ಭಾರತೀಯ ಬಾಕ್ಸಿಂಗ್ ಮೇಲೆ ನಿಷೇಧ
ಲೌಸನ್ನೆ: ಇತ್ತೀಚೆಗೆ ಭಾರತೀಯ ಒಲಿಂಪಿಕ್ಸ್ ಸಮಿತಿಯ ಮೇಲಿನ ನಿಷೇಧ ತೆರವಾದ ಹಿನ್ನಲೆಯಲ್ಲಿ ಸಂತಸಗೊಂಡಿದ್ದ ಭಾರತೀಯ ಕ್ರೀಡಾ ಅಭಿಮಾನಿಗಳಿಗೆ ಈಗ ಮತ್ತೊಮ್ಮೆ ನಿರಾಸೆಯಾಗಿದೆ.
ಈ ಬಾರಿ ಭಾರತೀಯ ಅಮೇಚೂರ್ ಬಾಕ್ಸಿಂಗ್ ಸಂಸ್ಥೆಯು (ಐಎಬಿಎಫ್) ಅಂತಾರಾಷ್ಟ್ರೀಯ ಬಾಕ್ಸಿಂಗ್ ಸಂಸ್ಥೆಯ (ಎಐಬಿಎ) ವ್ಯಾಪ್ತಿಯಿಂದ ತೆಗೆದು ಹಾಕಲಾಗಿದೆ.
ಮತ್ತೊಮ್ಮೆ ಭಾರತೀಯ ಕ್ರೀಡಾ ಕ್ಷೇತ್ರದಲ್ಲಿ ಕಪ್ಪು ಚುಕ್ಕೆಯಾಗಿ ಪರಿಣಮಿಸಲಾಗಿದೆ.
ಐಎಬಿಎಫ್‌ನ ಅಧಿಕಾರಿಗಳು ಕ್ರೀಡೆಯ ಘನತೆ ಹಾಗೂ ಗೌರವಕ್ಕೆ ಧಕ್ಕೆಯಾಗುವಂತೆ ನಡೆದುಕೊಳ್ಳುತ್ತಿರುವ ಹಿನ್ನಲೆಯಲ್ಲಿ ಎಐಬಿಎ ಈ ಕ್ರಮ ತೆಗೆದುಕೊಂಡಿದೆ.
ಇದಲ್ಲದೆ ಹಲವಾರು ವಿಷಯದಲ್ಲಿ ಗೊಂದಲದಿಂದ ಕೂಡಿರುವ ಐಎಬಿಎಫ್ ಬಗೆಗಿನ ಮುಂದಿನ ಕ್ರಮಗಳನ್ನು ಯಾವ ರೀತಿ ತೆಗೆದುಕೊಳ್ಳಬೇಕೆಂಬುದರ ಬಗ್ಗೆ ನಿಖರ ಮಾಹಿತಿ ಇಲ್ಲ ಎಂದು ಎಐಬಿಎ ಹೇಳಿಕೆಯಲ್ಲಿ ತಿಳಿಸಿದೆ.
ಎಐಬಿಎನ ಈ ನಿರ್ಧಾರದಿಂದ ಭಾರತೀಯ ಬಾಕ್ಸರ್‌ಗಳಿಗೆ ಹಾಗೂ ಕೋಚ್‌ಗಳಿಗೆ ಯಾವುದೇ ತೊಂದರೆಗಳಾಗುವುದಿಲ್ಲ. ಇವರು ಅಂತಾರಾಷ್ಟ್ರೀಯ ಸ್ಪರ್ಧೆಗಳಲ್ಲಿ ಎಐಬಿಎ ಧ್ವಜದಡಿ ಭಾಗವಹಿಸಬಹುದಾಗಿದೆ.
ಭಾರತದಲ್ಲಿ ಬಾಕ್ಸಿಂಗ್ ಕ್ರೀಡೆಗೆ ಸಂಬಂಧಿಸಿದಂತೆ ಉದ್ಭವವಾಗಿರುವ ಗೊಂದಲಗಳು, ಸಮಸ್ಯೆಗಳಿಂದಾಗಿ ಭಾರತೀಯ ಅಮೇಚುರ್ ಬಾಕ್ಸಿಂಗ್ ಸಂಸ್ಥೆ ಜತೆಗಿನ ಅಧಿಕೃತ ಸಂಬಂಧವನ್ನು ಅಂತ್ಯಗೊಳಿಸುತ್ತಿರುವುದು ಬೇಸರದ ಸಂಗತಿಯಾಗಿದೆ ಎಂದು ಎಐಬಿಎ ತಿಳಿಸಿದೆ.