲಿ ಪ್ರಮುಖ ಪಾತ್ರ ವಹಿಸಿದರು.
ನ್ಯೂಜಿಲೆಂಡ್ ತಂಡ ದಿನದಾಟ ನಿಂತಾಗ 7 ವಿಕೆಟ್ ಕಳೆದುಕೊಂಡು 331 ರನ್ ದಾಖಲಿಸುವುದರ ಜತೆಗೆ, ವೆಸ್ಟ್ ಇಂಡೀಸ್ ವಿರುದ್ಧ 307 ರನ್‌ಗಳ ಮುನ್ನಡೆ ಸಾಧಿಸಿದೆ. ಪಂದ್ಯದ ಅಂತಿಮ ದಿನದಾಟ ಮಾತ್ರ ಬಾಕಿ ಉಳಿದಿರುವುದರಿಂದ ಪಂದ್ಯ ಬಹುತೇಕ ಡ್ರಾ ಫಲಿತಾಶ ಕಾಣುವ ನಿರೀಕ್ಷೆ ಇದೆ.  ಆರಂಭದಲ್ಲಿ 293 ರನ್‌ಗಳಿಗೆ ಆಲೌಟ್ ಆಗುವ ಮೂಲಕ ಹಿನ್ನಡೆ ಅನುಭವಿಸಿದ್ದ ನ್ಯೂಜಿಲೆಂಡ್, ನಂತರ ವೆಸ್ಟ್ ಇಂಡೀಸ್ ತಂಡವನ್ನು 317 ರನ್‌ಗಳಿಗೆ ಕಟ್ಟಿ ಹಾಕುವ ಮೂಲಕ ಬೃಹತ್ ಹಿನ್ನಡೆಯಿಂದ ಪಾರಾಯಿತು.
ಕಿವೀಸ್ ತಂಡದ ಎರಡನೇ ಇನಿಂಗ್ಸ್‌ನಲ್ಲಿ ಆಕರ್ಷಕ ಬ್ಯಾಟಿಂಗ್ ಮಾಡಿದ ಕೇನ್ ವಿಲಿಯಮ್ಸನ್, ತಂಡದ ಪ್ರಮುಖ ಆಕರ್ಷಣೆಯಾದರು. 271 ಎಸೆತಗಳನ್ನು ಎದುರಿಸಿದ ಕೇನ್, 22 ಬೌಂಡರಿ ನೆರವಿನಿಂದ ಅಜೇಯ 161 ರನ್ ದಾಖಲಿಸಿದ್ದಾರೆ.ಸಂಕ್ಷಿಪ್ತ ಸ್ಕೋರ್:
ನ್ಯೂಜಿಲೆಂಡ್ ಮೊದಲ ಇನಿಂಗ್ಸ್ 293
ವೆಸ್ಟ್ ಇಂಡೀಸ್ ಮೊದಲ ಇನಿಂಗ್ಸ್ 317
ನ್ಯೂಜಿಲೆಂಡ್ ಎರಡನೇ ಇನಿಂಗ್ಸ್ 7 ವಿಕೆಟ್‌ಗೆ 331
(ಕೇನ್ ವಿಲಿಯಮ್ಸನ್ ಅಜೇಯ 161, ಜಿಮ್ಮಿ ನಿಶಾಮ್ 51, ವಾಟ್ಲಿಂಗ್ 29, ಕೆಮಾರ್ ರೋಚ್ 55ಕ್ಕೆ4, ಹೋಲ್ಡರ್ 26ಕ್ಕೆ2)

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement