8ರ ಘಟ್ಟಕ್ಕೆ ಪೇಸ್-ಸ್ಟೆಪಾನೆಕ್
ಇಂಡಿಯಾನ ವೆಲ್ಸ್: ಭಾರತದ ಹಿರಿಯ ಟೆನಿಸ್ ಆಟಗಾರ ಲಿಯಾಂಡರ್ ಪೇಸ್ ಹಾಗೂ ರಾಡೆಕ್ ಸ್ಟೆಪಾನಿಕ್ ಜೋಡಿಯು ತಮ್ಮ ಜಯದ ಹಾದಿಯಲ್ಲಿ ಮುಂದುವರಿದಿದ್ದು, ಇಂಡಿಯಾನ ವೆಲ್ಸ್ ಓಪನ್ ಟೆನಿಸ್ ಪಂದ್ಯಾವಳಿಯಲ್ಲಿ ಕ್ವಾರ್ಟರ್ಫೈನಲ್ಗೆ ಪ್ರವೇಶಿಸಿದ್ದಾರೆ.
ಮಂಗಳವಾರ ನಡೆದ ಪುರುಷರ ಡಬಲ್ಸ್ ವಿಭಾಗದ ಪ್ರೀಕ್ವಾಟರ್ಫೈನಲ್ ಪಂದ್ಯದಲ್ಲಿ ಪೇಸ್ ಹಾಗೂ ಸ್ಟೆಪಾನೆಕ್ ಜೋಡಿಯು ತಮ್ಮ ಎದುರಾಳಿ ಜೊನಾಥನ್ ಎರ್ಲಿಚ್ ಹಾಗೂ ರಿಚರ್ಡ್ ಗಾಸ್ಕೆಟ್ ಜೋಡಿಯನ್ನು 6-3, 7-5 ನೇರ ಸೆಟ್ಗಳ ಅಂತರದಲ್ಲಿ ಸುಲಭ ಗೆಲವು ದಾಖಲಿಸಿದ್ದಾರೆ.
1 ಗಂಟೆ 16 ನಿಮಿಷಗಳ ಕಾಲ ನಡೆದ ಪಂದ್ಯದಲ್ಲಿ ಸಂಪೂರ್ಣ ನಿಯಂತ್ರಣಸಾಧಿಸಿದ ಪೇಸ್ ಹಾಗೂ ಸ್ಟೆಪಾನೆಕ್ ಜೋಡಿಯು ಎದುರಾಳಿಯ ಮೇಲೆ ಪ್ರಾಬಲ್ಯ ಮೆರೆದರು. ಪಂದ್ಯದ ಮೊದಲ ಸೆಟ್ನಲ್ಲಿ ಎದುರಾಳಿಗೆ ಹೆಚ್ಚು ಅವಕಾಶ ನೀಡಿದ ಈ ಜೋಡಿ 6-3 ಅಂತರದ ಮುನ್ನಡೆ ಪಡೆಯಿತು. ಎರಡನೇ ಸೆಟ್ನಲ್ಲಿ ಸ್ವಲ್ಪ ಮಟ್ಟಿಗೆ ಪ್ರತಿರೋಧ ಎದುರಾಯಿತಾದರೂ ಅಂತಿಮವಾಗಿ ಪೇಸ್ ಜೋಡಿಯೂ 7-5 ಅಂತರದಲ್ಲಿ ಮೇಲುಗೈ ಸಾಧಿಸಿ ಗೆಲವಿನ ನಗೆ ಬೀರಿದರು.
ಇಂಡೊ-ಜೆಕ್ ಜೋಡಿಯು ತಮ್ಮ ಕ್ವಾರ್ಟರ್ಫೈನಲ್ ಪಂದ್ಯದಲ್ಲಿ ಸ್ವಿಜರ್ಲೆಂಡ್ನ ರೋಜರ್ ಫೆಡರರ್ ಹಾಗೂ ಸ್ಟಾನಿಸ್ಲಾಸ್ ವಾವ್ರಿಂಕಾ ಜೋಡಿಯನ್ನು ಎದುರಿಸಲಿದೆ.