ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕ್ರೀಡೆ

ಕರ್ನಾಟಕಕ್ಕೆ ಸೋಲು

Mainashree
Updated On : 2 Mar 2014, 9:30 am

ನವದೆಹಲಿ: ಕರ್ನಾಟಕದ ವನಿತೆಯರು 64ನೇ ರಾಷ್ಟ್ರೀಯ ಬಾಸ್ಕೆಟ್‌ಬಾಲ್ ಚಾಂಪಿಯನ್‌ಶಿಪ್‌ನ ಲೀಗ್ ಹಂತದ ಕೊನೆಯ ದಿನದ ಪೈಪೋಟಿಯಲ್ಲಿ ಇಂಡಿಯನ್ ರೈಲ್ವೇಸ್ ಎದುರು ಸೋಲನುಭವಿಸಿದ್ದಾರೆ. ಹಾಲಿ ಚಾಂಪಿಯನ್ ಇಂಡಿಯನ್ ರೈಲ್ವೇಸ್ ಭಾನುವಾರ ನಡೆದ ಮಹಿಳೆಯರ ವಿಭಾಗದ ಲೀಗ್ ಪಂದ್ಯದಲ್ಲಿ ಕರ್ನಾಟಕದ ವಿರುದ್ಧ 91-39 ಅಂಕಗಳ ಭಾರಿ ಅಂತರದಲ್ಲಿ ಗೆಲವು ದಾಖಲಿಸಿತು.
ಈ ಗೆಲವಿನೊಂದಿಗೆ ರೈಲ್ವೇಸ್ ತಂಡ 'ಎ' ಗುಂಪಿನಲ್ಲಿ ಎಲ್ಲ ನಾಲ್ಕೂ ಪಂದ್ಯಗಳನ್ನು ಗೆದ್ದುಕೊಳ್ಳುವ ಮೂಲಕ ಅಗ್ರಸ್ಥಾನ ತಂಡವಾಗಿ ಹೊರಹೊಮ್ಮಿದೆ. ರೈಲ್ವೇಸ್ ಪರ ರಾಜಾ ಪ್ರಿಯದರ್ಶಿನಿ 20 ಅಂಕಗಳಿಸಿದರೆ, ಪುಷ್ಪಾ 16,  ಅಂಜು ಲಾಕ್ರಾ 13 ಅಂಕಗಳಿಸಿದರು. ಕರ್ನಾಟಕದ ಪರ ಕೃತಿಕಾ ಮಾತ್ರ ಎರಡಂಕಿಯ ಅಂಕ ಕಲೆಹಾಕಲು ಯಶಸ್ವಿಯಾದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement