ಇಂಡಿಯಾನ ವೆಲ್ಸ್: ಸೋಮ್ದೇವ್ ನಿರ್ಗಮನ
ಇಂಡಿಯಾನ ವೆಲ್ಸ್: ಭಾರತದ ಸೋಮ್ದೇವ್ ದೇವ್ವರ್ಮನ್ ಅವರು ಇಂಡಿಯಾನ ವೆಲ್ಸ್ ಎಟಿಪಿ ಮಾಸ್ಟರ್ಸ್ ಪಂದ್ಯಾವಳಿಯಿಂದ ಸೋತು ನಿರ್ಗಮಿಸಿದ್ದಾರೆ.
78ನೇ ರ್ಯಾಂಕಿಂಗ್ ಹೊಂದಿರುವ ಮತ್ತು ಅಗ್ರಶ್ರೇಯಾಂಕ ಪಡೆದ ಭಾರತದ ಆಟಗಾರ ಪಂದ್ಯಾವಳಿಯ ಮೊದಲ ಸುತ್ತಿನ ಪಂದ್ಯದಲ್ಲಿ ಸ್ಪೇನ್ನ ಡ್ಯಾನಿಯಲ್ ಮೂನಾಜ್- ಡಿ ಲಾ ನಾವಾ ವಿರುದ್ಧ 2-6, 7-5, 3-6 ಸೆಟ್ಗಳಿಂದ ಪರಾಭವ ಹೊಂದಿದರು.ಆದರೆ, ಸೋಮ್ದೇವ್ ಅವರು ಕಳೆದ ವರ್ಷ ನಡೆದ ಫ್ರಾನ್ಸ್ ಓಪನ್ನ ಮೊದಲ ಸುತ್ತಿನಲ್ಲಿ ಡ್ಯಾನಿಯಲ್ ಅವರನ್ನು ಪರಾಭವಗೊಳಿಸಿದ್ದರು.
ಇದರೊಂದಿಗೆ, ಸೋಮ್ದೇವ್ ತಮಗಿಂತ ಕಡಿಮೆ ರ್ಯಾಂಕಿಂಗ್ ಹೊಂದಿರುವ ಸತತ ಎರಡನೇ ಆಟಗಾರನ ವಿರುದ್ಧ ಸೋಲನುಭವಿಸಿದಂತಾಯಿತು. ಈ ಮುನ್ನ ಸೋಮ್ ದುಬೈ ಡ್ಯೂಟಿ ಫ್ರೀ ಚಾಂಪಿಯನ್ಶಿಪ್ನಲ್ಲಿ 137ನೇ ರ್ಯಾಂಕಿಂಗ್ ಹೊಂದಿರುವ ಮಲೇಕಾ ಜಜಿರಿಯಾ ವಿರುದ್ಧ ಸೋಲನುಭವಿಸಿದ್ದರು. ಅಲ್ಲದೆ, ಇಂಡಿಯಾನ ವೆಲ್ಸ್ ಪಂದ್ಯಾವಳಿಯಲ್ಲಿ ಕಳೆದ ವರ್ಷವೂ ಸೋಮ್ದೇವ್ ಮೊದಲ ಸುತ್ತಿನಲ್ಲೇ ಸೋಲನುಭವಿಸಿದ್ದರು.