ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕ್ರೀಡೆ

ಭಾರತಕ್ಕೆ 2ನೇ ಅಭ್ಯಾಸ ಪಂದ್ಯ

Mainashree
Updated On : 30 Jun 2014, 10:37 am

ಡರ್ಬಿಶೈರ್: ಮೊದಲ ಅಭ್ಯಾಸ ಪಂದ್ಯದ ಬಹುತೇಕ ಆಟ ಮಳೆಯಿಂದಾಗಿ ರದ್ದುಗೊಂಡ ಹಿನ್ನೆಲೆಯಲ್ಲಿ ಸೂಕ್ತ ತಾಲೀಮು ಪಡೆಯದ ಭಾರತೀಯ ಆಟಗಾರರು 2ನೇ ಅಭ್ಯಾಸ ಪಂದ್ಯದಲ್ಲಿ ಮತ್ತೆ ತಮ್ಮ ಸಾಮರ್ಥ್ಯ ಸಾಬೀತುಪಡಿಸಿಕೊಂಡು ಟೆಸ್ಟ್ ಸರಣಿಗೆ ಉತ್ತಮ ರೀತಿಯಲ್ಲಿ ಸಜ್ಜುಗೊಳ್ಳುವ ಯೋಚನೆಯಲ್ಲಿದ್ದಾರೆ.
ಇಂಗ್ಲೆಂಡ್‌ಗೆ ದೀರ್ಘಾವಧಿಯ ಪ್ರವಾಸಕ್ಕಾಗಿ ತೆರಳಿರುವ ಭಾರತ ತಂಡ ಜುಲೈ 9ರಿಂದ ಆರಂಭವಾಗಲಿರುವ ಐದು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಆತಿಥೇಯರನ್ನು ಎದುರಿಸಲಿದ್ದಾರೆ. ಅದಕ್ಕೂ ಮುನ್ನ ಟೀಂ ಇಂಡಿಯಾ ಎರಡು ಅಭ್ಯಾಸ ಪಂದ್ಯಗಳನ್ನಾಡಲಿದೆ. ಈಗಾಗಲೇ ಲಿಸೆಸ್ಟರ್‌ಶೈರ್‌ನಲ್ಲಿ ನಡೆದ ಮೊದಲ ಮೂರು ದಿನಗಳ ಅಭ್ಯಾಸ ಪಂದ್ಯ ಬಹುತೇಕ ಮಳೆಗೆ ಆಹುತಿಯಾಗಿತ್ತು. ಎರಡು ದಿನಗಳ ಆಟ ಮಳೆಯಲ್ಲಿ ನೆನೆದು ಹೋಗಿತ್ತು. ಹಾಗಾಗಿ, ಭಾರತದ ಆಟಗಾರರಿಗೆ ಪೂರ್ಣ ಅಭ್ಯಾಸ ದೊರೆಯಲಿಲ್ಲ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement