ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕ್ರೀಡೆ

ಸ್ಪಾಟ್ ಫಿಕ್ಸಿಂಗ್ ಪ್ರಕರಣ: ಚಂಡಿಲಾಗೆ ಹೆಚ್ಚುವರಿ ಸಮಯ ನೀಡಿದ ಬಿಸಿಸಿಐ

Vishwanath S
Updated On : 6 Mar 2014, 12:33 pm

ನವದೆಹಲಿ: ಕಳೆದ ಐಪಿಎಲ್ ಆವೃತ್ತಿಯಲ್ಲಿ ನಡೆದ ಸ್ಪಾಟ್ ಫಿಕ್ಸಿಂಗ್ ಪ್ರಕರಣದಲ್ಲಿ ತಪ್ಪಿತಸ್ಥರಾಗಿರುವ ರಾಜಸ್ಥಾನ ರಾಯಲ್ಸ್ ತಂಡದ ಸ್ಪಿನ್ನರ್ ಅಜಿತ್ ಚಂಡಿಲಾ ಅವರಿಗೆ, ಪ್ರತಿಕ್ರಿಯೆ ನೀಡಲು ಬಿಸಿಸಿಐ ಶಿಸ್ತು ಸಮಿತಿ ಹೆಚ್ಚುವರಿ ಸಮಯ ನೀಡಿದೆ.
ಬಿಸಿಸಿಐ ಭ್ರಷ್ಟಾಚಾರ ನಿಗ್ರಹ ಪಡೆಯ ಮುಖ್ಯಸ್ಥ ರವಿ ಸವಾನಿ ಅವರು ಸ್ಪಾಟ್ ಫಿಕ್ಸಿಂಗ್ ಪ್ರಕರಣದಲ್ಲಿ ಚಂಡಿಲಾ ಭಾಗಿಯಾಗಿದ್ದಾರೆ ಎಂದು ಸಾಬೀತುಪಡಿಸಿದ್ದಾರೆ. ಅದಕ್ಕೆ ಪ್ರತಿಕ್ರಿಯೆ ನೀಡಲು ಚಂಡಿಲಾರಿಗೆ ಮಾರ್ಚ್ 12ರವರೆಗೆ ಸಮಯ ನೀಡಲಾಗಿದೆ.
ಬಿಸಿಸಿಐ ಅಧ್ಯಕ್ಷ ಎನ್. ಶ್ರೀನಿವಾಸನ್, ರಾಜೀವ್ ಶುಕ್ಲಾ ಹಾಗೂ ಶಿವಲಾಲ್ ಯಾದವ್ ಒಳಗೊಂಡ ಶಿಸ್ತು ಸಮಿತಿ ಎದುರಿಗೆ ಚಂಡಿಲಾ ಹಾಜರಾಗಿದ್ದರು. ಇದೇ ಸಮಯದಲ್ಲಿ ಆರೋಪಗಳಿಗೆ ಉತ್ತರಿಸಲು ಸಮಯ ನೀಡಬೇಕು ಎಂದು ಚಂಡಿಲಾ ಮನವಿ ಮಾಡಿಕೊಂಡರು. 'ಹೆಚ್ಚುವರಿ ಸಮಯ ನೀಡಲು ಆಜಿತ್ ಚಂಡಿಲಾ ಮಾಡಿಕೊಂಡ ಮನವಿಗೆ ಸಮ್ಮತಿ ನೀಡಲು ಶಿಸ್ತು ಸಮಿತಿ ತೀರ್ಮಾನಿಸಿದೆ.
ಮಾರ್ಚ್ 12, 2014ರವರೆಗೆ ಚಂಡಿಲಾ ಅವರಿಗೆ ಹೆಚ್ಚುವರಿ ಸಮಯ ನೀಡಲಾಗಿದೆ' ಎಂದು ಬಿಸಿಸಿಐ ಕಾರ್ಯದರ್ಶಿ ಸಂಜಯ್ ಪಟೇಲ್ ತಮ್ಮ ಹೇಳಿಕೆಯಲ್ಲಿ ತಿಳಿಸಿದರು.
'ನನಗೆ ಯಾರ ಬೆಂಬಲವೂ ಇಲ್ಲ. ಶಿಸ್ತು ಸಮಿತಿ ಯಾವ ತೀರ್ಮಾನ ತೆಗೆದುಕೊಳ್ಳಲಿದೆ ಎಂಬುದು ನನಗೆ ಗೊತ್ತಿದೆ. ನನಗೆ ಆಜೀವ ನಿಷೇಧ ಹೇರಬಹುದು. ಆದರೆ, ನಾನು ಯಾವುದೇ ರೀತಿಯ ತಪ್ಪು ಮಾಡಿಲ್ಲ' ಎಂದು ಶಿಸ್ತು ಸಮಿತಿ ಭೇಟಿ ಮಾಡಿದ ನಂತರ ಚಂಡಿಲಾ ತಿಳಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement