ಭಾರತದ ಪಾಲಿಗಿದು ಔಪಚಾರಿಕ ಕದನವಷ್ಟೇ
ಮೀರ್ಪುರ: ಬಾಂಗ್ಲಾದೇಶದ ವಿರುದ್ಧ ಗೆದ್ದ ಪಾಕಿಸ್ತಾನ ಫೈನಲ್ ಪ್ರವೇಶಿಸು ವುದರೊಂದಿಗೆ, ಭಾರತ ತಂಡ ಏಷ್ಯಾ ಕಪ್ನ ತನ್ನ ಅಂತಿಮ ಲೀಗ್ ಪಂದ್ಯದಲ್ಲಿ ಬುಧವಾರ ಅಫ್ಘಾನಿಸ್ತಾನದ ವಿರುದ್ಧ ಪ್ರತಿಷ್ಠೆಯ ಜಯ ಕಾಣುವ ಕಾತರದಲ್ಲಿದೆ.
ಬಾಂಗ್ಲಾದೇಶದ ವಿರುದ್ಧದ ಪಂದ್ಯದಲ್ಲಿ ಪಾಕಿಸ್ತಾನ ಸೋಲನು ಭವಿಸಿದ್ದರೆ, ಭಾರತಕ್ಕೆ ಪಂದ್ಯಾವಳಿಯಲ್ಲಿ ಫೈನಲ್ ಪ್ರವೇಶಿಸುವ ಅವಕಾಶವಿತ್ತು. ಆದರೆ, ಬಾಂಗ್ಲಾ ವಿರುದ್ಧ 327 ರನ್ಗಳ ಬೃಹತ್ ಮೊತ್ತದ ಗುರಿಯನ್ನು ಸೇರುವಲ್ಲಿ ಪಾಕಿಸ್ತಾನ ಯಶಸ್ವಿಯಾದ ಹಿನ್ನೆಲೆಯಲ್ಲಿ ಭಾರತ ಫೈನಲ್ ಪ್ರವೇಶಿಸುವ ಸಂಪೂರ್ಣವಾಗಿ ಮುಚ್ಚಿಕೊಂಡಿದೆ.
ಈಗೇನಿದ್ದರೂ ದುರ್ಬಲ ಅಫ್ಘಾನಿಸ್ತಾನದ ಜಯ ಕಾಣುವ ಮೂಲಕ ತವರಿಗೆ ಮರಳುವದೊಂದೇ ಭಾರತಕ್ಕೆ ಉಳಿದಿರುವ ಹಾದಿಯಾಗಿದೆ.
ಆದರೆ, ನಾಯಕ ಮಹೇಂದ್ರ ಸಿಂಗ್ ಧೋನಿ ಅನುಪಸ್ಥಿತಿ ಮತ್ತು ಅನನುಭವಿಗಳಿಂದ ಕೂಡಿರುವ ಭಾರತ ತಂಡಕ್ಕೆ ಇದು ಸುಲಭದ ಮಾತಲ್ಲ. ಕಾರಣ, ವಿರಾಟ್ ಕೊಹ್ಲಿ ಹೊರತುಪಡಿಸಿದರೆ, ತಂಡದ ಇತರ ಬ್ಯಾಟ್ಸ್ಮನ್ಗಳು ಸ್ಥಿರ ಪ್ರದರ್ಶನ ನೀಡದಿರುವುದು ಭಾರತ ತಂಡ ಗೆಲುವಿನ ಅಂಚಿನಲ್ಲಿ ಸೋಲು ಕಾಣತೊಡಗಿದೆ. ನಾಲ್ಕು ಬಾರಿ ಚಾಂಪಿಯನ್ ಆಗಿರುವ ಶ್ರೀಲಂಕಾ ಪಂದ್ಯಾವಳಿಯಲ್ಲಿ ಸತತ ಮೂರು ಪಂದ್ಯಗಳಲ್ಲಿ ಜಯ ಕಂಡುಕೊಂಡು, ಈಗಾಗಲೇ ಫೈನಲ್ಗೆ ತನ್ನ ಸ್ಥಾನವನ್ನು ಭದ್ರಪಡಿಸಿಕೊಂಡಿದೆ.
ಹೀಗಾಗಿ ದುರ್ಬಲ ಅಫ್ಘಾನಿಸ್ತಾನದ ವಿರುದ್ಧ ಭಾರತ ತಂಡಕ್ಕೆ ಮತ್ತೊಮ್ಮೆ ಕಠಿಣ ಪರೀಕ್ಷೆ ಎದುರಾಗಿದೆ. ಅಲ್ಲದೆ, ಅಫ್ಘಾನಿಸ್ತಾನ ಸಹ ತನ್ನ ಸಮರ್ಥ ವೇಗದ ಬೌಲಿಂಗ್ ಪಡೆಯೊಂದಿಗೆ ಪಂದ್ಯಾವಳಿಯಲ್ಲಿ ಆಕರ್ಷಕ ಪ್ರದರ್ಶನ ನೀಡತೊಡಗಿದೆ. ಶಾಪೂರ್ ಜದ್ರಾನ್ ಮತ್ತು ದಾವ್ಲತ್ ಜದ್ರಾನ್ ಸೋದರರ ಮೊನಚಾದ ವೇಗದ ಬೌಲಿಂಗ್ ಅಫ್ಘಾನಿಸ್ತಾನಕ್ಕೆ ನೆರವಾಗಿದೆ. ಇನ್ನು ಸ್ಪಿನ್ ವಿಬಾಗದಲ್ಲಿ ನಾಯಕ ಮೊಹ್ಮದ್ ನಬಿ, ಸಮಿವುಲ್ಲಾ ಶೆನ್ವಾರಿ ಹಾಗೂ ಹಮ್ಜಾ ಹೊಟಾಕ್ ಅವರೊಂದಿಗೆ ವಿಭಿನ್ನ ಪ್ರದರ್ಶನ ಕಂಡುಬರುತ್ತಿದೆ. ಅಲ್ಲದೆ, ಇದೇ ಮೊದಲ ಬಾರಿಗೆ ಏಷ್ಯಾ ಕಪ್ ಪಂದ್ಯಾವಳಿಗೆ ಪ್ರವೇಶ ಮಾಡಿರುವ ಅಫ್ಘಾನಿಸ್ತಾನ ತಂಡ ಆತಿಥೇಯ ಬಾಂಗ್ಲಾದೇಶದ ವಿರುದ್ಧ 32 ರನ್ಗಳ ಅಂತರದಿಂದ ಜಯ ಸಾಧಿಸುವ ಮೂಲಕ, ಟೆಸ್ಟ್ ಆಡುವ ರಾಷ್ಟ್ರದ ವಿರುದ್ಧ ತಮ್ಮ ಮೊದಲ ಜಯ ದಾಖಲಿಸಿದೆ. ಈಗ ಆಫ್ಘಾನ್ ಬೌಲರ್ಗಳು ಈ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಅವರನ್ನು ಗುರಿಯಾಗಿಸಿಕೊಂಡಿದ್ದಾರೆ. ವಿರಾಟ್ ಕೊಹ್ಲಿ ಆಕ್ರಮಣಕಾರಿ ಬ್ಯಾಟಿಂಗ್ ಶೈಲಿ, ಟೀಂ ಇಂಡಿಯಾಕ್ಕೆ ಇಲ್ಲದ ಸ್ಫೂರ್ತಿ ನೀಡಿದೆ. ಆದರೆ, ಅದು ತಂಡಕ್ಕೆ ಜಯ ತಂದುಕೊಡಲು ಸಾಕಾಗುತ್ತಿಲ್ಲ. ಮುಂಬರುವ ವಿಶ್ವ ಟಿ20 ಪಂದ್ಯ ಬಾಂಗ್ಲಾದೇಶದಲ್ಲೇ ನಡೆಯುವ ಹಿನ್ನೆಲೆಯಲ್ಲಿ, ಭಾರತ ತಂಡ ತನ್ನ ಅಂತಿಮ ಲೀಗ್ ಪಂದ್ಯದಲ್ಲಿ ವಿಜಯ ಕಾಣುವುದು ತುಂಬಾ ಮಹತ್ವದ್ದಾಗಿದೆ.
ಬೌಲಿಂಗ್ ವಿಭಾಗದಲ್ಲಿ ಸ್ಪಿನ್ನರ್ ಅಮಿತ್ ಮಿಶ್ರಾ ಅವರು ಪಾಕಿಸ್ತಾನದ ವಿರುದ್ಧ ತಕ್ಕ ಪ್ರದರ್ಶನ ನೀಡಿ ಮಿಂಚಿದ್ದಾರೆ. ಇದು, ತಂಡದ ಕಾಯಂ ಸ್ಪಿನ್ನರ್ ಆರ್. ಅಶ್ವಿನ್ ಅವರ ಸ್ಥಾನಕ್ಕೆ ಆತಂಕ ಉಂಟುಮಾಡಿದೆ.
ಬಾಂಗ್ಲಾದೇಶದ ವಿರುದ್ಧ ಅಚ್ಚರಿ ಜಯ ಸಾಧಿಸಿರುವ ಆಫ್ಘಾನಿಸ್ತಾನ ಪಡೆಯನ್ನು ಯಾವುದೇ ಕಾರಣಕ್ಕೂ ಹಗುರವಾಗಿ ಪರಿಗಣಿಸುವಂತಿಲ್ಲ.
ಭಾರತ: ವಿರಾಟ್ ಕೊಹ್ಲಿ (ನಾಯಕ), ರೋಹಿತ್ ಶರ್ಮಾ, ಶಿಖರ್ ಧವನ್, ಅಜಿಂಕ್ಯ ರಹಾನೆ, ಅಂಬಟಿ ರಾಯಿಡು, ದಿನೇಶ್ ಕಾರ್ತಿಕ್, ರವಿಂದ್ರ ಜಡೇಜಾ, ರವಿಚಂದ್ರನ್ ಅಶ್ವಿನ್, ಅಮಿತ್ ಮಿಶ್ರಾ, ಭುವನೇಶ್ವರ ಕುಮಾರ್, ಶಮಿ, ಚೇತೇಶ್ವರ ಪೂಜಾರ, ಸ್ಟುವರ್ಟ್ ಬಿನ್ನಿ, ವರುಣ್ ಎರಾನ್, ಈಶ್ವರ ಪಾಂಡೆ.
ಅಫ್ಘಾನಿಸ್ತಾನ: ಮೊಹ್ಮದ್ ನಬಿ (ನಾಯಕ), ಮೊಹ್ಮದ್ ಶಹಜಾದ್, ನೂರ್ ಅಲಿ ಜದ್ರಾನ್, ಅಸ್ಗರ್ ಸ್ಟಾನಿಕ್ಜೈ, ನವರೋಜ್ ಮಂಗಲ್, ಸಮಿಲ್ಲಾ ಶೆನ್ವಾರಿ, ನಾಜಿಬುಲ್ಲಾ ಜದ್ರಾನ್, ಮಿರ್ವಾಯಿಸ್ ಅಶ್ರಫ್, ಹಮ್ಜಾ ಹೊಟಾಕ್, ದಾವ್ಲತ್ ಜದ್ರಾನ್, ಶಾಪೂರ್ ಜದ್ರಾನ್, ಹಮಿದ್ ಹಸನ್, ಕರೀಮ್ ಸಾದಿಕ್, ರಹಮತ್ ಶಾ, ಫಾಜಲ್ ನಿಯಾಜಿಯಾ. ಪಂದ್ಯದ ಸಮಯ: ಮಧ್ಯಾಹ್ನ 1: 30ರಿಂದ