ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕ್ರೀಡೆ

ಸೆಮಿಫೈನಲ್‌ಗೆ ಅರವಿಂದ್ ಭಟ್

Mainashree
Updated On : 1 Mar 2014, 9:58 am

ಮುಲೇಂ ಆ್ಯನ್ ಡೇರ್ ರುಹ್ರ (ಜರ್ಮನಿ): ಭಾರತದ ಹಿರಿಯ ಶಟ್ಲರ್ ಅರವಿಂದ್ ಭಟ್ ಒಂದು ಲಕ್ಷ 20 ಸಾವಿರ ಡಾಲರ್ ಬಹುಮಾನ ಮೊತ್ತದ ಜರ್ಮನ್ ಓಪನ್ ಗ್ರ್ಯಾನ್ ಪ್ರೀ ಗೋಲ್ಡ್ ಬ್ಯಾಡ್ಮಿಂಟನ್ ಚಾಂಪಿಯನ್‌ಶಿಪ್‌ನಲ್ಲಿ ಸೆಮಿಫೈನಲ್ ತಲುಪಿದ್ದಾರೆ.
ಎರಡು ಬಾರಿಯ ರಾಷ್ಟ್ರೀಯ ಚಾಂಪಿಯನ್ ಅರವಿಂದ್ ಭಟ್ ಪುರುಷರ ಸಿಂಗಲ್ಸ್ ಕ್ವಾರ್ಟರ್‌ಫೈನಲ್ ಪಂದ್ಯದಲ್ಲಿ ಡೆನ್ಮಾರ್ಕ್‌ನ ವಿಕ್ಟರ್ ಆಕ್ಸೆಲ್‌ಸೆನ್ ಅವರನ್ನು 21-17, 21-14 ಅಂಕಗಳ ಅಂತರದಲ್ಲಿ ಪರಾಭವಗೊಳಿಸಿದರು.
ಕರ್ನಾಟಕದ ಆಟಗಾರ ಅರವಿಂದ್, ಎರಡು ಗೇಮ್‌ಗಳಲ್ಲಿ ಅತ್ಯುತ್ತಮ ಆಟ ಸಂಘಟಿಸುವ ಮೂಲಕ ಕೇವಲ 35 ನಿಮಿಷಗಳ ಆಟದಲ್ಲಿಯೇ ರೋಚಕ ಗೆಲವು ದಾಖಲಿಸಿ ಮುಂದಿನ ಸುತ್ತಿಗೆ ಪ್ರವೇಶ ಗಿಟ್ಟಿಸಿದರು. ಸೆಮಿಫೈನಲ್ ಪಂದ್ಯದಲ್ಲಿ ಭಾರತೀಯ ಆಟಗಾರನಿಗೆ ವಿಶ್ವದ 24ನೇ ಶ್ರೇಯಾಂಕಿತ ಆಟಗಾರ ಚೈನೀಸ್ ತೈಪೇನ ಟಿಯನ್ ಚೆನ್ ಚೊವು ಸವಾಲು ಎದುರಾಗಲಿದೆ.
ಈ ಮುನ್ನ ಎರಡು ಬಾರಿಯ ಮುಖಾಮುಖಿಯಲ್ಲಿ ಟಿಯನ್ ಚೆನ್ ಚೊವು ಅವರು ಭಟ್‌ಗೆ ಸೋಲುಣಿಸಿದ್ದರು. ಕಳೆದ ಬಾರಿ ಅಂದರೆ ಎರಡು ವರ್ಷಗಳ ಹಿಂದೆ ಕೆನಡಾದಲ್ಲಿ ಈ ಇಬ್ಬರು ಸೆಣಸಿದ್ದರು. ಆದರೆ, ಪ್ರಸ್ತುತದ ಫಾರ್ಮ್ ಗಮನಿಸಿದರೆ, 34ರ ಬೆಂಗಳೂರಿನ ಹುಡುಗ ಸೇಡು ತೀರಿಸಿಕೊಳ್ಳುವ ಉತ್ತಮ ಅವಕಾಶ ಹೊಂದಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement