ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕ್ರೀಡೆ

ದುರ್ಬಲರೆದುರು ಗೆದ್ದದ್ದೇ ಸಮಾಧಾನ

ದುರ್ಬಲ ಅಫ್ಘಾನಿಸ್ತಾನದ ಮೇಲೆ ಸಂಪೂರ್ಣವಾಗಿ ನಿಯಂತ್ರಣ ಸಾಧಿಸುವಲ್ಲಿ ಯಶಸ್ವಿಯಾದ ಟೀಂ ಇಂಡಿಯಾ...

Vishwanath S
Updated On : 6 Mar 2014, 12:32 pm

ಮೀರ್‌ಪುರ: ದುರ್ಬಲ ಅಫ್ಘಾನಿಸ್ತಾನದ ಮೇಲೆ ಸಂಪೂರ್ಣವಾಗಿ ನಿಯಂತ್ರಣ ಸಾಧಿಸುವಲ್ಲಿ ಯಶಸ್ವಿಯಾದ ಟೀಂ ಇಂಡಿಯಾ, ಏಷ್ಯಾ ಕಪ್ ಪಂದ್ಯಾವಳಿಯ ತನ್ನ ಅಂತಿಮ ಲೀಗ್ ಪಂದ್ಯದಲ್ಲಿ 8 ವಿಕೆಟ್ ಅಂತರದಿಂದ ಜಯ ಸಾಧಿಸಿತು.
ಇದರೊಂದಿಗೆ ಭಾರತ ತಂಡ ಲೀಗ್ ಹಂತದಲ್ಲಿ ಆಡಿದ ನಾಲ್ಕು ಪಂದ್ಯಗಳಲ್ಲಿ ಎರಡರಲ್ಲಿ ಸೋತು ಎರಡರಲ್ಲಿ ಜಯ ಸಾಧಿಸಿದಂತಾಗಿದೆ.
ಟಾಸ್ ಗೆದ್ದು ಫೀಲ್ಡಿಂಗ್ ಆಯ್ದುಕೊಂಡ ಭಾರತ ತಂಡ, ಅಫ್ಘಾನಿಸ್ತಾನವನ್ನು 45.2 ಓವರ್‌ಗಳಲ್ಲಿ 159 ರನ್‌ಗಳ ಅಲ್ಪ ಮೊತ್ತಕ್ಕೆ ಕಟ್ಟಿಹಾಕಿತು. ನಂತರ 160 ರನ್‌ಗಳ ಗುರಿ ಬೆನ್ನಟ್ಟಿದ ಭಾರತ, ಕೇವಲ 32.2 ಓವರ್‌ಗಳಲ್ಲಿ 2 ವಿಕೆಟ್ ನಷ್ಟಕ್ಕೆ 160 ರನ್ ಕಲೆ ಹಾಕಿ ಜಯ ಕಂಡುಕೊಂಡಿತು. ಇದರೊಂದಿಗೆ ಭಾರತಕ್ಕೆ ಬೋನಸ್ ಅಂಕವೂ ದೊರಕಿತು. ಆದರೆ, ಈಗಾಗಲೇ ಪಾಕಿಸ್ತಾನ ಮತ್ತು ಶ್ರೀಲಂಕಾ ತಂಡಗಳು ಪಂದ್ಯಾವಳಿಯ ಫೈನಲ್ ಪ್ರವೇಶಿಸಿರುವುದರಿಂದ, ಭಾರತಕ್ಕೆ ಇದು ಪ್ರತಿಷ್ಠೆಯ ಜಯ ಮಾತ್ರವಾಗಿತ್ತು.
ಆರಂಭಿಕರಾದ ಶಿಖರ್ ಧವನ್ (60) ಮತ್ತು ಅಜಿಂಕ್ಯ ರಹಾನೆ (56) ಆಕರ್ಷಕ ಅರ್ಧ ಶತಕ ಗಳಿಸುವುದರೊಂದಿಗೆ ತಂಡ ಸುಲಭವಾಗಿ ಜಯದ ದಡ ಸೇರುವಂತೆ ಮಾಡಿದರು.
ಧವನ್ ಅರ್ಧ ಶತಕದಲ್ಲಿ 1 ಸಿಕ್ಸರ್ ಮತ್ತು 4 ಬೌಂಡರಿಗಳು ಸೇರಿದ್ದರೆ, ರಹಾನೆ ಅರ್ಧ ಶತಕದಲ್ಲಿ 5 ಬೌಂಡರಿಗಳು ಸೇರಿದ್ದವು. ಇಬ್ಬರ ಜತೆಯಾಟದಲ್ಲಿ ಮೊದಲ ವಿಕೆಟ್‌ಗೆ 121 ರನ್ ಗಳಿಸಿದರು. ಮೊದಲ ವಿಕೆಟ್ ಪಡೆಯುವುದೇ ದುಸ್ತರವಾಗಿದ್ದ ಆಫ್ಘನ್ ಬೌಲರ್‌ಗಳಿಗೆ, ಅಂಪೈರ್ ಬಿಲ್ಲಿ ಬೌಡೆನ್ ಪರಿಹಾರ ನೀಡಿದರು. ಕಾರಣ 24ನೇ ಓವರ್‌ನಲ್ಲಿ ತಪ್ಪು ನಿರ್ಣಯ ನೀಡುವ ಮೂಲಕ, ಅಜಿಂಕ್ಯ ರಹಾನೆ ಅವರು ಮಿರ್ವಾಯಿಸ್ ಅಶ್ರಫ್ ಎಸೆತದಲ್ಲಿ ಎಲ್‌ಬಿಗೆ ಬಲಿಯಾಗದಿದ್ದರೂ, ಅಂಪೈರ್ ತೀರ್ಮಾನಕ್ಕೆ ಬಲಿಯಾದರು.
ನಂತರ, ಕ್ರೀಸ್‌ನ ಇನ್ನೊಂದು ಬದಿಯಲ್ಲಿ ಆಫ್ಘನ್ ಬೌಲರ್‌ಗಳನ್ನು ಕಾಡುತ್ತಿದ್ದ ಶಿಖರ್ ಧವನ್ ಅವರನ್ನು 25ನೇ ಓವರ್‌ನಲ್ಲಿ ಬೌಲ್ಡ್ ಮಾಡುವಲ್ಲಿ ಅಫ್ಘಾನಿಸ್ತಾನದ ಮೊಹ್ಮದ್ ನಬಿ ಯಶಸ್ವಿಯಾದರು. ಅಲ್ಲಿಗೆ ಭಾರತ 2 ವಿಕೆಟ್ ನಷ್ಟಕ್ಕೆ 123 ರನ್ ಗಳಿಸಿತ್ತು. ನಂತರ ಬಂದ ರೋಹಿತ್ ಶರ್ಮಾ (ಅಜೇಯ 18) ಮತ್ತು ದಿನೇಶ್ ಕಾರ್ತಿಕ್ (ಅಜೇಯ 21) ಭಾರತ ತಂಡವನ್ನು ಜಯದ ಅಂಚಿಗೆ ತಲುಪಿಸಿದರು.ಇದಕ್ಕೂ ಮುನ್ನ, ಅಫ್ಘಾನಿಸ್ತಾನ ಬ್ಯಾಟಿಂಗ್ ಮಾಡುತ್ತಿದ್ದಾಗ 6ನೇ ಓವರ್‌ನಲ್ಲಿ ನವ್ರೋಜ್ ಮಂಗಲ್ (5) ಬೌಲ್ಡ್ ಮಾಡಿದ ಮೊಹ್ಮದ್ ಶಮಿ ಅವರು ಮೊದಲ ವಿಕೆಟ್ ದೊರಕಿಸಿಕೊಟ್ಟರು. ಅನನುಭವಿ ಬ್ಯಾಟ್ಸ್‌ಮನ್‌ಗಳಿಂದ ಕೂಡಿರುವ ಆಫ್ಘಾನಿಸ್ತಾನ ಭಾರತದ ಬೌಲಿಂಗ್ ದಾಳಿಗೆ ನಲಗುವ ಮೂಲಕ ಕೇವಲ 30 ರನ್‌ಗಳಿಗೆ 4 ವಿಕೆಟ್ ಕಳೆದುಕೊಂಡು ತೀವ್ರ ಸಂಕಷ್ಟದಲ್ಲಿ ಸಿಲುಕಿತ್ತು. ಭಾರತದ ಪರ ಆಕರ್ಷಕ ಬೌಲಿಂಗ್ ಮಾಡಿದ ರವಿಂದ್ರ ಜಡೇಜಾ 30 ರನ್ ನೀಡಿ 4 ವಿಕೆಟ್ ಕಬಳಿಸಿದರೆ, ರವಿಚಂದ್ರನ್ ಅಶ್ವಿನ್ ಅವರು 31 ರನ್ ನೀಡಿ 3 ವಿಕೆಟ್ ಪಡೆದರು. ಮೊಹ್ಮದ್ ಶಮಿ 2 ಮತ್ತು ಅಮಿತ್ ಮಿಶ್ರಾ 1 ವಿಕೆಟ್ ತಮ್ಮದಾಗಿಸಿಕೊಂಡರು.
ಆದರೆ, ಅಫ್ಘಾನಿಸ್ತಾನಕ್ಕೆ ಅಪದ್ಭಾಂದವರಾಗಿದ್ದು, 8ನೇ ಕ್ರಮಾಂಕದಲ್ಲಿ ಅಂಗಣಕ್ಕಿಳಿದು ಅರ್ಧ ಶತಕ ಸಿಡಿಸಿದ ಸಮಿವುಲ್ಲಾ ಶೆನ್ವಾರಿ (50). ಒಂದು ಹಂತದಲ್ಲಿ 95 ರನ್‌ಗಳಿಗೆ 7 ವಿಕೆಟ್ ಕಳೆದುಕೊಂಡು ತೀವ್ರ ಸಂಕಷ್ಟದಲ್ಲಿ ಸಿಲುಕಿಕೊಂಡಿದ್ದ ಅಫ್ಘಾನಿಸ್ತಾನ 150 ರನ್‌ಗಳ ಗಡಿ ದಾಟುವಂತೆ ನೋಡಿಕೊಂಡರು. 73 ಎಸೆತಗಳನ್ನು ಎದುರಿಸಿದ ಅವರ ಅರ್ಧ ಶತಕದಲ್ಲಿ 1 ಸಿಕ್ಸರ್ ಮತ್ತು 6 ಬೌಂಡರಿಗಳು ಸೇರಿದ್ದವು.
ಭಾರತದ ಬೌಲಿಂಗ್‌ನಲ್ಲಿ ಮಿಂಚಿದ ರವೀಂದ್ರ ಜಡೇಜಾ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.
ಸ್ಕೋರ್ ವಿವರ
ಅಫ್ಘಾನಿಸ್ತಾನ 45.2 ಓವರ್‌ಗಳಲ್ಲಿ 159ಕ್ಕೆ ಆಲೌಟ್
ನೂರ್ ಅಲಿ ಜದ್ರಾನ್ ಸಿ ಕೊಹ್ಲಿ ಬಿ ಜಡೇಜಾ 31 (35)
ನಾವ್ರೋಜ್ ಮಂಗಲ್ ಬಿ ಮೊಹ್ಮದ್ ಶಮಿ 5 (16)
ರಹ್ಮತ್ ಶಾ ಎಲ್‌ಬಿ ಜಡೇಜಾ 9 (23)
ಅಸ್ಘರ್ ಸ್ಟಾನಿಕ್ಜೈ ಸಿ ಮಿಶ್ರಾ ಬಿ ಜಡೇಜಾ 5 (7)
ನಜಿಬುಲ್ಲಾ ಜದ್ರಾನ್ ಸಿ ಬಿನ್ನಿ ಬಿ ಅಶ್ವಿನ್ 5 (14)
ಮೊಹ್ಮದ್ ನಬಿ ಸಿ ಕಾರ್ತಿಕ್ ಬಿ ಜೇಡಾ 6 (20)
ಮೊಹ್ಮದ್ ಶಹಾಜಾದ್ ಎಲ್‌ಬಿ ಅಶ್ವಿನ್ 22 (28)
ಸಮಿವುಲ್ಲಾ ಶೆನ್ವಾರಿ ಎಲ್‌ಬಿ ಮೊಹ್ಮದ್ ಶಮಿ 50 (73)
ಮಿರ್ವಾಯಿಸ್ ಅಶ್ರಫ್ ಸಿ ಕೊಹ್ಲಿ ಬಿ ಮಿಶ್ರಾ 9 (26)
ಶಾಪೂರ್ ಜದ್ರಾನ್ ಎಲ್‌ಬಿ ಅಶ್ವಿನ್ 1 (13)
ದಾವ್ಲತ್ ಜದ್ರಾನ್ ಅಜೇಯ 2 (17)
ಇತರೆ ಲೆಗ್‌ಬೈ-2, ವೈಡ್-12 (14)
ವಿಕೆಟ್ ಪತನ: 1-30, 2-54, 3-55, 4-60, 5-64, 6-83,
7-95, 8-111, 9-137, 10-159.
ಬೌಲಿಂಗ್: ಭುವನೇಶ್ವರ 8-1-25-0, ಮೊಹ್ಮದ್ ಶಮಿ 7.2-0-50-2, ಅಮಿತ್ ಮಿಶ್ರಾ    10-1-21-1, ಆರ್. ಜಡೇಜಾ 10-1-30-4, ಆರ್. ಅಶ್ವಿನ್ 10-3-31-3.    
ಭಾರತ 32.2 ಓವರ್‌ಗಳಲ್ಲಿ 2 ವಿಕೆಟ್‌ಗೆ 160
ಅಜಿಂಕ್ಯ ರಹಾನೆ ಎಲ್‌ಬಿ ಮಿರ್ವಾಯಿಸ್ ಅಶ್ರಫ್ 56 (66)
ಶಿಖರ್ ಧವನ್ ಬಿ ಮೊಹ್ಮದ್ ನಬಿ 60 (78)
ರೋಹಿತ್ ಶರ್ಮಾ ಅಜೇಯ 18 (24)
ದಿನೇಶ್ ಕಾರ್ತಿಕ್ ಅಜೇಯ 21 (27)
ಇತರೆ ಲೆಗ್‌ಬೈ-1, ವೈಡ್-3, ನೋಬಾಲ್ 1.
ವಿಕೆಟ್ ಪತನ: 1-121, 2-123.
ಬೌಲಿಂಗ್: ಮೊಹ್ಮದ್ ನಬಿ 10-0-30-1, ಶಾಪೂರ್ ಜದ್ರಾನ್ 6-0-25-0,     ದಾವ್ಲತ್ ಜದ್ರಾನ್ 5-0-25-0, ಸಮಿವುಲ್ಲಾ ಶೆನ್ವಾರಿ 4.2-0-32-0,     ಮಿರ್ವಾಯಿಸ್ ಅಶ್ರಫ್ 5-0-26-1, ರಹಮತ್ 2-0-21-0.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement